ಕೋಲಾರ

ಮಳೆ ಗಾಳಿಗೆ ಸೌರಶಕ್ತಿ ವಿದ್ಯುತ್ ಘಟಕ ನಾಶ

Published On :

ಬಂಗಾರಪೇಟೆ: ತಾಲೂಕಿನ ಯಳೇಸಂದ್ರ ಗ್ರಾಮದಲ್ಲಿ 3 ಮೆಗಾ ವ್ಯಾಟ್‌ನ ಸೋಲಾರ್ ವಿದ್ಯುತ್ ಘಟಕದಲ್ಲಿ ಸುಮಾರು 25 ಲಕ್ಷಕ್ಕೂ ಅಧಿಕ ಮೌಲ್ಯದ ಫಲಕಗಳು ಸೋಮವಾರ ಸಂಜೆ ಬಿರುಗಾಳಿ ಮತ್ತು ಮಳೆಗೆ ಸಿಲುಕಿ ಹಾಳಾಗಿವೆ.
ಬೂದಿಕೋಟೆ ಸಮೀಪದ ಯಳೆಸಂದ್ರ ಸೌರಶಕ್ತಿ ವಿದ್ಯುತ್ ಘಟಕದಲ್ಲಿನ ಸುಮಾರು 105 ಸೌರ ಶಕ್ತಿ ಫಲಕಗಳು ಹಾಗೂ ಅಡಿಪಾಯ ಸಮೇತ ನೆಲಕಚ್ಚಿವೆ. ಘಟಕದಿಂದ ಹಳ್ಳಿಗಳಿಗೆ ಸರಬರಾಜು ಮಾಡಲಾಗಿದ್ದ 3 ಮೆಗಾ ವ್ಯಾಟ್‌ನ ಫಲಕಗಳ ನಾಶದಿಂದ 45 ಕಿ.ವ್ಯಾ. ವಿದ್ಯುತ್ ಉತ್ಪಾದನೆ ಕುಂಠಿತವಾಗಿದೆ ಎಂದು ಘಟಕದ ಕಾರ್ಯನಿರ್ವಹಣಾ ಎಂಜಿನಿಯರ್ ಕೃಷ್ಣರಾಜು ತಿಳಿಸಿದ್ದಾರೆ.
2010ನೇ ಸಾಲಿನಲ್ಲಿ ಅರುಣೋದಯ ಎಂಬ ಹೆಸರಿನಲ್ಲಿ ಗ್ರಾಮೀಣ ಪ್ರದೇಶಗಳಿಗೆ ನಿಶ್ಚಿತ ಸೌರ ಶಕ್ತಿ ವಿದ್ಯುತ್ ಪೂರೈಸುವ ಯೋಜನೆಯಡಿ ಈ ಘಟಕವನ್ನು ಆರಂಭಿಸಲಾಗಿತ್ತು.
ಈ ಯೋಜನೆಯ ಪ್ರಾರಂಭದಿಂದ ಬೂದಿಕೋಟೆ ಹೋಬಳಿಯ ರೈತರಿಗೆ ಹಾಗೂ ಗ್ರಾಮಗಳಿಗೆ ನಿರಂತರವಾಗಿ ವಿದ್ಯುತ್ ಪೂರೈಕೆಯಾಗುತ್ತಿತ್ತು ಎಂದು ಅವರು ತಿಳಿಸಿದ್ದಾರೆ. ಸ್ಥಳಕ್ಕೆ ತಹಸೀಲ್ದಾರ್ ಉಷಾ, ವಿದ್ಯುತ್ ನಿಗಮದ ಎಂಜನಿಯರ್ ಆಗಮಿಸಿ ಪರಿಶೀಲಿಸಿದ್ದಾರೆ.
ಪರಿಹಾರಕ್ಕೆ ಆಗ್ರಹ
ಶಿಡ್ಲಘಟ್ಟ: ಬರಗಾಲ ಪೀಡಿತ ಪ್ರದೇಶವಾಗಿರುವ ತಾಲೂಕಿನಲ್ಲಿ ಇತ್ತಿಚೆಗೆ ಬಿದ್ದ ಭಾರೀ ಆನೆಕಲ್ಲು ಸಹಿತ ಮಳೆಯಿಂದಾಗಿ ನಾಶವಾಗಿರುವ ಬೆಳೆಗಳಿಗೆ ಸೂಕ್ತ ಪರಿಹಾರವನ್ನು ನೀಡಬೇಕು ಎಂದು ತಾಲೂಕು ರೈತ ಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿಗಳು ತಹಸೀಲ್ದಾರ್‌ರ  ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ಪಟ್ಟಣದ ತಾಲೂಕು ಕಚೇರಿಯಲ್ಲಿ ಮನವಿ ಸಲ್ಲಿಸಿರುವ ಅವರು, ಈ ಭಾಗದ ರೈತರಿಗೆ ಅಪಾರ ನಷ್ಟವಾಗಿದ್ದು, ಸರ್ಕಾರ ಕೂಡಲೇ ಈ ಭಾಗದ ರೈತರ ನೆರವಿಗೆ ಬರಬೇಕು ಎಂದು ಆಗ್ರಹಿಸಿದ್ದಾರೆ.
ತಾಲೂಕು ರೈತ ಸಂಘದ ಅಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ, ಉಪಾಧ್ಯಕ್ಷ ಮುನಿನಂಜಪ್ಪ, ಎಂ.ದೇವರಾಜು, ಟಿ.ಆರ್.ದೇವರಾಜು, ಎನ್.ಎಸ್.ಶ್ರೀನಿವಾಸ್, ಮುಂತಾದವರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.