ಶಾಸಕ ವರ್ತೂರ್ ಬಣದ ತೆಕ್ಕೆಗೆ ಕೋಲಾರ ತಾಪಂ
ಕೋಲಾರ: ಕೋಲಾರ ತಾಲೂಕು ಪಂಚಾಯಿತಿ ಮತ್ತೊಮ್ಮೆ ಶಾಸಕ ಆರ್. ವರ್ತೂರ್ ಪ್ರಕಾಶ್ ಬಣದ ವಶವಾಗಿದೆ.
ತಾಪಂ ಉಳಿದ ಮೂರನೇ ಅವಧಿಯ 20 ತಿಂಗಳ ಆಡಳಿತಕ್ಕೆ ಸೋಮವಾರ ನಡೆದ ಚುನಾವಣೆಯಲ್ಲಿ ಚೌಡದೇನಹಳ್ಳಿ ಕ್ಷೇತ್ರದ ತಾಪಂ ಸದಸ್ಯ ವಿ. ಮಂಜುನಾಥ್ ಅಧ್ಯಕ್ಷರಾಗಿ ಹಾಗೂ ಶಾಪೂರು ಕ್ಷೇತ್ರದ ಮುದ್ದುಮಣಿ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಪ್ರತಿಪಕ್ಷಗಳ ಗೈರು ನಡುವೆ ನಡೆದ ಚುನಾವಣೆಗೆ ಶಾಸಕ ವರ್ತೂರ್ ಪ್ರಕಾಶ್ ಬಣದ 13 ಸದಸ್ಯರು ಹಾಜರಿದ್ದರು. ಪ್ರತಿಪಕ್ಷದ 10 ಸದಸ್ಯರು ಗೈರು ಹಾಜರಾಗಿದ್ದರು.
ವೇಮಗಲ್ ಕ್ಷೇತ್ರದ ಹಾಲಿ ಸದಸ್ಯೆ ಹಾಗೂ ತಾಪಂ ಮಾಜಿ ಅಧ್ಯಕ್ಷೆ ಸಿ. ಭಾಗ್ಯಲಕ್ಷ್ಮಿ ನಾರಾಯಣಮೂರ್ತಿ ಅಧ್ಯಕ್ಷ ಸ್ಥಾನಕ್ಕೆ ಅಭ್ಯರ್ಥಿಯಾಗಿದ್ದ ಮಂಜುನಾಥ್ಗೆ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಉಮೇದುವಾರಿಕೆ ಸಲ್ಲಿಸಿದ್ದ ಮುದ್ದುಮಣಿಗೆ ಮಾಜಿ ಉಪಾಧ್ಯಕ್ಷೆ ಸರಸ್ವತಿ ಸೂಚಕರಾಗಿದ್ದರು. ಚುನಾವಣಾಧಿಕಾರಿಯಾಗಿದ್ದ ಉಪವಿಭಾಗಾಧಿಕಾರಿ ಸಿ.ಎನ್. ಮಂಜುನಾಥ್ ಅವರು ಮಂಜುನಾಥ್ ಮತ್ತು ಮುದ್ದುಮಣಿಯವರನ್ನು ಹೊರತುಪಡಿಸಿ ಬೇರೆ ಯಾರೂ ನಾಮಪತ್ರ ಸಲ್ಲಿಸದಿದ್ದರಿಂದ ಅವಿರೋಧ ಆಯ್ಕೆಯನ್ನು ಘೋಷಿಸಿದರು.
ಹಾಜರಾಗಿದ್ದ ಸದಸ್ಯರು: ಅರಾಭಿಕೊತ್ತನೂರು ಜಗದೀಶ್ಗೌಡ, ಬೆಗ್ಲಿ ಹೊಸಹಳ್ಳಿ ನಂದಿನಿ, ಬೆಳ್ಳೂರು ವಿ. ಚಂದ್ರಪ್ಪ, ಚೌಡದೇನಹಳ್ಳಿ ವಿ.ಮಂಜುನಾಥ್, ಹೋಳೂರು ನಾಗಮ್ಮ, ಕ್ಯಾಲನೂರು ಕೋಮಲ, ಮುದುವತ್ತಿ ಎಂ. ಸರಸ್ಪತಿ, ನರಸಾಪುರ ಎನ್.ಕೆ. ನಾಗರಾಜ, ಶಾಪೂರು ಮುದ್ದುಮಣಿ, ಸುಗಟೂರು ಸಾವಿತ್ರಮ್ಮ, ವೇಮಗಲ್ ಭಾಗ್ಯಲಕ್ಷ್ಮಿ, ವಕ್ಕಲೇರಿ ಎನ್. ರಮಾದೇವಿ, ಅಮ್ಮಾನಲ್ಲೂರು ಸುವರ್ಣಮ್ಮ.
ಗೈರಾದವರು: ಪ್ರತಿಪಕ್ಷ ಸದಸ್ಯರಾದ ಅರಹಳ್ಳಿ ಚಂದ್ರಮ್ಮ, ಹುತ್ತೂರು ಸುನಂದಮ್ಮ, ಮದ್ದೇರಿ ಮುನಿಬೈರಪ್ಪ, ಮಡಿವಾಳ ರಾಮಕೃಷ್ಣಪ್ಪ, ಮಣಿಘಟ್ಟ ಎಚ್. ಆನಂದ್, ಮಾರ್ಜೇನಹಳ್ಳಿ ಎ.ಜಿ. ರಾಮಚಂದ್ರಗೌಡ, ಮುದುವಾಡಿ ಪುಟ್ಟಮ್ಮ, ಶೆಟ್ಟಹಳ್ಳಿ ನಾಗವೇಣಿ, ಗದ್ದೆಕಣ್ಣೂರು ವಿ. ಕೃಷ್ಣಮೂರ್ತಿ, ತೊಟ್ಲಿ ಮಂಜುನಾಥ್ ಗೈರಾಗಿದ್ದರು.
ಚುನಾವಣೆ ಪ್ರಕ್ರಿಯೆಯಲ್ಲಿ ತಾಪಂ ಇಒ ಡಿ.ಜಾನಕಿರಾಮ್, ತಹಸೀಲ್ದಾರ್ ರಂಗೇಗೌಡ, ಜಿ. ಶ್ರೀನಿವಾಸ್, ಉಪವಿಭಾಗಾಧಿಕಾರಿ ಕಚೇರಿಯ ಗುಮಾಸ್ತೆ ಗಾಯಿತ್ರಿ ಪಾಲ್ಗೊಂಡಿದ್ದರು. ಚುನಾವಣಾ ಫಲಿತಾಂಶ ಪ್ರಕಟವಾಗುತ್ತಿದ್ದಂತೆ ವಿಜೇತರ ಪರ ಬೆಂಬಲಿಗರು ತಾಪಂ ಕಚೇರಿ ಮುಂದೆ ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು. ಶಾಸಕ ವರ್ತೂರ್ ಪ್ರಕಾಶ್, ಮುಖಂಡ ಬೆಗ್ಲಿ ಸೂರ್ಯಪ್ರಕಾಶ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

