ಕೋಲಾರ

ಪೂನಾ ಒಪ್ಪಂದ ದಲಿತರ ಪಾಲಿಗೆ ಕರಾಳ ದಿನ: ವಿಷಾದ

Published On :

ಗೌರಿಬಿದನೂರು: ದಲಿತರು ಮೂಲ ಸೌಕರ್ಯಕ್ಕಾಗಿ  ಹೋರಾಟ ಮಾಡುವ ದುಸ್ಥಿತಿ ಬಂದಿರುವುದು ಶೋಚನೀಯ ಎಂದು ಬೆಳಗಾವಿ ಪ್ರಾಧ್ಯಾಪಕ ಡಾ.ವಿ. ವೆಂಕಟೇಶ್ ಖಾನಾಪುರ  ವಿಷಾದ ವ್ಯಕ್ತ ಪಡಿಸಿದರು.
ಗೌತಮ ಬುದ್ಧ ಸಾಮಾಜಿಕ ಮತ್ತು ಸಾಂಸ್ಕೃತಿಕ ಕಲಾ ಬಳಗದ ವತಿಯಿಂದ ಅಂಬೇಡ್ಕರ್ ಜಯಂತಿ ಅಂಗವಾಗಿ ವಿಚಾರಣಾ ಸಂಕಿರಣ ಹಾಗೂ ಪೂನಾ ಒಪ್ಪಂದ ನಾಟಕ ಪ್ರದರ್ಶನದಲ್ಲಿ ಮಾತನಾಡಿ, ಅಂಬೇಡ್ಕರ್ ಚಿಂತನೆಗಳನ್ನು ಮುಂದಿಟ್ಟುಕೊಂಡು ಪ್ರಾರಂಭವಾದ ಚಳುವಳಿಗಳು ಆಶಯಗಳನ್ನು ಈಡೇರಿಸುವಲ್ಲಿ ಸಂಪೂರ್ಣ ವಿಫಲವಾಗಿದೆ. ಇದಕ್ಕೆ ಕಾರಣ ದಲಿತ ಮುಖಂಡರಲ್ಲಿ ಸ್ವಾರ್ಥ ಹಾಗೂ ಬಿನ್ನಾಭಿಪ್ರಾಯ ಎಂದರು. ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಎಚ್.ಎನ್. ಸನಂದ್ ಕುಮಾರ್ ಮಾತನಾಡಿ, ದಲಿತ ಮತ್ತು ಶೋಷಿತರ ಆಸ್ತಿ ಶಿಕ್ಷಣ. ಶಿಕ್ಷಣದಿಂದ ಮಾತ್ರ  ಸಂವಿಧಾನದಲ್ಲಿ ಹಕ್ಕು ಪಡೆಯಲು ಸಾಧ್ಯ ಎಂದರು. ಕಾರ್ಯಕ್ರಮದಲ್ಲಿ ಹಾಸನ ಜಿಲ್ಲೆ, ಹೊಳೆನರಸೀಪುರ ಜಾಗೃತಿ ಬಳಗದಿಂದ ಪೂನಾ ಒಪ್ಪಂದ ನಾಟಕ ನಡೆಸಿಕೊಡಲಾಯಿತು.
ವೃತ್ತ ನಿರೀಕ್ಷಕ ಕೆ. ನಾಗರಾಜು, ಮಾ.ಕ. ರಾಮಚಂದ್ರ, ಆನೂಡಿ ನಾಗಾರಾಜು, ಎಂ.ಆರ್. ಸತ್ಯನಾರಾಯಣ, ಎಚ್.ಎಲ್. ವೆಂಕಟೇಶ್, ಬಿ.ಕೆ. ನರಸಿಂಹಮೂರ್ತಿ, ಎಚ್.ಎಸ್. ನಂಜುಂಡಪ್ಪ, ಕಲಾ ತಂಡದ ರಾಮಕೃಷ್ಣ, ಶಿಕ್ಷಕರಾದ ಓಬಳೇಶ್, ಪಿಡಿಚಲಹಳ್ಳಿ ವೆಂಕಟೇಶ್, ಕೆ. ನಂಜುಂಡಪ್ಪ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.