ಕೋಲಾರ

ಗ್ರಾಪಂ ಅಧ್ಯಕ್ಷ ಅವಿಶ್ವಾಸ:ಸಭೆ ಕರೆಯಲು ಆಗ್ರಹ

Published On :

ಬಂಗಾರಪೇಟೆ: ಆಲಂಬಾಡಿ ಜೋತೇನಹಳ್ಳಿ ಗ್ರಾಪಂ ಅಧ್ಯಕ್ಷ ಜುಂಜನಹಳ್ಳಿ ನಾರಾಯಣಸ್ವಾಮಿ ವಿರುದ್ದ ಅವಿಶ್ವಾಸ ಮಂಡಿಸಲು ಸಭೆ ಕರೆಯುವಂತೆ 10 ಸದಸ್ಯರು ಕೋಲಾರ ಉಪ ವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ಎರಡು ತಿಂಗಳ ಹಿಂದೆಯೂ ಅವಿಶ್ವಾಸ ಗೊತ್ತುವಳಿ ಮಂಡಿಸಲು ಸಭೆ ಕರೆಯುವಂತೆ ಕೋಲಾರದ ಎಸಿ ಮಂಜುನಾಥ್ ಅವರಿಗೆ ಮನವಿ ಸಲ್ಲಿಸಿದ್ದರು. ಆದರೆ, ಅವಿಶ್ವಾಸದ ಸಭೆಗೆ ಯಾಮೊಬ್ಬ ಸದಸ್ಯರೂ ಬಾರದ ಕಾರಣ ಸಭೆಯನ್ನು ರದ್ದುಗೊಳಿಸಲಾಗಿತ್ತು. ಆಗ ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದ ಸದಸ್ಯರು ಈಗ ಕಾಂಗ್ರೆಸ್ ಶಾಸಕರೊಂದಿಗೆ ಗುರುತಿಸಿಕೊಂಡಿದ್ದಾರೆ. ಹಾಗಾಗಿ, ಅಧ್ಯಕ್ಷರ ಖುರ್ಚಿಗೆ ಸಂಚಕಾರ ಬಂದಿದೆ. ಕಳೆದ ಬಾರಿ ಅಧ್ಯಕ್ಷ ಜುಂಜನಹಳ್ಳಿ ನಾರಾಯಣಸ್ವಾಮಿ ವಿರುದ್ಧ ಸ್ಪರ್ಧಿಸಿ ಪರಾಭವಗೊಂಡಿದ್ದ ಸದಸ್ಯ ಮುನಿಸ್ವಾಮಿ ನೇತೃತ್ವದಲ್ಲಿ ಹತ್ತು ಸದಸ್ಯರು ಸಹಿ ಹಾಕಿ ಮತ್ತೆ ಅವಿಶ್ವಾಸ ಮಂಡನೆಗೆ ಅವಕಾಶ ಕಲ್ಪಿಸುವಂತೆ ಕೋರಿದ್ದಾರೆ. ಆದರೆ, ಕಾನೂನು ಪ್ರಕಾರ ಒಮ್ಮೆ ಅವಿಶ್ವಾಸ ಸಭೆ ಕರೆದ ಬಳಿಕ ಮತ್ತೆ 6 ತಿಂಗಳವರೆಗೂ ಕರೆಯುವಂತಿಲ್ಲ. ಹಾಗಾಗಿ ಹಾಲಿ ಅಧ್ಯಕ್ಷ ಜಂಜನಹಳ್ಳಿ ನಾರಾಯಣಸ್ವಾಮಿ ಸಹ ಈ ಬಗ್ಗೆ  ಎಸಿ ಮಂಜುನಾಥ್ ಅವರಿಗೆ ಮನವರಿಕೆ ಮಾಡಲು ಶುಕ್ರವಾರ ಎಸಿ ಕಚೇರಿಗೆ ತೆರಳಿದ್ದರು ಎನ್ನಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.