ಲೋಕ ಕಲ್ಯಾಣಕ್ಕಾಗಿ ಬೇವಿನ ಮರಗಳಿಗೆ ಕಲ್ಯಾಣೋತ್ಸವ
ಬಂಗಾರಪೇಟೆ: ಪೊಲೇನಹಳ್ಳಿಯಲ್ಲಿ ನೆಲೆಸಿರುವ ಪುರಾಣ ಪ್ರಸಿದ್ಧ ಶ್ರೀ ವೀರಾಂಜನೇಯ ಸ್ವಾಮಿ ದೇವಾಲಯದ ಆವರಣದಲ್ಲಿ ಅಶ್ವತ ಮತ್ತು ಬೇವಿನ ಮರಗಳಿಗೆ ಲೋಕಕಲ್ಯಾಣಾರ್ಥವಾಗಿ ಕಲ್ಯಾಣೋತ್ಸವವನ್ನು ಗುರುವಾರ ಅದ್ಧೂರಿಯಾಗಿ ಆಚರಿಸಲಾಯಿತು.
ಈ ದೇವಾಲಯ ಆವರಣದೊಳಗೆ ಕಾಲಿಡುತ್ತಿದ್ದಂತೆ ಭಕ್ತಾಧಿಗಳನ್ನು ಸುಂದರವಾದ ಪರಿಸರ ಕೈಬೀಸಿ ಕರೆಯುತ್ತದೆ. ಬೆಟ್ಟದ ಮೇಲೆ ದೇವಾಲಯ ಇರುವುದರಿಂದ ನೋಡಲು ಎರಡು ಕಣ್ಣುಗಳು ಸಾಲದು.ಇಲ್ಲಿ ಬಡವರು ಹಾಗೂ ಮಧ್ಯಮ ವರ್ಗದ ಜನರ ಶುಭ ಕಾರ್ಯಗಳಿಗೆ ಅನುಕೂಲವಾಗುವಂತೆ ಕಲ್ಯಾಣ ಮಂಟಪ, ಸಮುದಾಯ ಭವನವನ್ನು ನಿರ್ಮಿಸಿ ಉಚಿತವಾಗಿ ಕೊಡಲಾಗುತ್ತಿದೆ.
ಪ್ರತಿ ಶನಿವಾರ ಹಾಗೂ ಹುಣ್ಣಿಮೆ ದಿನ ವಿಶೇಷ ಪೂಜೆಗಳು ನಡೆಯುತ್ತಿದ್ದು ಅಂದು ಅಪಾರ ಸಂಖ್ಯೆಯಲ್ಲಿ ಭಕ್ತಾಧಿಗಳು ಬರುವರು. ಈಗ ಬೇವಿನ ಮರ ಹಾಗೂ ಅಶ್ವತರ ಮಗಳನ್ನು ನಿರ್ಮಾಣ ಮಾಡಿ ಗುರುವಾರ ಕಲ್ಯಾಣೋತ್ಸವ ಮಾಡಲಾಯಿತು. ಅಪಾರ ಸಂಖ್ಯೆಯಲ್ಲಿ ಭಕ್ತಾಧಿಗಳು ಈ ಶುಭ ಕಾರ್ಯದಲ್ಲಿ ಸೇರಿದ್ದರು. ಈ ಪ್ರಸಿದ್ಧ ದೇವಾಲಯ ಆಂಧ್ರ ಪ್ರದೇಶದ ಗಡಿಯಲ್ಲಿದ್ದು ಆಂದ್ರದಿಂದಲೂ ಭಕ್ತಾಧಿಗಳು ಬರುವುದು ವಿಶೇಷವಾಗಿದೆ.
ಈ ಸ್ಥಳ ಪ್ರವಾಸಿರಗನ್ನು ಸೆಳೆಯುವಂತ ಸ್ಥಳವಾಗಿದ್ದು ಪ್ರಚಾರದ ಕೊರತೆಯಿಂದಾಗಿ ಬೆಳಕಿಗೆ ಬಂದಿಲ್ಲ. ಕಲ್ಯಾಣೋತ್ಸವದಲ್ಲಿ ದೇವಾಲಯ ವ್ಯವಸ್ಥಾಪಕ ಟಿ.ಮುನಿರಾಜು, ಜಿಪಂ ಎಂಜಿನಿಯರ್ ಗಂಗಾಧರ್, ದೋಣಿಮಗಡು ಗ್ರಾಮ ಪಂ- ಮಾಜಿ ಅಧ್ಯಕ್ಷ ಎಂ. ಗೋಪಿನಾಥ್, ಮುಖಂಡರಾದ ನಾಗಮಣಿ, ರಾಮು, ಈರಪ್ಪ, ನಾಗರಾಜ್, ಕೋದಂಡಪ್ಪ ಮತ್ತಿತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

