ಕೋಲಾರ

ಮಹಿಳೆಯರಿಗೆ ಶೇ.33 ಮೀಸಲಾತಿಗೆ ಆಗ್ರಹ

Published On :

ಕೋಲಾರ: ರಾಜಕೀಯದಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿಗೆ ಹತ್ತಾರು ವರ್ಷಗಳಿಂದ ಹೋರಾಟಗಳು ನಡೆಯುತ್ತಿವೆ. ಆದರೆ, ಸ್ತ್ರೀಯರಿಗೆ ರಾಜಕೀಯದಲ್ಲಿ ಹೆಚ್ಚಿನ ಸ್ಥಾನಮಾನ ಸಿಕ್ಕಲ್ಲಿ ನಮ್ಮ ಶಕ್ತಿ ಕುಗ್ಗಬಹುದೆಂಬ ಕಾರಣಕ್ಕೆ ಕೆಲವು ರಾಜಕೀಯ ಪಕ್ಷಗಳ ಮುಖಂಡರು ಮೀಸಲಾತಿ ಜಾರಿಗೆ ಅಡ್ಡಿಪಡಿಸುತ್ತಿದ್ದಾರೆಂದು ಕೋಲಾರದ ಸರ್ಕಾರಿ ಕಾನೂನು ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಡಾ.ಪ್ರಸನ್ನಕುಮಾರಿ ಆರೋಪಿಸಿದರು.
ನಗರದ ಟಿ. ಚೆನ್ನಯ್ಯ ರಂಗಮಂದಿರದಲ್ಲಿ ರಾಜ್ಯಮಟ್ಟದ ಜನಪರ ಉತ್ಸವದ ಅಂಗವಾಗಿ ಸೋಮವಾರ ಹಮ್ಮಿಕೊಂಡಿದ್ದ ಮಹಿಳಾ ಸಾಕ್ಷರತೆ ಮತ್ತು ಸಬಲೀಕರಣ ಕುರಿತ ವಿಚಾರ ಸಂಕಿರಣದಲ್ಲಿ ಅವರು ಮಾತನಾಡುತ್ತಿದ್ದರು. ದೇಶದ ಒಟ್ಟು ಜನಸಂಖ್ಯೆಯಲ್ಲಿ ಮಹಿಳೆಯರು ಅರ್ಧದಷ್ಟು ಇದ್ದಾರೆ. ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಶೇ. 33ರಷ್ಟು ಮೀಸಲಾತಿ ನೀಡಲಾಗಿತ್ತು. ಆದರೆ, ಅದು ಸಹ ನಾಮಕಾವಸ್ತೆ. ಮಹಿಳೆಯ ಗಂಡನೋ,ಮಾವ, ಅಣ್ಣ ತಮ್ಮಂದಿರು ಮಹಿಳೆಯನ್ನು ಗೆಲ್ಲಿಸಿ ರಾಜ್ಯಭಾರವನ್ನು ಪುರುಷರು ಮಾಡುತ್ತಿದ್ದಾರೆಂದು ಟೀಕಿಸಿದರು.
ಸ್ತ್ರೀಶಕ್ತಿ ಏನೆಂಬುದು ಜಗತ್ತಿಗೆ ಗೊತ್ತಿದೆ.ಹಾಗಾಗಿ ವಿಧಾನಸಭೆ, ಸಂಸತ್ನಲ್ಲಿ ಶೇ.33ರಷ್ಟು ಮೀಸಲು ನೀಡಲು ಮೀನಮೇಷ ಎಣಿಸುತ್ತಿದ್ದಾರೆ ಎಂದರು.
ಮಹಿಳಾ ಸಾಕ್ಷರತಾ ಪ್ರಮಾಣ ಶೇ.64ರಷ್ಟು ಮಾತ್ರ ಇರುವುದರಿಂದ ಹಕ್ಕುಗಳ ಬಗ್ಗೆ ಸರಿಯಾಗಿ ತಿಳಿಯಲಾಗುತ್ತಿಲ್ಲ. ಮಹಿಳೆಯನ್ನು ಅಭಿವೃದ್ಧಿ ಪೂರ್ವದ ಕೆಲಸಕ್ಕೆ ಸೀಮಿತಗೊಳಿಸಿಕೊಂಡು ಬರಲಾಗಿತ್ತು. ಬ್ರಿಟೀಷರು ಹಳ್ಳಿ ಮಕ್ಕಳೂ ಶಿಕ್ಷಣ ಪಡೆಯಬೇಕೆಂದು ಹಂಟರ್ ಆಯೋಗ, ಮಕಾಲೆ ವರದಿ ಜಾರಿಗೆ ಒತ್ತು ನೀಡಿದ್ದರು. ರಾಜಾರಾಮ್ಮೋಹನ್ ರಾಯ್, ಜ್ಯೋತಿ ಬಾಪುಲೆ, ಸಾವಿತ್ರಿಬಾಪುಲೆ ಅಂತಹವರು ಹೆಣ್ಣುಮಕ್ಕಳ ಪರ ಹೋರಾಟ ನಡೆಸಿದ್ದರು ಎಂದು ಸ್ಮರಿಸಿದರು. ಮಹಿಳಾ ಸಬಲೀಕರಣಕ್ಕೆ ಸರ್ಕಾರ ಸ್ತ್ರೀ ಪುರಸ್ಕೃತ ಉತ್ತೇಜನಗಳನ್ನು ನೀಡುತ್ತಾ ಬಂದಿದೆ.