ಮಳೆ ಬರದಿದ್ದರೂ ನೀರು ತುಂಬಿಸಿ
ಚಿಕ್ಕಬಳ್ಳಾಪುರ: ಅವರು ಹೇಳಿದ ರೀತಿಯಲ್ಲಿ ನೀರು ಬರಬೇಕೆಂದು ಕಾದು ಕುಳಿತರೆ ಸುಮಾರು 30 ವರ್ಷ ಬೇಕಾಗುತ್ತದೆ. ಅಲ್ಲಿಯವರೆಗೂ ನೀರು ಬೇಡವೇ ಎಂದು ಕೇಂದ್ರ ಸಚಿವ ಎಂ. ವೀರಪ್ಪ ಮೊಯ್ಲಿ ನೀರಾವರಿ ಹೋರಾಟಗಾರರ ವಿರುದ್ಧ ವ್ಯಂಗ್ಯವಾಡಿದರು.
ಜಿಪಂ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಯಾವುದೋ ಮೂಲದಿಂದ ನೀರನ್ನು ಹರಿದು ಬಂದರೆ ಸಾಕು ಎಂಬ ಭಾವನೆ ಹೊಂದಿರಬೇಕು.ನಾವು ಹೇಳಿದ್ದರಿಂದಲೇ ಬರಬೇಕು ಎನ್ನುವುದು ಸರಿಯಲ್ಲ. ಅವರಿಗೆ ಕಾಯುವ ತಾಳ್ಮೆಯಿದ್ದರೂ ಜನರ ಸಮಸ್ಯೆ ಬೇಗ ಬಗೆಹರಿಯವುದು ಮುಖ್ಯ ಎಂದರು.
ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಳವಾಗಿದ್ದು ಅಂತರ್ಜಲ ಮಟ್ಟವನ್ನು ಹೆಚ್ಚಿಸುವ ಮತ್ತು ನೀರಾವರಿ ಮೂಲಗಳನ್ನು ಕಾಪಾಡುವ ಕೆಲಸವಾಗಬೇಕು. ಮಳೆ ಬಂದಿಲ್ಲ, ಕೆರೆಗಳು ತುಂಬಿ ಎಂದು ಕೂರಬಾರದು. ಚೆಕ್ ಡ್ಯಾಮ್ಗಳನ್ನು ನಿರ್ಮಿಸಿ, ಕೆರೆಗಳನ್ನು ಅಭಿವೃದ್ಧಿಪಡಿಸಬೇಕು, ನೀರು ಇಲ್ಲದಿದ್ದರೂ, 10 ವರ್ಷ ಮಳೆ ಬಾರದಿದ್ದರೂ ಪರವಾಗಿಲ್ಲ, 10 ವರ್ಷವಾದ ನಂತರ ಮಳೆ ಬಂದರೂ ಆ ನೀರು ಸಮರ್ಪಕವಾಗಿ ನಿಲ್ಲುವಂತೆ ಮಾಡಬೇಕೆಂದ ಅವರು, ನೆರೆ ಬಂದಾಗ ಎಚ್ಚೆತ್ತುಕೊಳ್ಳುವುದಲ್ಲ, ಮುಂದೆ ನೆರೆ ಬಂದರೂ ತೊಂದರೆಯಾಗದಂತೆ ನೋಡಿಕೊಳ್ಳುವುದು ಮುಖ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಮಾರುಕಟ್ಟೆಯಲ್ಲಿ ನಮೋ ಟೀ ಸ್ಟಾಲ್
ಮುಳಬಾಗಲು: ಪಟ್ಟಣದ ಕೆ. ಭಯ್ಯಪಲ್ಲಿ ರಸ್ತೆಯ ತರಕಾರಿ ಮಾರುಕಟ್ಟೆ ಬಳಿ ಬಿಜೆಪಿ ಕಾರ್ಯಕರ್ತರು ಸಾರ್ವಜನಿಕರಿಗೆ ಟೀ ಕೊಡುವ ಮೂಲಕವಾಗಿ ಭಾನುವಾರ ಸಂಜೆ ನಮೋ ಟೇ ಸ್ಟಾಲ್ ಆರಂಭಿಸಿದರು.
ತಾಲೂಕು ಬಿಜೆಪಿ ಅಧ್ಯಕ್ಷ ಅತ್ತಿಪಲ್ಲಿ ವೆಂಕಟರವಣ, ಮಾಜಿ ಅಧ್ಯಕ್ಷ ಸಿ.ಕೆ. ರಾಧವಲ್ಲಭಗೌಡ, ಪ್ರಧಾನ ಕಾರ್ಯದರ್ಶಿ ಎಚ್.ಎಸ್. ಹರೀಶ್, ವಿ. ಜಯಪ್ಪ, ಯುವಮೋರ್ಚ ಅಧ್ಯಕ್ಷ ಶ್ರೀನಿವಾಸ್, ಭಜರಂಗಿ ಚಲಪತಿ, ಬಸವರಾಜ್ ಅಗರ ಸುರೇಶ್, ವೇಗಮೊಡಗು ಶಿವ, ಅಲಂಗೂರು ವೆಂಕಟರಾಮೇಗೌಡ, ಚಲಪಬತಿ, ನಾಗರಾಜ್,ರಮೇಶ್, ರಘು ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

