ಕೋಲಾರ

ಮಕ್ಕಳಿಗೆ ಚುನಾವಣಾ ತಿಳಿವಳಿಕೆ ಕಾರ್ಯಕ್ರಮ

Published On :

ಟೇಕಲ್: ದೊಡ್ಡನಾಯಕನಹಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ವಿಶೇಷವಾಗಿ ಮಕ್ಕಳಲ್ಲಿ ಅರಿವು ಮೂಡಿಸಲು ಚುನಾವಣಾ ಕಾರ್ಯ ಹಮ್ಮಿಕೊಳ್ಳಲಾಗಿತ್ತು.
ಈ ಚುನಾವಣೆಯನ್ನು ಸರ್ಕಾರಿ ಪದವಿ ಪೂರ್ವ ಕಾಲೇಜು (ಪ್ರೌಢಶಾಲಾ ವಿಭಾಗ) ದೊಡ್ಡನಾಯಕನಹಳ್ಳಿಯಲ್ಲಿ ಮತಗಟ್ಟೆ ಸಂಖ್ಯೆ 158ರಲ್ಲಿ ಜು.1ರಂದು ಶಾಲೆಯಲ್ಲಿ ಮತ ಚಲಾಯಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಳಾಗಿತ್ತು. ಚುನಾವಣಾ ಸ್ಪರ್ಧಿಗಳಾಗಿ 10 ವಿದ್ಯಾರ್ಥಿಗಳು ನಾಮಪತ್ರ ಸಲ್ಲಿಸಿದ್ದರು. ಚುನಾವಣಾ ನಿಯಮದಂತೆ ಪ್ರೆಸೀಡಿಂಗ್ ಆಫೀಸರ್, ಮೊದಲನೇ ಮತಗಟ್ಟೆ ಅಧಿಕಾರಿ, ಎರಡನೇ ಮತಗಟ್ಟೆ ಅಧಿಕಾರಿ, ಮೂರನೇ ಮತಗಟ್ಟೆ ಅಧಿಕಾರಿ ಭಾಗವಹಿಸಿದ್ದರು. ರಿಟರ್ನಿಂಗ್ ಅಧಿಕಾರಿಯಾಗಿ ಎಂ. ವೆಂಕಟೇಶ್, ರೂಟ್ ಆಫೀಸರ್ ಆಗಿ ಜಿ.ಟಿ. ರಾಮಚಂದ್ರಪ್ಪ, ಸೆಟ್ಟರ್ ಆಫೀಸರ್ ಕಾರ್ತಿಕ್ ಹಾಗೂ ಶಾಲೆ ಸಿಬ್ಬಂದಿ ವರ್ಗ ಚುನಾವಣಾ ಕಾರ್ಯವನ್ನು ಸುಸೂತ್ರವಾಗಿ ನೆರವೇರಿಸಿದರು. ಮತ ಚಲಾವಣೆ ಸಮಯ 10ರಿಂದ 10.30ರವರೆಗೆ ನಡೆಯಿತು. ಮತ ಎಣಿಕೆ ಸಂಜೆ 4.30ರಿಂದ 5.00 ರವರೆಗೆ ನಡೆಯಿತು. ಸ್ಪರ್ಧಿಗಳಲ್ಲಿ ರಾಧ ಮತ್ತು ಪುನೀತ್‌ಕುಮಾರ್ ಜಯ ಸಾಧಿಸಿದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.