ಕೋಲಾರ

'ನನಗ್ಯಾಕೋ ಡೌಟ್‌' ನಾಟಕ ಪ್ರದರ್ಶನ ಯಶಸ್ವಿ

Published On :

ಗುಡಿಬಂಡೆ: ನನಗ್ಯಾಕೋ ಡೌಟ್ ಹಾಸ್ಯ ನಾಟಕ ವೀಕ್ಷಿಸಿದ ಪ್ರೇಕ್ಷಕರನ್ನು ಖುಷಿ ಪಡಿಸುವಲ್ಲಿ ಐಶ್ವರ್ಯ ಕಲಾನಿಕೇತನದ ಕಲಾವಿದರು ಯಶಸ್ವಿಯಾದರು.
ಪಟ್ಟಣದ ಸರ್ಕಾರಿ ಬಾಲಕರ ಪ್ರೌಢಶಾಲಾ ಆವರಣದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ನಿಂದ ಆಯೋಜಿಸಿದ್ದ ತೃತೀಯ ಕನ್ನಡ ಸಾಹಿತ್ಯ ಸಮ್ಮೇಳನದ ಸಂಜೆ ಕಾರ್ಯಕ್ರಮದ ಪ್ರಯುಕ್ತ ಚಿಕ್ಕಬಳ್ಳಾಪುರದ ಐಶ್ವರ್ಯ ಕಲಾನಿಕೇತನ ತಂಡದಿಂದ ನಡೆದ ಬಿ.ಆರ್. ಲಕ್ಷ್ಮಣ್‌ರಾವ್ ವಾಚಿಸಿ, ಮದುಸೂಧನ್ ಕನೇಕಲ್ ನಿರ್ದೇಶನದ ನನಗ್ಯಾಕೋ ಡೌಟ್ ನಾಟಕ ಪ್ರೇಕ್ಷಕರ ಚಪ್ಪಾಳೆ ಗಿಟ್ಟಿಸುವಲ್ಲಿ ಯಶಸ್ವಿಯಾಯಿತು.
ನಾಟಕದಲ್ಲಿ ಕಲಾವಿದರಾದ ರಾಜೇಶ್ ಕಶ್ಯಪ್, ಕೆ. ರೋಹಿಣಿ, ರಾಘವೇಂದ್ರ ನಾಡಿಗ್, ಎಮ್.ಎಸ್. ಮಂಜುಳ, ರಾಜಶೇಖರ ಮೂರ್ತಿ, ಎಚ್. ಗೀತ, ಪ್ರವೀಣ್, ಹಿನ್ನಲೆ ಸಂಗೀತ ಸಂಯೋಜಕ ತೇಜಸ್ವಿ, ನಿರ್ವಹಣೆ ಜಿ.ವಿ. ಪ್ರಸನ್ನ ಕುಮಾರ್, ರಂಗ ಸಜ್ಜಿಕೆ ಬೀಚಗಾನಹಳ್ಳಿ ಸಿದ್ದಪ್ಪ, ಪ್ರಕಾಶ್ ಇದ್ದರು.
ಇದೇ ಸಂದರ್ಭದಲ್ಲಿ ಕಲಾವಿದರನ್ನು ಕಸಾಪ ಅಧ್ಯಕ್ಷ ಸ.ನ. ನಾಗೇಂದ್ರ, ಶ್ರೀರಾಮಪ್ಪ, ಬಿ. ಮಂಜುನಾಥ, ವಕೀಲ ಜಿ.ವಿ. ವಿಶ್ವನಾಥ್ ಸನ್ಮಾನಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.