ಕೋಲಾರ

ಬೇಡಿಕೆಗಳನ್ನಿಟ್ಟು ಪೂಜಿಸುವುದು ಸರಿಯೇ?

Published On :

ಕೋಲಾರ: ಭಕ್ತಿ ಜ್ಞಾನ ಮತ್ತು ವೈರಾಗ್ಯ ಇದ್ದವರಿಗೆ ದೇವರು ಸಂಪತ್ತು ಅನುಭವಿಸಲು ಅವಕಾಶ ನೀಡುತ್ತಾನೆ. ಯಾರು ತನಗೆ ಅದು ಬೇಕು,ಇದು ಬೇಕು ಎಂದು ಬೇಡಿಕೆಗಳನ್ನು ಇಟ್ಟು ಪೂಜಿಸುತ್ತಾನೋ ಅಂತಹವರಿಗೆ ದೇವರು ಒಲಿಯುವುದಿಲ್ಲವೆಂದು ವಿಭೂತಿಪುರ ಸಂಸ್ಥಾನ ಮಠಾಧೀಶ ಡಾ. ಮಹಾಂತಶಿವಯೋಗಿ ಶಿವಾಚಾರ್ಯ ಮಹಾಸ್ವಾಮಿಗಳು ಅಭಿಪ್ರಾಯಪಟ್ಟರು.
ಕಳೆದ 12 ವರ್ಷಗಳಿಂದ ತಮ್ಮ ಸಂಸ್ಥಾನದಿಂದ ಲೋಕ ಕಲ್ಯಾಣಕ್ಕಾಗಿ ನಡೆಸಿಕೊಂಡು ಬರುತ್ತಿರುವ ಮನೆ ಮನಗಳಲ್ಲಿ ಶ್ರಾವಣ ಮಾಸದ 8ನೇ ಕಾರ್ಯಕ್ರಮವನ್ನು ನಗರದ ಬಿ.ಆರ್.ಎಂ. ಬಳಗದ ಬಿ.ಎಂ. ಪರಮಶಿವಯ್ಯನವರ ಮನೆಯಲ್ಲಿ ನೆರವೇರಿಸಿ ಅವರು ಮಾತನಾಡಿದರು.
ಭಕ್ತಿ ಬೇರೆ ಆಚರಣೆ ಬೇರೆ, ಭಕ್ತಿ ಎಂದರೆ ಪ್ರೀತಿ, ಪ್ರೇಮ,ವಾತ್ಸಲ್ಯ. ದೇವರನ್ನು ಯಾರು ನಿಷ್ಕಾಮವಾಗಿ ಪೂಜಿಸುತ್ತಾರೋ ಅಂತಹವರಿಗೆ ದೇವರು ಒಳ್ಳೆಯದನ್ನು ಮಾಡುತ್ತಾನೆ. ನಿಜವಾದ ಭಕ್ತಿ ಇಲ್ಲದೆ ಬೇಡಿಕೆಗಳನ್ನು ಈಡೇರಿಸುವಂತೆ ಪೂಜಿಸಿದರೆ ಅದು ವ್ಯವಹಾರವಾಗುತ್ತದೆ ಎಂದು ಸೂಚ್ಯವಾಗಿ ನುಡಿದರು.
ಬದುಕಿಗೆ ಬೇಕಾದ ಜ್ಞಾನ ವಿದ್ಯಾಸಂಸ್ಥೆಗಳಲ್ಲಿ ಸಿಗುವುದಿಲ್ಲ. ಜಗತ್ತೆಲ್ಲವೂ ಶಿವಮಯ ಪ್ರತಿಯೊಬ್ಬರಲ್ಲೂ ಶಿವನಿದ್ದಾನೆ ಎಂಬ ಜ್ಞಾನ ಹೊಂದಿದರೆ ಯಾವುದೇ ಜಗಳ ಅಸಮಾಧಾನಗಳಿಗೆ ಎಡೆ ಇರುವುದಿಲ್ಲ. ದ್ವೇಷ ಮಾಡುವ ಪ್ರಮೇಯ ಇರುವುದಿಲ್ಲ ಎಂದರು.
ಎಲ್ಲವೂ ನನ್ನದಲ್ಲ ನಾನೇನು ತಂದಿಲ್ಲ ಹೋಗುವಾಗ ತೆಗೆದುಕೊಂಡು ಹೋಗುವುದಿಲ್ಲ ಎಂಬ ಮನೋಭಾವದಿಂದ ಇದ್ದುದೆಲ್ಲವನ್ನೂ ಸಮಾಧಾನವಾಗಿ ಇಲ್ಲೇ ಅನುಭವಿಸುತ್ತಾ ವ್ಯಾಮೋಹವಿಲ್ಲದೆ ಜೀವನ ಸಾಗಿಸುವುದೇ ವೈರಾಗ್ಯ ಎಂದು ವ್ಯಾಖ್ಯಾನಿಸಿದರು.
ಶರಣ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಬಿ.ಎಂ. ಚನ್ನಪ್ಪ, ಥಿಯಾಸಾಫಿಕಲ್ ಸೊಸೈಟಿ ಅಧ್ಯಕ್ಷ ಬಿ.ಎಂ. ಬಸಪ್ಪ, ಬಿ.ಆರ್.ಎಂ ಬಳಗದ ಸದಸ್ಯರು, ಬೆಮೆಲ್ನ ಬಸವ ಸಮಿತಿಯ ಸದಸ್ಯರು ಭಾಗವಹಿಸಿದ್ದರು. ಶ್ರೀಮಠದ ನಿರ್ವಾಹಕ ಬಸವರಾಜ ಸ್ವಾಗತಿಸಿ, ಶಿವಶಂಕರಶಾಸ್ತ್ರಿ ಮತ್ತು ತಂಡದವರಿಂದ ವಚನ ಗಾಯನ ನಡೆಯಿತು. ಹರಿಕಥಾ ವಿದ್ವಾನ್ ಜ್ಞಾನಮೂರ್ತಿ ಪ್ರಾಸ್ತಾವಿಕ ಭಾಷಣ, ಪತ್ರಕರ್ತ ಬಿ. ಸುರೇಶ್ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.