ದೇಶದ ಅಭಿವೃದ್ಧಿಗೆ ಉನ್ನತ ಶಿಕ್ಷಣ ಅಗತ್ಯ
ಮಾಲೂರು: ದೇಶವು ಅರ್ಥಿಕವಾಗಿ ಸಾಂಸ್ಕೃತಿಕವಾಗಿ ಅಭಿವೃದ್ಧಿಯಾಗಬೇಕಾದರೆ ಉನ್ನತ್ತ ಶಿಕ್ಷಣ ಅಗತ್ಯ. ಹಾಗಾಗಿ ದೇಶದಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವ ಅಗತ್ಯವಿದೆ ಎಂದು ಹೈಕೋರ್ಟ್ ನಿವೃತ್ತ ನ್ಯಾ.ನಾಗಮೋಹನ್ ದಾಸ್ ಹೇಳಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ 25ನೇ ವಾರ್ಷಿಕೋತ್ಸವದ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ನಾಗರಿಕ ಸಮಾಜ ನಿರ್ಮಾಣಕ್ಕೆ ಶಿಕ್ಷಣ ಅಗತ್ಯ. ಸ್ವಾತಂತ್ರ್ಯ ಪೂರ್ವದಲ್ಲಿ ಶೇ.25ರಷ್ಟಿದ್ದ ಇದ್ದ ದೇಶದಲ್ಲಿದ್ದ ಸಾಕ್ಷರತೆ ಈಗ ಶೇ.75 ದಾಟಿದೆ. ಅಂದು ದೇಶದಲ್ಲಿ 24 ವಿವಿಗಳು 500 ಕಾಲೇಜುಗಳಿದ್ದವು. ಈಗ ನಾಲ್ಕುನೂರು ವಿವಿಗಳು ಹಾಗೂ 20 ಸಾವಿರ ಕಾಲೇಜುಗಳಿದ್ದರೂ ಉನ್ನತ ಶಿಕ್ಷಣಕ್ಕೆ ಹೋಗುತ್ತಿರುವವರ ಸಂಖ್ಯೆ ಕೇವಲ ಶೇ.15 ರಷ್ಟು ಮಾತ್ರ ಎಂದು ಹೇಳಿದರು. ಪ್ರಾಂಶುಪಾಲ ಚಂದ್ರಶೇಖರ್ ನಂಗಲಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಪ್ರಾಂಶುಪಾಲ ಚಂದ್ರಮೋಹನ್, ರವಿ ಕುಮಾರ್ ಮಾತನಾಡಿದರು.
ಇದೇ ಸಂದರ್ಭದಲ್ಲಿ ಬೆಂಗಳೂರು ವಿ.ವಿ.ಯ ಘಟಿಕೋತ್ಸವದಲ್ಲಿ 7 ಚಿನ್ನದ ಪದಕದೊಂದಿಗೆ ಪ್ರಥಮ ರ್ಯಾಂಕ್ ಗಳಿಸಿದ ಇಲ್ಲಿನ ಕಾಲೇಜು ವಿದ್ಯಾರ್ಥಿಯಾಗಿದ್ದ ಸಿ.ಎಂ.ತಿಮ್ಮರಾಯಪ್ಪರನ್ನು ಅತ್ಮೀಯವಾಗಿ ಸನ್ಮಾನಿಸಲಾಯಿತು. ಇದೇ ಕಾಲೇಜಿನಲ್ಲಿ ಈ ಹಿಂದೆ ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸಿದ್ದ ಚಂದ್ರಮೋಹನ್,ನಟರಾಜ್, ರವಿಕುಮಾರ್, ಡಾ.ಫಾರೂಖಿ, ನರಸಿಂಹ ಮೂರ್ತಿ ಹಾಗೂ ನೂತನ ಕಾಲೇಜಿಗೆ ಲ್ಯಾಬ್ ಸೌಲಭ್ಯವನ್ನು ಕಲ್ಪಿಸಿಕೊಟ್ಟ ದಾನಿ ಬೀಸಪ್ಪ ಅವರನ್ನೂ ಸನ್ಮಾನಿಸಲಾಯಿತು.
ಕಾಲೇಜಿನ 25 ನೇ ವಾರ್ಷಿಕೋತ್ಸವದ ಅಂಗವಾಗಿ ಹೂರತಂದಿರುವ ಬಯಲು ಮಂಟಪ ವನ್ನು ನ್ಯಾ.ನಾಗ್ಮೋಹನ್ ದಾಸ್ ಬಿಡುಗಡೆ ಮಾಡಿದರು. ಉಪಾನ್ಯಾಸಕರಾದ ಡಾ.ಮುನಿನಾರಾಯಣಪ್ಪ, ಶಿವಮೂರ್ತಿ, ಅನಂತಮೂರ್ತಿ, ಜಯರಾಮ ರೆಡ್ಡಿ, ವಿಶ್ವೇಶ್ವರಯ್ಯ, ಅಮೃತಮ್ಮ, ಶಾಂತಮ್ಮ, ಶ್ರೀನಿವಾಸ್, ಗಣೇಶ್ ಇದ್ದರು. ಕವಿತಾ ಸ್ವಾಗತಿಸಿದರು. ಮೀನಾ ಕುಮಾರಿ ಕಾರ್ಯಕ್ರಮ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

