ಸಾಹಿತ್ಯಾಭಿಮಾನಿಗಳನ್ನು ರಂಜಿಸಿದ ಕವಿಗೋಷ್ಠಿ
ಗುಡಿಬಂಡೆ: ಪಟ್ಟಣದಲ್ಲಿ ತಾಲೂಕು ಕಸಾಪ ವತಿಯಿಂದ ನಡೆದ ತೃತೀಯ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಏರ್ಪಡಿಸಿದ್ದ ಕವಿಗೋಷ್ಠಿ ನೆರೆದಿದ್ದ ಸಭಿಕರನ್ನು ಸೂಜಿಗಲ್ಲಿನಂತೆ ಆಕರ್ಷಿಸಿತು.
ಗೋಷ್ಠಿಯಲ್ಲಿ ಸುಮಾರು 20ಕ್ಕೂ ಹೆಚ್ಚು ಕವಿಗಳು ಭಾಗವಹಿಸಿ ಪ್ರಚಲಿತ ವಿದ್ಯಮಾನಗಳು, ಸಾಮಾಜಿಕ ಸಮಸ್ಯೆಗಳು, ಕನ್ನಡ ಭಾಷೆ, ನೆಲ, ಜಲದ ಕುರಿತು ರಚಿಸಿದ ಸ್ವಾರಸ್ಯಕರ ಕವನಗಳನ್ನು ವಾಚಿಸಿದರು.
ಸಾಹಿತ್ಯ ಅಭಿರುಚಿ: ಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಯುವ ಕವಿ ಹಾಗೂ ತಾಲೂಕು ವಚನ ಸಾಹಿತ್ಯ ಪರಿಷತ್ ಆಧ್ಯಕ್ಷ ಪ್ರೆಸ್ ಸುಬ್ಬರಾಯಪ್ಪ, ಇಂದಿನ ಯುವ ಜನಾಂಗ ಹಾಗೂ ಸಮಾಜ ಸದಭಿರುಚಿಯ ಸಾಹಿತ್ಯಪ್ರೇಮವನ್ನು ರೂಢಿಸಿಕೊಳ್ಳುವ ಅವಶ್ಯಕತೆಯಿದೆ. ವಿಪರ್ಯಾಸದ ಸಂಗತಿಯೆಂದರೆ ಬಹಳಷ್ಟು ಯುವಜನತೆ ಅರ್ಥವಿಲ್ಲದ ಸಿನಿಮಾ ಹಾಡುಗಳು, ಪಾಶ್ಚಾತ್ಯ ಸಂಗೀತಕ್ಕೆ ಮಾರು ಹೋಗಿ, ದೇಶಿ ಸಂಸ್ಕೃತಿ ಮತ್ತು ಸಾಹಿತ್ಯವನ್ನು ಕಡೆಗಣಿಸುತ್ತಿದ್ದಾರೆ. ಹೀಗಾಗಿ ಸಮಾಜ ಹಾಗೂ ಸಮುದಾಯಕ್ಕೆ ಉತ್ತಮ ಸಂದೇಶ ನೀಡುವ ಬರಹ, ಸಾಹಿತ್ಯದ ಬಗ್ಗೆ ಒಲವು ಕಡಿಮೆಯಾಗುತ್ತಿದೆ. ಇದೊಂದು ಅಪಾಯಕಾರಿ ಬೆಳವಣಿಗೆಯಾಗಿದ್ದು, ಕಡಿವಾಣ ಹಾಕಬೇಕಾದ ಅಗತ್ಯವಿದೆಯೆಂದು ನುಡಿದರು.
ಗೋಷ್ಠಿಯಲ್ಲಿ ಚು.ಸಾ.ಪ ಘಟಕದ ಅಧ್ಯಕ್ಷ ಆರ್. ವೆಂಕಟಾಚಲಯ್ಯ, ಸಿರಿಗನ್ನಡ ವೇದಿಕೆ ಘಟಕದ ಅಧ್ಯಕ್ಷ ಮ.ಗ. ಹೆಗಡೆ, ದೂರವಾಣಿ ಗಂಗಾಧರ್, ಶೈಲಜಾ ನಾಗೇಂದ್ರ ವಿ. ರಾಜಶೇಖರ್, ಸಂಧ್ಯಾ ಗಂಗಾಧರ್, ಲತಾ ಸುರೇಶ್, ಗುಡಿಬಂಡೆ ಫಯಾಜ್, ವಿ. ಸುಬ್ರಮಣ್ಯ, ಹೀನಾಕೌಸರ್, ಕೆ. ಗೋವಿಂದಪ್ಪ, ಬಾಲಕೃಷ್ಣ, ಸದಾಶಿವರೆಡ್ಡಿ ಮುಂತಾದವರು ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

