ಕೋಲಾರ

ಚನ್ನಯ್ಯ ಜನ್ಮ ಶತಾಬ್ದಿ ಆಚರಣೆಗೆ ನಿರ್ಧಾರ

Published On :

ಕನ್ನಡಪ್ರಭ ವಾರ್ತೆ, ಕೋಲಾರ, ಜು.15
ಜಿಲ್ಲೆಯ ಹಿರಿಯ ಮುತ್ಸದ್ದಿ ರಾಜಕಾರಣಿ, ಮಾಜಿ ಸಚಿವ ಟಿ.ಚನ್ನಯ್ಯ ಅವರ ಜನ್ಮ ಶತಾಬ್ದಿ ದೀಪವಾಗಬೇಕೆಂದು ಸಾಹಿತಿ ಮತ್ತು ಟಿ.ಚನ್ನಯ್ಯ ಜನ್ಮ ಶತಮಾನೋತ್ಸವ ಸಮಿತಿಯ ಮುಖಂಡ ಕೋಟಿಗಾನಹಳ್ಳಿ ರಾಮಯ್ಯ ಅಭಿಪ್ರಾಯಪಟ್ಟರು.
ನಗರದ ಪತ್ರಕರ್ತರ ಭವನದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸಂವಿಧಾನದ ಕರಡು ಸಮಿತಿಯ ರಚನಾ ಸಮಿತಿಯಲ್ಲಿ ಸದಸ್ಯರಾಗಿದ್ದ ಟಿ.ಚನ್ನಯ್ಯ ಅವರನ್ನು ಅಂಬೇಡ್ಕರ್ ಮಾದರಿಯಲ್ಲಿ ಜನತೆ ಅವರನ್ನು ಗೌರವಿಸಬೇಕಾಗಿತ್ತೆಂದರು.
ಅಭಿವೃದ್ಧಿ ಮತ್ತು ಜ್ಞಾನಭಿವೃದ್ಧಿಯನ್ನು ಒಟ್ಟಿಗೆ ತೆಗೆದುಕೊಂಡು ಹೋಗುವುದರ ಜತೆಗೆ ಸಾರ್ವಜನಿಕರ ಸ್ವತ್ತುಗಳ ಬಗ್ಗೆ ಹೆಚ್ಚಿನ ಕಾಳಜಿಯನ್ನು ಕಾಪಾಡುತ್ತಿದ್ದ ಟಿ.ಚನ್ನಯ್ಯ ಅವರನ್ನು ಈ ನೆಲದ ಘನತೆಯ ಗುರುತಾಗಿ ಕಾಣಬೇಕಾಗಿತು. ಆದರೆ ಯಾರು ಸಹ ಇದನ್ನು ಮಾಡಲಿಲ್ಲ, ತಡವಾಗಿಯಾದರೂ ಇದನ್ನು ಪ್ರಗತಿಪರರು ಕೈಗೆತ್ತಿಕೊಂಡಿರುವುದು ಸಂತೋಷದ ವಿಷಯವಾಗಿದೆ ಎಂದು ತಿಳಿಸಿದರು.
ನಚಿಕೇತ ನಿಲಯವನ್ನು ಒಂದು ಸಾಂಸ್ಕೃತಿಕ ಆಯಾಮವನ್ನಾಗಿ ಮತ್ತು ಸ್ಪರ್ಧಾ ಜಗತ್ತಿಗೆ ತಯಾರು ಮಾಡುವಂತಹ ಕಲಿಕಾ ತರಬೇತಿ ಕೇಂದ್ರವನ್ನಾಗಿ ಮಾಡುವಂತಹ ಗುರಿಯನ್ನು ಸಮಿತಿ ಹೊಂದಿದೆ ಎಂದು ತಿಳಿಸಿದರು. ಸಮಿತಿ ಅಧ್ಯಕ್ಷ ಡಾ.