ತಾಪಂ ಜೆಡಿಎಸ್ ಸದಸ್ಯ ವರ್ತೂರ್ ಬಣ ಸೇರ್ಪಡೆ
ಕೋಲಾರ: ತಾಪಂ ಸದಸ್ಯ ಚಂದ್ರು ಅವರು ಜೆಡಿಎಸ್ ತೊರೆದು ಶಾಸಕ ವರ್ತೂರ್ ಬಣಕ್ಕೆ ಸೇರ್ಪಡೆಗೊಂಡರು. ಶಾಸಕರ ತೋಟದ ಮನೆಯಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ತಮ್ಮ ಬೆಂಬಲಿತ ಮುಖಂಡರೊಂದಿಗೆ ಚಂದ್ರು ಸೇರ್ಪಡೆಯಾದರು. ಮುಖಂಡರಾದ ಟಿ.ಚಂದ್ರಪ್ಪ, ರಾಮಪ್ಪ, ವಿಜಯಕುಮಾರ್, ಯಳಪ್ಪ, ಆರ್.ಎನ್.ಮಂಜುನಾಥ್, ವೆಂಕಟಗಿರಿಯಪ್ಪ, ರಮೇಶ್, ಉಮೇಶ್, ಲಕ್ಷ್ಮೀನಾರಾಯಣ್, ಮುರಳಿ, ರಾಜಣ್ಣ, ಕೆಂಪಣ್ಣ, ತಿಮ್ಮರಾಜು, ಮುನಿರಾಜು, ನಾರಾಯಣಚಾರಿ, ನಾಗರಾಜ್ ಶಾಸಕರಿಗೆ ಬೆಂಬಲ ನೀಡಿದರು. ಇದೇ ಸಂದರ್ಭದಲ್ಲಿ ಬೆಗ್ಲಿ ಪ್ರಕಾಶ್, ಛತ್ರಕೋಡಿಹಳ್ಳಿ ರಾಜಗೋಪಾಲ್, ತಾಪಂ ಸದಸ್ಯ ಮಂಜುನಾಥ್ ಗೌಡ, ಗ್ರಾಪಂ ಅಧ್ಯಕ್ಷ ವಕ್ಕಲೇರಿ ರಾಜಪ್ಪ, ನರಸಾಪುರ ಗಾಂಧಿ, ನಾಗರಾಜ್, ಬೆಳಮಾರನಹಳ್ಳಿ ಮಂಜುನಾಥ್, ಗಂಗರಾಜ್, ನಾರಾಯಣಸ್ವಾಮಿ ಮತ್ತಿತರರು ಇದ್ದರು.
ಗ್ರಾಮೀಣ ರಸ್ತೆ ಅಭಿವೃದ್ಧಿಗೆ ಮೊದಲ ಆದ್ಯತೆ: ರಾಮಕ್ಕ
ಕೆಜಿಎಫ್: ಕ್ಷೇತ್ರದ ನಗರ ಹಾಗೂ ಗ್ರಾಮೀಣ ಭಾಗದ ಪ್ರಮುಖ ರಾಜ್ಯ ಹೆದ್ದಾರಿ ಹಾಗೂ ಅಂತಾರಾಜ್ಯ ಗಡಿ ಭಾಗದ ರಸ್ತೆಗಳನ್ನು ಅಭಿವೃದ್ಧಿಪಡಿಸಲು ಈಗಾಗಲೇ ಹಲವು ರಸ್ತೆಗಳ ಅಭಿವೃದ್ಧಿ ಯೋಜನೆ ಪ್ರಾರಂಭ ಮಾಡಲಾಗಿದೆ ಎಂದು ಶಾಸಕಿ ವೈ.ರಾಮಕ್ಕ ತಿಳಿಸಿದರು. ಕ್ಯಾಸಂಬಳ್ಳ ಹೋಬಳಿಯ ಜಕ್ಕರಾಸನಕುಪ್ಪ ಮುಖ್ಯ ರಸ್ತೆಯಲ್ಲಿ ನಬಾರ್ಡ್ ಯೋಜನೆಯಡಿ 1 ಕೋಟಿ ವೆಚ್ಚದಲ್ಲಿ ಆಂಧ್ರಪ್ರದೇಶಕ್ಕೆ ಸಂಪರ್ಕಿಸುವ 6ನೇ ಮೈಲಿನ 3.5 ಕಿ.ಮೀ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿ, ಕ್ಷೇತ್ರದ ನಗರ ಹಾಗೂ ಗ್ರಾಮೀಣ ಭಾಗದಲ್ಲಿ ದ್ವಿಪಥ ರಸ್ತೆ ನಿರ್ಮಾಣ ಹಾಗೂ ಗ್ರಾಮೀಣ ಭಾಗದಿಂದ ಸಂಪರ್ಕ ರಸ್ತೆಗಳ ನಿರ್ಮಾಣದಿಂದ ಅಭಿವೃದ್ಧಿ ಹೆಚ್ಚು ಅನುಕೂಲವಾಗಲಿದೆ ಎಂದರು. ಮಾಜಿ ಶಾಸಕ ವೈ.ಸಂಪಂಗಿ ಮಾತನಾಡಿ, ಪ್ರಮುಖ ರಸ್ತೆಗಳ ಅಭಿವೃದ್ಧಿ ಕ್ಷೇತ್ರದ ಅಭಿವೃದ್ಧಿಗೆ ಸಾಕ್ಷಿಯಾಗಲಿದೆ ಎಂದರು. ಮುಖಂಡರಾದ ಮುನಿಸ್ವಾಮಿರೆಡ್ಡಿ, ಅಮರನಾರಾಯಣರೆಡ್ಡಿ, ವೆಂಕಟರಾಮರೆಡ್ಡಿ, ರಾಮಕೃಷ್ಣರೆಡ್ಡಿ, ರಮೇಶ್, ತಾಪಂ ಮಾಜಿ ಉಪಾಧ್ಯಕ್ಷೆ ಶಾಂತಕುಮಾರಿ, ಸದಸ್ಯರಾದ ರಾಮಚೆದ್ರರೆಡ್ಡಿ, ಕೃಷ್ಣಪ್ಪ, ಕೃಷ್ಣಾರೆಡ್ಡಿ, ಬಾಬು, ಸುಮಾನಾಗರಾಜ್, ಸಹಾಯಕ ಅಭಿಯಂತರ ಮಂಜುನಾಥ್, ಗ್ರಾಮದ ಮುಖಂಡರು ಹಾಗೂ ಜಕ್ಕರಾಸನಕುಪ್ಪ ಗ್ರಾಮಸ್ಥರು ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

