ಕೋಲಾರ

ಅಕ್ರಮ ಜಲ್ಲಿ ಕ್ರಶರ್: ಜನರ ಜತೆ ರಾಜಕೀಯ ಬಲಾಢ್ಯರ ಚೆಲ್ಲಾಟ

Published On :

ಚಿಂತಾಮಣಿ: ಪರಿಸರ ಮಾಲಿನ್ಯವನ್ನು ಹಾಳು ಮಾಡಿ ಹಲವು ರಾಜಕೀಯ ಬಲಾಡ್ಯರು ಅಕ್ರಮವಾಗಿ ಜಲ್ಲಿ ಕ್ರಶರ್ ನಡೆಸುತ್ತಿರುವುದರಿಂದ ಜನಸಾಮಾನ್ಯರ ಬದುಕಿನ ಜೊತೆ ಚೆಲ್ಲಾಟವಾಡುತ್ತಿದ್ದರೂ ಜಿಲ್ಲಾಡಳಿತದ ವಿರುದ್ಧ ನೂರಾರು ಗ್ರಾಮಸ್ಥರು ಕಿಡಿಕಾರಿ ಪ್ರತಿಭಟನೆ ನಡೆಸಿದರು.
ತಾಲೂಕಿನ ಕೋಟಗಲ್ ಹಾಗೂ ನರಸಾಪುರ ಮತ್ತು ರಾಗುಟ್ಟಹಳ್ಳಿ ವ್ಯಾಪ್ತಿಯ ಸರ್ವೇ ನಂ. 36 ಮತ್ತು 56 ರ ಜಮೀನಿನಲ್ಲಿ ಪರಿಸರ ಮಾಲಿನ್ಯವನ್ನು ಹಾಳು ಮಾಡಿ ಜನ ಜೀವನ ಮತ್ತು ಜಾನುವಾರುಗಳ ಜೊತೆ ಚೆಲ್ಲಾಟವಾಡಿ ರಾಜಕೀಯ ಹಣ ಮತ್ತು ಬಲಾಡ್ಯತನದಿಂದ ಜಲ್ಲಿ ಕ್ರಶರ್ ನಡೆಸುತ್ತಿರುವ ಮಾಲೀಕರ ಧೋರಣೆ ವಿರುದ್ಧ ಸುತ್ತಮುತ್ತಲಿನ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ಜಿಲ್ಲಾ ಆಡಳಿತ ಯಂತ್ರಾಂಗ ಜನಸಾಮಾನ್ಯರ ಆರೋಗ್ಯ ದೃಷ್ಟಿಯಿಂದ ವಾಯು ಮಾಲಿನ್ಯ ಹಾಗೂ ಪರಿಸರ ಮಾಲಿನ್ಯ ಹಾಳು ಮಾಡಿ ಹಗಲು ರಾತ್ರಿ ಜಲ್ಲಿ ಕ್ರಶರ್ ಯಂತ್ರಾಂಗ ಮಾಡುವ ಶಬ್ದ ಮತ್ತು ಕಲ್ಲು ಬಂಡೆ ಹೊಡೆಯುವ ಸ್ಫೋಟಕ ಶಬ್ದದಿಂದ ಹಲವಾರು ರೋಗ ರುಜಿನಗಳು ಹರಡುವ ಬೀತಿಯಲ್ಲಿ ಜನರು ಬದುಕುವಂತಾಗಿದೆಯೆಂದು ಆರೋಪಿಸಿದರು. ಸಂಬಂಧಪಟ್ಟ ಜಿಲ್ಲಾಧಿಕಾರಿಗಳು ಹಾಗೂ ಪರಿಸರ ಮಾಲಿನ್ಯ ಅಧಿಕಾರಿಗಳು ಯಾವುದೇ ಕಾರಣಕ್ಕೂ ಜಲ್ಲಿ ಕ್ರಶರ್ ನಡೆಸದಂತೆ ಆದೇಶ ಹೊರಡಿಸಬೇಕೆಂದು ಗ್ರಾಮಸ್ಥರು ಹಲವು ಗಂಟೆಗಳ ಕಾಲ ಪ್ರತಿಭಟನೆ ನಡೆಸಿದರು.
ರಾಗುಟ್ಟಹಳ್ಳಿ ಬಳಿ ಇರುವ ಜಲ್ಲಿ ಕ್ರಶರ್‌ಗೆ ಅನುಮತಿ ವೇಳಾ ಅವಧಿ ಮುಗಿದಿದ್ದರೂ ರಾಜಕೀಯ ಬಲಾಡ್ಯರು ಹಣ ಬಲದಿಂದ ರಾಜಾರೋಷವಾಗಿ ಜಲ್ಲಿ ಕ್ರಶರ್ ನಡೆಸುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಮೌನವಾಗಿರುವ ಬಗ್ಗೆ ಸಾರ್ವಜನಿಕರ ವಲಯದಲ್ಲಿ ಚರ್ಚೆಗೆ ಗ್ರಾಸವಾಗುತ್ತಿದೆಯೆಂದು ಆರೋಪಿಸಿದರು.
ಸುದ್ದಿ ತಿಳಿದ ಘಟನಾ ಸ್ಥಳಕ್ಕೆ ಗ್ರಾಮಾಂತರ ಠಾಣೆಯ ಸಬ್‌ಇನ್ಸೆಪೆಕ್ಟರ್ ನಟರಾಜ್ ಪ್ರತಿಭಟನಾಕಾರರನ್ನು ಸಮಾಧಾನ ಪಡಿಸಿ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಚರ್ಚಿಸಿ ಕಾನೂನಿನ ಚೌಕಟ್ಟಿನ ಅಡಿಯಲ್ಲಿ ನ್ಯಾಯ ದೊರಕಿಸಿಕೊಡುವುದಾಗಿ ಗ್ರಾಮಸ್ಥರಿಗೆ ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂಪಡೆಯಲಾಯಿತು.
ಈ ಸಂದರ್ಭದಲ್ಲಿ ಕೋಟಗಲ್ ಬಾಬು, ರಾಮಪ್ಪ, ವೆಂಕಟೇಶಪ್ಪ, ಶಿವಣ್ಣ, ಸೀನಪ್ಪ, ಶ್ರೀನಿವಾಸ್,ಶ್ರೀರಾಮಪ್ಪ, ವೆಂಕಟರವಣಪ್ಪ, ವೆಂಕಟರಾಯಪ್ಪ, ನಾರಾಯಣಸ್ವಾಮಿ, ದೇವರಾಜ್ ಹಲವಾರು ಗ್ರಾಮಸ್ಥರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.