ಕೈವಾರದಲ್ಲಿ 10ರಿಂದ ಸತತ 72 ತಾಸು ಸಂಗೀತೋತ್ಸವ
ಕೋಲಾರ: ಗುರುಪೂರ್ಣಿಮೆ ಪ್ರಯುಕ್ತ ಪ್ರತಿ ವರ್ಷದಂತೆ ಕೈವಾರ ಕ್ಷೇತ್ರದಲ್ಲಿ ಜು.10ರಿಂದ ಮೂರು ದಿನಗಳ ವಿಶೇಷ ಸಂಗೀತೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಯೋಗಿ ನಾರೇಯಣ ಸಂಕೀರ್ತನಾ ಯೋಜನೆ ಸಂಚಾಲಕ ವಾನರಾಶಿ ಬಾಲಕೃಷ್ಣ ಭಾಗವತರ್ ತಿಳಿಸಿದರು. ನಗರದ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಅವಿಭಜಿತ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ಕಲಾವಿದರನ್ನೊಳಗೊಂಡಂತೆ ನಾಡಿನ ಹೆಸರಾಂತ ಕಲಾವಿದರಿಂದ ನಿರಂತರ 72 ಗಂಟೆಗಳ ಕಾಲ ಸಂಗೀತ ಕಛೇರಿ, ನಾದಸ್ವರ-ತವಿಲ್ ವಾದನ, ಭರತನಾಟ್ಯ, ಹರಿಕಥೆ, ಬುರ್ರಕಥೆ ಮುಂತಾದ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು ಸಾವಿರಕ್ಕೂ ಹೆಚ್ಚು ವಿದ್ವಾಂಸರು ಆಗಮಿಸಲಿದ್ದಾರೆ ಎಂದರು. ಜು.10ರಂದು ಬೆಳಗ್ಗೆ 6 ಗಂಟೆಗೆ ಸಂಗೀತೋತ್ಸವ ಆರಂಭವಾಗುವುದು. ಅಂದು ಸಂಜೆ 5 ಗಂಟೆಗೆ ವಿಶೇಷ ಕಾರ್ಯಕ್ರಮಗಳಲ್ಲಿ ಚೆನ್ನೈನ ಚಿನ್ಮಯಾ ಸಿಸ್ಟರ್ಸ್ ಅವರಿಂದ ಗಾಯನ, ಎ. ಕನ್ಯಾಕುಮಾರಿ ಪಿಟಿಲು ಸೋಲೋ, ಸಿಕ್ಕಿಲ್ ಗುರುಚರಣ್ ಗಾಯನ, ಬೆಂಗಳೂರು ರುದ್ರಪಟ್ನಂ ಎಸ್. ರಮಾಕಾಂತ್ ಗಾಯನ, ತುಮಕೂರು ಸಾಗರ್ ತಂಡದವರಿಂದ ಭರತನಾಟ್ಯ ಕಾರ್ಯಕ್ರಮಗಳಿರುತ್ತವೆ. ಬೆಂಗಳೂರು ಸಿ.ಎನ್.ಚಂದ್ರಶೇಖರ್, ಚೆನ್ನೈನ ಶ್ರೀಮುಷ್ಣಂ ರಾಜಾರಾವ್, ತಿರುವಾರೂರು ಭಕ್ತ ವತ್ಸಲಂ, ವೈಕಂ ಗೋಪಾಲಕೃಷ್ಣ ಅವರು ಭಾಗವಹಿಸಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