ಎಂ. ವೆಂಕಟಸ್ವಾಮಿ ಮಾತನಾಡಿ ಕೋಲಾರ ಮತ್ತು ಚಿಕ್ಕಬಳ್ಳಾಪುರ ನಗರಗಳ ನಿರ್ಮಾತೃ  ಚನ್ನಯ್ಯ, ಕೋಲಾರ ಜಿಲ್ಲೆಗೆ ಪ್ರಪ್ರಥಮ ವಿದ್ಯುತ್, ಪೌರಾಡಳಿತ ನೀತಿಯನ್ನು ರೂಪಿಸಿದ ಚೆನ್ನಯ್ಯ ಅವರ ಜನ್ಮ ಶತಾಬ್ದಿಯನ್ನು ಅ.3 ರಂದು ನಗರದಲ್ಲಿ ಅದ್ಧೂರಿಯಾಗಿ ಆಚರಿಸಲಾಗುವುದೆಂದು ತಿಳಿಸಿದರು.
ಕೋಲಾರದ ನಚಿಕೇತ ನಿಲಯ ಮತ್ತು ಅದೇ ಮಾದರಿಯಲ್ಲಿ ಹಾಸ್ಟೆಲ್‌ಗಳನ್ನು ಮೈಸೂರು, ಹಾಸನ, ಚಿತ್ರದುರ್ಗ ಮತ್ತು ಬೆಂಗಳೂರಲ್ಲಿ ನಿರ್ಮಿಸಿ ಸಹಸ್ರ ಜನರಿಗೆ ಇವರು ವಿದ್ಯಾದಾನ ಮಾಡಿದ್ದಾರೆ ಎಂದು ತಿಳಿಸಿದರು. ಎರಡು ಜಿಲ್ಲೆಗಳಲ್ಲಿ ಸಮಾನ ಮನಸ್ಕ ಚಿಂತಕರು, ಎಲ್ಲಾ ವರ್ಗಗಳ ಮುಖಂಡರೇನಕರು ಕೋಲಾರದಲ್ಲಿ ಎರಡು ಸಭೆಗಳನ್ನು ಟಿ.ಚನ್ನಯ್ಯ ಅವರ ಪ್ರತಿಮೆ ಅನಾವರಣ, ಸ್ಮರಣ ಸಂಚಿಕೆ, ಸಾಕ್ಷ್ಯಚಿತ್ರ ಸಾಧನೆಗಳ ಗ್ರಂಥಗಳನ್ನು ಅಂದು ಬಿಡುಗಡೆ ಮಾಡಲಾಗುವುದೆಂದ ಅವರು, ಎಲ್ಲಾ ರಾಜಕೀಯ ಪಕ್ಷಗಳ, ಸಂಘ ಸಂಸ್ಥೆಗಳ ಮುಖಂಡರನ್ನೊಳಗೊಂಡ ಸ್ವಾಗತ ಸಮಿತಿಯನ್ನು ರಚಿಸಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸಮಿತಿಯ ಉಪಾಧ್ಯಕ್ಷ ಕೆ. ಚಂದ್ರಶೇಖರ್, ಗೌರವಾಧ್ಯಕ್ಷ ಭುವನಹಳ್ಳಿ ಚನ್ನಪ್ಪ, ಕಾರ್ಯಾಧ್ಯಕ್ಷ ಪಿಳ್ಳಪ್ಪ, ಖಜಾಂಚಿ ಎ.ಎಂ. ಸುರೇಶರಾಜ್, ಕಾರ್ಯದರ್ಶಿ ನರಸಾಪುರ ನಾರಾಯಣಸ್ವಾಮಿ, ಜಿ.ಪಂ. ಸದಸ್ಯ ಎಸ್.ಬಿ. ಮುನಿವೆಂಕಟಪ್ಪ, ಟಿ.ಚನ್ನಯ್ಯ ಪುತ್ರ ಬಾಲಾಜಿ ಚೆನ್ನಯ್ಯ, ಧನರಾಜ್, ಜಯದೇವ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.