ಆದರೆ  ಮಹಿಳೆಯರಿಗೆ ತಮ್ಮ ಹಕ್ಕುಗಳ ಬಗ್ಗೆ ಅರಿವಿಲ್ಲ. ಈ ಬಗ್ಗೆ ಹೆಣ್ಣು ಮಕ್ಕಳಿಗೆ ತಿಳಿವಳಿಕೆ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಬೇಕೆಂದು ಸರ್ಕಾರಕ್ಕೆ ಸಲಹೆ ನೀಡಿದರು. ಜನವಾದಿ ಮಹಿಳಾ ಸಂಘಟನೆಯ ರಾಜ್ಯಾಧ್ಯಕ್ಷೆ ವಿ. ಗೀತಾ ಮಾತನಾಡಿ,  ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎಂಬ ನಾಣ್ಮುಡಿ ಇದೆ. ಕಲಿಕೆಯಿಂದ ಸ್ವಾಭಿಮಾನ ಹೆಚ್ಚಾದಲ್ಲಿ ದೇಶವೇ ಗಟ್ಟಿಯಾಗುತ್ತದೆ ಎಂದು ಹೇಳಿದರು.
ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಹೆಚ್ಚಾಗುತ್ತಿದೆ,ಆತ್ಮಹತ್ಯೆ,ಕೊಲೆಗಳು ನಿರಂತರವಾಗಿ ಸಾಗುತ್ತಿದೆ. ಹೆಣ್ಣುಮಕ್ಕಳಿಗೆ ಲಗಾಮು ಹಾಕಿ ಬೆಳೆಸುವ ಮನಸ್ಸುಗಳಿಂದ ದೈರ್ಯವಂತರಾಗಲು ಸಾಧ್ಯವಾಗುತ್ತಿಲ್ಲ, ಕೆಲವು ಸಂದರ್ಭದಲ್ಲಿ ಹೆಣ್ಣು ಮಕ್ಕಳು ದಾರಿ ತಪ್ಪಲು ಕಾರಣವಾಗುತ್ತಿರುವುದರಿಂದ ಇದನ್ನು ಕೆಲವರು ದುರ್ಬಳಕೆ ಮಾಡಿಕೊಂಡು ಹೆಣ್ಣಿನ ಶೋಷಣೆ ಮುಂದುವರೆಸಿದ್ದಾರೆಂದು ವಿಷಾಧಿಸಿದರು.
ಬಳ್ಳಾರಿಯ ಬುರ್ರಕಥೆ ಕಲಾವಿದೆ ದರೋಜಿ ಈರಮ್ಮ ವಿಚಾರಗೋಷ್ಠಿಗೆ ಚಾಲನೆ ನೀಡಿದರು.ಜಿ.ಪಂ.ಮಾಜಿ ಅಧ್ಯಕ್ಷೆ, ಹಾಲಿ ಸದಸ್ಯೆ ಮಂಗಮ್ಮ ಮುನಿಸ್ವಾಮಿ ಅಧ್ಯಕ್ಷತೆ ವಹಿಸಿದ್ದರು.ಮಹಿಳಾ ಜಾಗೃತಿ ವೇದಿಕೆಯ ಮಮತಾರೆಡ್ಡಿ, ಜಿ.ಪಂ. ಉಪಾಧ್ಯಕ್ಷೆ ಅಲುವೇಲಮ್ಮ, ಜಿಪಂ ಸದಸ್ಯೆ ಮುತ್ಯಾಲಮ್ಮ, ಮಹಿಳಾ ಮತ್ತು ಮಕ್ಕಳ  ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕಿ ಶಕುಂತಲಾ, ವಿಕಲಚೇತನರ ಕಲ್ಯಾಣಾಧಿಕಾರಿ ನಾಗಮಣಿ ಇದ್ದರು.

