ಕೋಲಾರ

'ಹಿರಿಯ ಚೇತನಗಳ ಸಂದೇಶ ಹಳ್ಳಿಗೆ ತಲುಪಿಸಿ'

Published On :

ಟೇಕಲ್: ಬುದ್ಧನ ತಾತ್ವಿಕವಾದ ಹೋರಾಟ, ಬಸವಣ್ಣನವರ ಕಲ್ಯಾಣ ಕ್ರಾಂತಿ, ಅಂಬೇಡ್ಕರ್ ಅವರ ಸಾಮಾಜಿಕ ಕ್ರಾಂತಿ ಪರಿಕಲ್ಪನೆಗಳ ಸಂದೇಶ ಹಳ್ಳಿ ಜನತೆಗೆ ಮುಟ್ಟಿಸುವ ಕಾರ್ಯ ಮೊದಲಿಗೆ ಆಗಬೇಕಾಗಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಸೂಲಿಕುಂಟೆ ರಮೇಶ್ ತಿಳಿಸಿದರು.
ಮಾಸ್ತಿಯಲ್ಲಿ ದಸಂಸನ “ÔÚØÙ ಕಡೆಗೆ «ÚtVæ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಆಧುನಿಕ ಯುಗದಲ್ಲಿಯೂ ಅಸ್ಪೃಶ್ಯತೆ, ದೌರ್ಜನ್ಯ, ದಬ್ಬಾಳಿಕೆ ಸಾರ್ವಜನಿಕ ಸ್ಥಳಗಳು, ದೇವಸ್ಥಾನ, ಹೊಟೇಲ್, ಕ್ಷೌರ ನಿರಾಕರಣೆ ಮತ್ತು ಪ್ರವೇಶ ನಿರ್ಬಂಧ, ಸಾಮಾಜಿಕ ಬಹಿಷ್ಕಾರಗಳು ಪ್ರತಿನಿತ್ಯ ಹೆಚ್ಚಾಗುತ್ತಿವೆ. ದಲಿತರಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವಲ್ಲಿ ವಂಚನೆಯಾಗುತ್ತಿರುವುದು ಶೋಚನೀಯ ಎಂದರು.
ತಾಲೂಕು ಸಂಚಾಲಕ ಎಸ್.ಎಂ.ವೆಂಕಟೇಶ್ ಮಾತನಾಡಿ, ಹಳ್ಳಿಗಳಲ್ಲಿ ದಲಿತರ ಕಾಲೋನಿಗಳಲ್ಲಿ ಅಭಿವೃದ್ಧಿಯ ನಿರ್ಲಕ್ಷ್ಯದಿಂದ ದಲಿತರು ಇನ್ನೂ 20 ವರ್ಷ ಹಿಂದಿನ ಜನತೆಯಂತೆ ಬದುಕುತ್ತಿದ್ದಾರೆ ಎಂದರು. ಮಾಸ್ತಿ ಹೋಬಳಿ ಶಾಖಾ ಪದಾಧಿಕಾರಿಗಳನ್ನು ಆಯ್ಕೆ ಮಾಡಿ ಅಭಿನಂದಿಸಲಾಯಿತು, ಜಿಲ್ಲಾ ಸಂಘಟನಾ ಸಂಚಾಲಕ ಎಚ್.ಮುನಿಚೌಡಪ್ಪ ಕ್ರಾಂತಿ ಗೀತೆಗಳನ್ನು ಹಾಡಿದರು. ಜಿಲ್ಲಾ ಸಂಘಟನಾ ಸಂಚಾಲಕ ಚವ್ವೇನಹಳ್ಳಿ ವಿಜಿ, ಗೋಪಸಂದ್ರ ರಮೇಶ್, ಡಿ. ನಾರಾಯಣಸ್ವಾಮಿ, ವರದಾಪುರ ವೆಂಕಟೇಶ್, ತಾಲೂಕು ಕಾರ್ಯಕಾರಿ ಸಮಿತಿ ಸದಸ್ಯರಾದ ಬುಲೇಟ್ ನಾಗರಾಜ್, ಈಶ್ವರಪ್ಪ, ಮುಳಬಾಗಿಲು ವೀರಪ್ಪ, ಊಸರಹಳ್ಳಿ ಗೋಪಿ, ಎಂ. ಹೊಸಹಳ್ಳಿ ವೆಂಕಟೇಶ್ ಹಾಗೂ ಇತರರು ಇದ್ದರು.
ನೂತನ ಪದಾಧಿಕಾರಿಗಳು: ತಾಲೂಕು ಕಾರ್ಯಕಾರಿ ಸಮಿತಿ ಸದಸ್ಯರಾಗಿ ಬುಲೇಟ್ ನಾಗರಾಜ್, ಈಶ್ವರಪ್ಪ, ಮಾಸ್ತಿ ಹೋಬಳಿಯ ಗೌರವ ಸಂಚಾಲಕರಾಗಿ ವೆಂಕಟೇಶಪ್ಪ, ಕತ್ತರಹಳ್ಳಿ ರಮೇಶ್, ಸಂಘಟನಾ ಸಂಚಾಲಕರಾಗಿ ಮುನಿರಾಜು, ಮುರುಗೇಶ್, ಶ್ರೀಧರ್, ಆಂಜಿನಪ್ಪ, ರಾಮಣ್ಣ, ಪ್ರಧಾನ ಕಾರ್ಯದರ್ಶಿಯಾಗಿ ರಾಜು, ಖಜಾಂಚಿ ನಾರಾಯಣಸ್ವಾಮಿ, ಸಹಕಾರ್ಯದರ್ಶಿ ನಾರಾಯಣಸ್ವಾಮಿ, ಮಾಸ್ತಿ ಹೋಬಳಿಯ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಶಂಕರ್, ಪಾಲ್ರಾಜ್, ನಾರಾಯಣಸ್ವಾಮಿ, ಮುನಿರಾಜು, ಮುರುಳಿ, ಬಾಬು, ಮುನಿಶಾಮಪ್ಪ, ಮುನಿರತ್ನಪ್ಪ, ವಿಜಯಕುಮಾರ್, ವೆಂಕಟೇಶ್ ಆಯ್ಕೆಯಾದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.