ಕೋಲಾರ

ಕುಡಿಯುವ ನೀರು ಪೂರೈಕೆಗೆ ಕ್ರಮ: ಗೋವಿಂದೇಗೌಡ

Published On :

ಟೇಕಲ್: ಟೇಕಲ್ನ ಕೆ.ಜಿ. ಹಳ್ಳಿ ಗ್ರಾಪಂನ ಆವರಣದಲ್ಲಿ ನಡೆದ ಗ್ರಾಮಸಭೆಯು ಬಹುತೇಕ ಕೆ.ಜಿ.ಹಳ್ಳಿಯ ಕುಡಿಯುವ ನೀರಿನ ವಿಷಯ ಅತೀ ತಾರಕಕ್ಕೇರಿ ಗ್ರಾಮಸ್ಥರಿಗೂ ಹಾಗೂ ಅಧಿಕಾರವರ್ಗದವರಿಗೂ ಮಾತಿನ ಚಕಮಕಿ ನಡೆಯಿತು. ಗ್ರಾಮದಲ್ಲಿ ಸುಮಾರು ಎರಡು ತಿಂಗಳಿನಿಂದ ಕುಡಿಯುವ ನೀರಿನ ತೊಂದರೆ ಉಂಟಾಗಿದ್ದು ಇರುವ ಕೊಳವೆ ಬಾವಿಗಳಿಂದ ನೀರನ್ನು ಮನೆಗಳಿಗೆ ಸಮರ್ಪಕವಾಗಿ ನೀಡುತ್ತಿಲ್ಲ. ಹೊಸ ಕೊಳವೆ ಬಾವಿಗೆ ನೀಡಲು ವಿಳಂಬ ಮಾಡುತ್ತಿದ್ದಾರೆಂದು ಶಿಕ್ಷಕ ಶಶಿಕುಮಾರ್, ತಮ್ಮಣ್ಣ ಅಧಿಕಾರಿಗಳ ಬಳಿ ವಿಷಯ ಪ್ರಸ್ತಾಪಿಸಿದರು. ನಂತರ ಸ್ಥಳೀಯ ಗ್ರಾಪಂ ಅಭಿವೃದ್ಧಿ ಅಧಿಕಾರಿ ಗೋವಿಂದೇ ಗೌಡರು ಈ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಈ ವಾರಾಂತ್ಯದೊಳಗಾಗಿ ಹೊಸ ಕೊಳವೆ ಬಾವಿ ಕೊರೆಸಲು ಎಲ್ಲಾ ಕ್ರಮ ಕೈಗೊಳ್ಳಲಾಗಿದೆ ಎಂದರು. ಗ್ರಾಮಸಭೆಯ ನೋಡಲ್ ಅಧಿಕಾರಿ ವೆಂಕಟಶಿವಾರೆಡ್ಡಿ ಮಾತನಾಡಿ,  ಸರ್ಕಾರದಿಂದ ಬರುವ ಸವಲತ್ತುಗಳನ್ನು ಫಲಾನುಭವಿಗಳ ಆಯ್ಕೆಗೆ ಅನುಗುಣವಾಗಿ ಗ್ರಾಮಸಭೆಗಳಲ್ಲಿ ಆಯ್ಕೆಮಾಡಿ ಅದನ್ನು ಪಂಚಾಯ್ತಿ ವತಿಯಿಂದ ಅನುಮೋದನೆ ನೀಡುವುದೆ ಗ್ರಾಮಸಭೆಯ ಪ್ರಮುಖ ಅಂಶವಾಗಿದೆ ಎಂದರು. ಕೆ.ಜಿ.ಹಳ್ಳಿ ಗ್ರಾಪಂ ಅಧ್ಯಕ್ಷೆ ಲಕ್ಷ್ಮಮ್ಮ ರಮೇಶ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಭೆಯಲ್ಲಿ ಗ್ರಾಪಂ. ಅಭಿವೃದ್ಧಿ ಅಧಿಕಾರಿ ಎಸ್.ಎಚ್.ಗೋವಿಂದೆಗೌಡ, ಕಾರ್ಯಯದರ್ಶಿ ಗೋಪಾಲ್, ಆರ್.ಮಂಜುಳಾ ರಾಜಣ್ಣ, ಪದ್ಮನಾಭಯ್ಯ, ಮಂಜುನಾಥ್, ಮುನಿಯಪ್ಪ, ಪದ್ಮಾಶ್ರೀರಾಮ್, ಶಾಂತಮ್ಮ, ತಿಮ್ಮರಾಯಪ್ಪ, ವೆಂಕಟೇಶಪ್ಪ, ಮುಖಂಡ ಯಲ್ಲಪ್ಪ, ಎಂಜಿನಿಯರ್ ದೇವರಾಜ್, ವಿವಿಧ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.