ಪ್ರತ್ಯೇಕ ಅಪಘಾತ; 6 ಮಂದಿಗೆ ಗಾಯ

ಮಾಲೂರು: ಪಟ್ಟಣ ವ್ಯಾಪ್ತಿಯಲ್ಲಿ ನಡೆದ ಎರಡು ಪ್ರತ್ಯೇಕ ರಸ್ತೆ ಅಪಘಾತದಲ್ಲಿ ಆರು ಜನರ ಕಾಲು ಮುರಿದಿರುವ ಘಟನೆ ಸೋಮವಾರ ಘಟಿಸಿದೆ.
ಪಟ್ಟಣದ ಹೂರವಲಯದ ಜೆಎಸ್ಎಸ್ ವಿದ್ಯಾ ಸಂಸ್ಥೆ ಬಳಿ ವೇಗವಾಗಿ ಬಂದ ಟಿಪ್ಪರ್ ಆಟೋಗೆ ಡಿಕ್ಕಿ ಹೊಡೆದ ಪರಿಣಾಮ ಆಟೋದಲ್ಲಿ ಪ್ರಯಾಣಿಸುತ್ತಿದ್ದ ಆಂಧ್ರ ಮೂಲದ ಸುಧಾಕರ್, ರಮಾ ಕುಮಾರಿ, ದೀಪ, ನಾಗೇಶ್ರ ಕಾಲುಗಳು ಜಖಂ ಗೊಂಡಿದ್ದು, ಕೋಲಾರ ಜಾಲಪ್ಪ ಆಸ್ವತ್ರೆಗೆ ಸೇರಿಸಲಾಗಿದೆ. ಮತ್ತೊಂದು ಪ್ರಕರಣದಲ್ಲಿ ಪಟ್ಟಣದ ಬಸ್ಡಿಪೋ ಸಮೀಪ ಸರ್ಕಾರಿ ಬಸ್ವೂಂದು ಬೈಕ್ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕಿನಲ್ಲಿ ಪ್ರಯಾಣಿಸುತ್ತಿದ್ದ ವಕ್ಕಲೇರಿಯ ನಾಗೇಂದ್ರ ಹಾಗೂ ಹಿಂಬದಿ ಕುಳಿತಿದ್ದ ನಾಗೇಶ್ರ ಕಾಲು ಮುರಿದಿದ್ದು, ಅವರಿಬ್ಬರನ್ನು ಕೋಲಾರದ ಜಾಲಪ್ಪ ಆಸ್ವತ್ರೆಗೆ ಸಾಗಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.