ಹಿರಿಯರ ತ್ಯಾಗ ಮರೆತರೆ ದೇಶಕ್ಕೆ ಅಪಾಯ
ಕೋಲಾರ: ಚಂದ್ರಶೇಖರ ಆಜಾದ್ ಸೇರಿದಂತೆ ಅನೇಕ ಹಿರಿಯರು ಭಾರತವನ್ನು ಬ್ರಿಟೀಷರ ದಾಸ್ಯದಿಂದ ಪಾರು ಮಾಡಲು ತ್ಯಾಗ ಬಲಿದಾನ ಮಾಡಿದ್ದಾರೆ. ಈ ಹಿರಿಯರ ತ್ಯಾಗವನ್ನು ಮರೆತು ಸ್ವೆಚ್ಛಾಚಾರದಿಂದ ಬದುಕು ನಡೆಸಲು ಹೊರಟರೆ ದೇಶಕ್ಕೆ ಅಪಾಯ ತಪ್ಪಿದ್ದಲ್ಲ ಎಂದು ಜಾಗೃತ ಭಾರತ ಸದಸ್ಯರಾದ ಯಶಸ್ ತಿಳಿಸಿದರು.
ನಗರದ ಲಯನ್ಸ್ ಕ್ಲಬ್ನಲ್ಲಿ ಚಂದ್ರಶೇಖರ್ ಆಜಾದ್ ಅಭಿಮಾನಿ ಬಳಗದಿಂದ ಹಮ್ಮಿಕೊಂಡಿದ್ದ ಕೊಂಡಿದ್ದ ಏಕ್ ಶ್ಯಾಮ್ ಆಜಾದ್ ಕೆ ನಾಮ್ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಜು.23ರಂದು ಬಂಗಾರಪೇಟೆಯಲ್ಲಿ ಆಜಾದ್ ಜನ್ಮದಿನಾಚರಣೆಯ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಅದರ ಪೂರ್ವ ಭಾವಿಯಾಗಿ ಈ ಕಾರ್ಯಕ್ರಮ ನಡೆಯಿತು.
ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯ ಕಲಿಗಳು ನಡೆಸಿದ ಹೋರಾಟ ಮತ್ತು ಬಲಿದಾನದಿಂದಲೇ ನಾವಿಂದು ಸ್ವತಂತ್ರ್ಯ ಜೀವನ ನಡೆಸಲು ಸಾಧ್ಯವಾಗಿದೆ, ಆದರೆ ಆಧುನಿಕ ಐಷಾರಾಮ ಮತ್ತು ವಿದೇಶಿ ವ್ಯಾಮೋಹಕ್ಕೆ ತುತ್ತಾಗಿ ಹಿರಿಯರ ತ್ಯಾಗವನ್ನು ಮರೆಯುತ್ತಿದ್ದೇವೆ ಎಂದು ವಿಷಾದಿಸಿದರು.
ಬೆಂಗಳೂರಿನ ಸರ್ಕಾರಿ ಕಾಲೇಜಿನ ಪ್ರಾಂಶುಪಾಲ ಬಿ.ವಿ.ಕೃಷ್ಣಪ್ಪ ಅವರು ನಡೆಸಿಕೊಟ್ಟ ಸ್ವಾತಂತ್ರ್ಯ ಹೋರಾಟ ಕಲಿಗಳ ಹರಿಕಥಾ ಕಾರ್ಯಕ್ರಮ ಸಭಿಕರ ಮೈನವಿರೇಳಿಸಿತು.
ಇದೇ ಸಂದರ್ಭದಲ್ಲಿ ಕೋಲಾರ ಪತ್ರಿಕೆ ಸಂಪಾದಕ ಕೆ.ಪ್ರಹ್ಲಾದರಾವ್ ಹಾಗೂ ಎಸ್ಎನ್ಆರ್ ಆಸ್ಪತ್ರೆಯ ವೈದ್ಯ ಡಾ.ಶಿವಣ್ಣರನ್ನು ಚಂದ್ರಶೇಖರ್ ಆಜಾದ್ ಅಭಿಮಾನಿ ಬಳಗದಿಂದ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಜೆ.ಎಸ್.ಪಾರ್ಥಸಾರಥಿ, ತಲಗುಂದ ನರಸಿಂಹರಾಜು, ಕೆಂಬೋಡಿ ನಾರಾಯಣಸ್ವಾಮಿ, ನರಸಿಂಹ, ಕೀಲುಕೋಟೆ ರವಿ, ಮಹೇಶ್ ರಾವ್ ಕದಂ, ಚಲಪತಿ, ಬಜರಂಗದಳ ಬಾಲಾಜಿ, ಎಸ್.ಎನ್.ಆರ್.ನಂದೀಶ್ ಕುಮಾರ್, ನಗರಸಭೆ ಸದಸ್ಯ ಕಾಶಿ ವಿಶ್ವನಾಥ್, ಕೆ.ಎಸ್.ಜಯಸಿಂಹ ಇದ್ದರು.
ಬಿಜೆಪಿ ಯುವ ಮೋರ್ಚಾ ನಗರಾಧ್ಯಕ್ಷ ಪ್ರದೀಪ್ ಅಧ್ಯಕ್ಷತೆ ವಹಿಸಿದ್ದರು, ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ರಘುರಾಮರೆಡ್ಡಿ ಕಾರ್ಯಕ್ರಮ ಉದ್ಘಾಟಿಸಿದರು. ಆಜಾದ್ ಅಭಿಮಾನಿ ಬಳಗದ ಪುನೀತ್ ನಿರೂಪಿಸಿ, ರಮೇಶ್ ಸ್ವಾಗತಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

