ವಿಜೃಂಭಣೆಯ ಕರಗ ಮಹೋತ್ಸವ
ಶಿಡ್ಲಘಟ್ಟ: ಮೇಲೂರು ಗ್ರಾಮದ ಶ್ರೀ ಧರ್ಮರಾಯಸ್ವಾಮಿ ದೇವಾಲಯದ ಪುರಾಣ ಪ್ರಸಿದ್ದ ಶ್ರೀ ಧರ್ಮರಾಯಸ್ವಾಮಿ ದ್ರೌಪದಮ್ಮನವರ ಕರಗ ಮಹೋತ್ಸವ ವಿಜೃಂಭಣೆಯಿಂದ ನಡೆಯಿತು.
ಕಳೆದ ಐದು ದಿನಗಳಿಂದ ನಡೆದ ದ್ವಜಾರೋಹಣ, ಹಸಿಕರಗ, ಆರತಿ ಸೇವೆ, ಕಲ್ಯಾಣೋತ್ಸವ, ಸೇರಿದಂತೆ ಹೂವಿನಕರಗದ ಶಕ್ತಿ ಉತ್ಸವ ನೆರವೇರಿತು. ವಹ್ನಿಕುಲ ಕುಲಸ್ಥರಿಂದ ಪೂಜಾ ಕಾರ್ಯಗಳು ನೆರವೇರಿದವು.
ಕರಗವನ್ನು ಹೊತ್ತು ಸಾಗಿದ ಕರಗದ ಪೂಜಾರಿ ಧರ್ಮೇಂದ್ರ ಮಂಗಳವಾಧ್ಯಗಳು ಹಾಗೂ ತಮಟೆವಾದನಗಳಿಗೆ ನರ್ತನ ಮಾಡುತ್ತಾ ಸುತ್ತಮುತ್ತಲ ಗ್ರಾಮಗಳಿಂದ ಬಂದಿದ್ದ ಜನರನ್ನು ರಂಜಿಸಿದರು.
ಬೀದಿ ಬೀದಿಯಲ್ಲೂ ಸಂಚರಿಸಿ, ಪೂಜೆ ಸ್ವೀಕರಿಸಿದರು. ಗ್ರಾಮದ ಚೆಂಗಲರಾಯರೆಡ್ಡಿ ವೃತ್ತದಲ್ಲಿ ಕೋಲು ವರಸೆ, ಬೆಂಕಿಬಾರಟೆ, ಕತ್ತಿವರಸೆಗಳನ್ನು ಏರ್ಪಡಿಸಲಾಗಿತ್ತು.
ಗ್ರಾಪಂ ಅಧ್ಯಕ್ಷೆ ಮುನಿರತ್ನಮ್ಮ ತಿರುಮಲೇಶ್, ಸಂಘದ ಅಧ್ಯಕ್ಷ ಎಂ.ಡಿ.ಚಂದ್ರಪ್ಪ, ಕಾರ್ಯದರ್ಶಿ ಎನ್.ಶ್ರೀನಿವಾಸ್, ಖಜಾಂಚಿ ಪೈಲ್ವಾನ್ ಎಂ.ವಿ.ಗೋವಿಂದಪ್ಪ, ಆರ್.ಮುರಳಿ, ಕೆ.ಮಂಜುನಾಥ್, ಕಂಬದಹಳ್ಳಿ ವಿ.ನಾರಾಯಣಪ್ಪ, ಎಸ್.ಕೆ. ಮಯೂರ, ಜಯರಾಮರೆಡ್ಡಿ, ಆರ್.ವಿಜಯಕುಮಾರ್, ಪಾರ್ಥಸಾರಥಿ, ಎಂ.ನಯನಪ್ಪ, ಶ್ರೀನಿವಾಸಮೂತರ್(ಪುಲಿ), ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

