ಕೋಲಾರ

ಬಂಗಾರಪೇಟೆ ತಾಪಂ ವೆಂಕಟರತ್ನಮ್ಮ ಕೈಗೆ?

Published On :

ಬಂಗಾರಪೇಟೆ: ಬುಧವಾರ ಇಲ್ಲಿನ ತಾಪಂ ಆಡಳಿತ ಮಂಡಳಿಯ ಕೊನೆ ಅವಧಿಗೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ನಡೆಯಲಿದ್ದು ಅಧ್ಯಕ್ಷರಾಗಿ ಕಾಂಗ್ರೆಸ್ನ ವೆಂಕಟರತ್ನಮ್ಮ ಅವಿರೋಧವಾಗಿ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ. ಉಪಾಧ್ಯಕ್ಷ ಸ್ಥಾನಕ್ಕೆ ಮಾತ್ರ ಬಿಜೆಪಿ ಪಾಲಾಗಲಿದ್ದು ಯಾರಾಗುವರು ಎಂಬುದು ಇನ್ನೂ ಹೆಸರು ಅಂತಿಮಗೊಂಡಿಲ್ಲ.
ಮೊದಲ ಎರಡು ಅವಧಿಯಲ್ಲಿ ತಾಪಂನಲ್ಲಿ ಬಿಜೆಪಿ ಆಡಳಿತ ನಡೆಸಿತ್ತು, 25ಸದಸ್ಯ ಬಲದ ತಾಪಂನಲ್ಲಿ ಬಿಜೆಪಿ 14, ಕಾಂಗ್ರೆಸ್ 8 ಜೆಡಿಎಸ್ 2 ಹಾಗೂ 1ಪಕ್ಷೇತರ ಸದಸ್ಯರು ಬಲ ಹೊಂದಿದ್ದು, ಬಿಜೆಪಿಗೆ ಸ್ಪಷ್ಟ ಬಹುಮತವಿದೆ. ಆದರೆ ಕೊನೆ ಅವಧಿಯಲ್ಲಿ ಅಧ್ಯಕ್ಷರ ಸ್ಥಾನದ ಮೀಸಲಾತಿಯಲ್ಲಿ ಬಿಜೆಪಿಗೆ ಸದಸ್ಯರ ಬಲವಿದ್ದರೂ ಅಧಿಕಾರ ಕಳೆದುಕೊಳ್ಳುವಂತಾಗಿದೆ. ಅಧ್ಯಕ್ಷ ಸ್ಥಾನಕ್ಕೆ ಎಸ್ಟಿ ಮಹಿಳೆ ನಿಗದಿಪಡಿಸಲಾಗಿದೆ. ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮಹಿಳೆ ನಿಗದಿಯಾಗಿದೆ.
ಕಾಂಗ್ರೆಸ್ಗೆ ಸದಸ್ಯರ ಬಲ ಇಲ್ಲದಿದ್ದರೂ ಮೀಸಲಾತಿ ವರದಾನವಾಗಿದೆ. ಎಸ್ಟಿ ಮಹಿಳೆ ಕಾಂಗ್ರೆಸ್ನಲ್ಲಿ ಮಾತ್ರ ಇರುವುದರಿಂದ ಕೊನೆ ಅವಧಿಯಲ್ಲಿ ತಾಪಂ ಆಡಳಿತದ ಚುಕ್ಕಾಣಿ ಕಾಂಗ್ರೆಸ್ ಪಾಲಾಗಲಿದೆ. ಈ ಹಿಂದೆ ಕಾಂಗ್ರೆಸ್ನಲ್ಲಿ ಶಾಸಕರಾಗಿದ್ದ ಎಂ. ನಾರಾಯಣಸ್ವಾಮಿ ಕೈಗೆ ಕೈ ಕೊಟ್ಟು ಬಿಜೆಪಿಗೆ ಹೋದರಿಂದ ತಾಪಂ ಆಡಳಿತ ಸಹ ಅದಲು ಬದಲಾಯಿತು. ಈಗ ಮತ್ತೆ ಇಲ್ಲಿ ಎಸ್.ಎನ್. ನಾರಾಯಣಸ್ವಾಮಿ ಕಾಂಗ್ರೆಸ್ನ ಶಾಸಕರಾಗಿರುವುದರಿಂದ ತಾಪಂ ಆಡಳಿತವನ್ನು ತಮ್ಮ ಕೈವಶ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ತಾಪಂ ಚುನಾವಣೆ ಬಳಿಕ ಎಪಿಎಂಸಿ ಆಡಳಿತ ಮಂಡಳಿಯನ್ನೂ ಕೈ ಪಾಲಾಗುವಂತೆ ಮಾಡಲು ರೂಪರೇಷೆಗಳನ್ನು ರೂಪಿಸಲಾಗುತ್ತಿದೆ, ಮುಂದೆ ನಡೆಯಲಿರುವ ಗ್ರಾಮ ಪಂಚಾಯ್ತಿ, ಚುನಾವಣೆಯಲ್ಲಿಯೂ ಕಾಂಗ್ರೆಸ್ ಪಾರುಪತ್ಯ ತೋರಿಸಲು ಈಗನಿಂದಲೇ ಶಾಸಕರು ಕಾರ್ಯತಂತ್ರಗಳಲ್ಲಿ ತೊಡಗಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.