ಕ್ರಿಕೆಟ್ ಕಿಟ್ ಆಸೆಗಾಗಿ ಮಹಿಳೆ ಕೊಲೆಗೈದ ಬಾಲಕ
ಕೋಲಾರ: ಒಂಟಿ ಮಹಿಳೆ ಮಂಜುಳ ಕೊಲೆ ಪ್ರಕರಣದ ಆರೋಪಿ ಬಾಲಕನಾಗಿದ್ದು ಕ್ರಿಕೆಟ್ ಕಿಟ್ ಆಸೆಗಾಗಿ ಆತೆ ಕೊಲೆ ಮಾಡಿರುವುದು ಗೊತ್ತಾಗಿದೆ.
ಕೊಲೆ ನಡೆದ ಜಾಗದಲ್ಲಿ ಸಿಕ್ಕಿದ ಸಾಕ್ಷ್ಯ ಆಧರಿಸಿ ಮಹಾಲಕ್ಷ್ಮೀ ಬಡಾವಣೆಯ ಖಾಸಗಿ ಶಾಲೆಯೊಂದರಲ್ಲಿ 10ನೇ ತರಗತಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಿಸಿದ್ದಾರೆ. ಆಗ ಈ ವಿಷಯ ಗೊತ್ತಾಗಿದೆ. ಕೊಲೆಪಾತಕ ಬಾಲಕನಾಗಿರುವುದರಿಂದ ಹೆಸರನ್ನು ಬಹಿರಂಗ ಪಡಿಸಲು ಪೊಲೀಸರು ನಿರಾಕರಿಸಿದ್ದಾರಲ್ಲದೆ, ಜೈಲಿನಲ್ಲಿ ಬಂಧಿಸಿಡುವುದಕ್ಕೆ ಕಾನೂನಿನ ತೊಡಕು ಇರುವುದರಿಂದ ನ್ಯಾಯಾಲಯದ ಸೂಚನೆಯಂತೆ ರಿಮ್ಯಾಂಡ್ ಹೋಂಮ್ಗೆ ಸೇರಿಸಿ, ತನಿಖೆ ಮುಂದುವರೆಸಿದ್ದಾರೆ. ಜೂ.1ರ ರಾತ್ರಿ ಮಂಜುಳ ತನ್ನ ಮನೆಯಲ್ಲಿದ್ದಾಗ ಅಲ್ಲಿಗೆ ಬಂದ ಬಾಲಕ ಕುಡಿಯಲು ನೀರು ಬೇಕೆಂದು ಕೇಳಿ, ಆಕೆ ನೀರು ತರಲು ಅಡುಗೆ ಮನೆಗೆ ಹೋದಾಗ ಚಾಕುವಿನಿಂದ ಹಲ್ಲೆಗೈದು ಕೊಲೆ ಮಾಡಿದ್ದಾನೆ.
ಹತ್ಯೆ ಆರೋಪಿ ಬಾಲಕನ ತಾಯಿಯ ಮೂಲಕ ಮಂಜುಳ ಮಹಾಲಕ್ಷ್ಮಿ ಬಡಾವಣೆಯಲ್ಲಿ ಬಾಡಿಗೆ ಮನೆ ಪಡೆದುಕೊಂಡಿದ್ದರು. ಇದರಿಂದಾಗಿ ಬಾಲಕ ಆಗಾಗ ಮಂಜುಳ ಮನೆಗೆ ಬಂದು ಹೋಗುತ್ತಿದ್ದ.
ಬಾಲಕನ ತಂದೆ ಬೆಂಗಳೂರಿನಲ್ಲಿ ಸೇಲ್ಸ್ಮನ್ ಆಗಿ ಕೆಲಸ ಮಾಡುತ್ತಿದ್ದಾರೆ. ದೊಡ್ಡ ಕ್ರಿಕೆಟ್ ಆಟಗಾರನಾಗಬೇಕೆಂಬ ಮಹದಾಸೆ ಹೊಂದಿದ್ದ ಬಾಲಕ ಕ್ರಿಕೆಟ್ ಕಿಟ್ಗಾಗಿ ಪೀಡಿಸುತ್ತಿದ್ದರಿಂದ ಈಗ ನಮ್ಮಲ್ಲಿ ಹಣವಿಲ್ಲ. ದುಡ್ಡು ಸಿಕ್ಕಾಗ ಆಸೆ ಈಡೇರಿಸುವುದಾಗಿ ತಾಯಿ-ತಂದೆ ಸಮಾಧಾನ ಪಡಿಸಿದರೆನ್ನಲಾಗಿದೆ. ಮನೆ ಬ್ರೋಕರ್ಗೆ ಮಂಜುಳ ನೀಡಬೇಕಾದ ಬಾಕಿ ಹಣವನ್ನು ತಾನು ಪಡೆದು ಅದರಲ್ಲಿ ಕ್ರಿಕೆಟ್ ಕಿಟ್ ಕೊಂಡುಕೊಳ್ಳುವ ಬಗ್ಗೆ ಲೆಕ್ಕಾಚಾರ ಹಾಕಿದ್ದ ಬಾಲಕ ಜೂ.1 ರಾತ್ರಿ ಬಾಕಿ ಹಣದ ಬಗ್ಗೆ ಕೇಳಿದ್ದಾನೆ, ಅಂಕಲ್ ಬಂದಾಗ ಕೊಡುತ್ತೇನೆ ಎಂದು ಹೇಳಿದ್ದಾರೆ. ಇದರಿಂದ ಹತಾಶನಾದ ಬಾಲಕ ಕುಡಿಯಲು ನೀರು ಬೇಕೆಂದು ಕೇಳಿ ಆಕೆ ನೀರು ತರಲು ಕೋಣೆಯೊಳಗೆ ಹೋದಾಗ ಚಾಕುವಿನಿಂದ ಕೊಲೆ ಮಾಡಿ ಯಾರಿಗೂ ಅನುಮಾನ ಬರದಂತೆ ತನ್ನ ಮನೆ ಸೇರಿದ್ದ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

