ಕೋಲಾರ

ರೇಲ್ವೆ ಕಾಂಪೌಂಡ್ ಕೆಡವಿದ ಪ್ರಭಾವಿಗಳು!

Published On :

ಶಿಡ್ಲಘಟ್ಟ:  ಪಟ್ಟಣದ ರೇಲ್ವೆ ನಿಲ್ದಾಣದ ಮುಂಭಾಗದಲ್ಲಿರುವ ಕಾಂಪೌಂಡ್ನ್ನು ಕೆಲವು ಮಂದಿ ಪ್ರಭಾವಿ ವ್ಯಕ್ತಿಗಳ ಕಡೆಯವರು ಜೆ.ಸಿ.ಬಿ ಮುಖಾಂತರ ಕೆಡವಿ, ಕಲ್ಲುಗಳನ್ನು ಸಾಗಾಣೆ ಮಾಡುತ್ತಿದ್ದರೂ ಕೂಡಾ ಅಧಿಕಾರಿಗಳು ಯಾವುದೇ ಕ್ರಮಕ್ಕೆ ಮುಂದಾಗದಿರುವುದಕ್ಕೆ ನಾಗರೀಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಾಂಪೌಂಡಿನ ಪಕ್ಕದಲ್ಲೆ ಕಾಂಗ್ರೆಸ್ ಭವನ ನಿಮರಾಣವಾಗಿದ್ದು, ಭವನದ ಬಾಗಿಲಿಗೆ ಅಡ್ಡಿಯಾಗುತ್ತದೆ ಎಂಬ ಕಾರಣಕ್ಕಾಗಿ ಗೋಡೆಯನ್ನು ಕೆಡವಿ ಕಲ್ಲುಗಳನ್ನು ಸಾಗಾಣೆ ಮಾಡಿದ್ದಾರೆ. ಸಾರ್ವಜನಿಕರು ರೈಲ್ವೆ ಇಲಾಖೆಯ ಅಧಿಕಾರಿಗಳಿಗೆ ಪ್ರಶ್ನಿಸುವವರೆಗೂ ಇಲಾಖೆಯವರು ಜಾಣ ಮೌನಕ್ಕೆ ಮೊರೆ ಹೋಗಿದ್ದರು. ದೂರವಾಣಿಯ ಮುಖಾಂತರ ಕೇಳಿದಾಗ, ಗೋಡೆಯನ್ನು ಕೆಡವದಂತೆ ತಡೆದು ಟ್ರಾಕ್ಟರ್ಗೆ ತುಂಬಿದ್ದ ಕಲ್ಲುಗಳನ್ನು ನಿಲ್ದಾಣದ ಪಕ್ಕದಲ್ಲಿ ಇಳಿಸಿದ್ದಾರೆ ಎಂದು ಸಾರ್ವಜನಿಕರು ದೂರಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.