ಕೋಲಾರ

ಇಂದು ಕೋಚಿಮುಲ್ ಅಧ್ಯಕ್ಷ ಗಾದಿಗೆ ಚುನಾವಣೆ

Published On :

ಕೋಲಾರ: ಪ್ರತಿಷ್ಠಿತ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರಿ ಹಾಲು ಒಕ್ಕೂಟದ ಅಧ್ಯಕ್ಷರ ಆಯ್ಕೆಯಾಗಿ ಶನಿವಾರ ಮಧ್ಯಾಹ್ನ ಕೋಚಿಮುಲ್ ಆಡಳಿತ ಭವನದಲ್ಲಿ ಚುನಾವಣೆ ನಡೆಯಲಿದೆ.
ಕೋಲಾರ ಉಪವಿಭಾಗಾಧಿಕಾರಿ ಮಂಜುನಾಥ್ ಅವರು ಚುನಾವಣಾಧಿಕಾರಿ ಆಗಿದ್ದು, ಅಧ್ಯಕ್ಷರ ಆಯ್ಕೆಯಾಗಿ ವಿಶೇಷ ಸಭೆಯನ್ನು ಕರೆದಿದ್ದಾರೆ. ಆಡಳಿತಾರೂಢ ಕಾಂಗ್ರೆಸ್ಗೆ ಸರ್ಕಾರದ ನಾಮ ನಿರ್ದೇಶಕ ಹಾಗೂ ಕೆಎಂಎಫ್ನ ಮೂವರು ಅಧಿಕಾರಿಗಳು ಮತ ಹಾಕುವ ಸಾಧ್ಯತೆಗಳಿರುವುದರಿಂದ ಕೋಚಿಮುಲ್ ಆಡಳಿತ ಹಿಡಿಯುವುದು ಬಹುತೇಕ ಖಚಿತವಾಗಿದೆ.
ಈ ಮಧ್ಯೆ ಜೆಡಿಎಸ್ನಿಂದ ಆಯ್ಕೆಯಾಗಿರುವ ಚಿಕ್ಕಬಳ್ಳಾಪುರದ ಕೆ.ವಿ.ನಾಗರಾಜ್, ಬಂಗಾರಪೇಟೆಯ ಜಯಸಿಂಹ ಕೃಷ್ಣಪ್ಪ ಹಾಗೂ ಕೋಲಾರದ ರಾಮಕೃಷ್ಣೇಗೌಡ ಅವರು ಕೆಎಂಎಫ್ನ ಅಧಿಕಾರಿಗಳಿಗೆ ಮತದಾನದ ಹಕ್ಕು ನೀಡದಂತೆ ಮನವಿ ಮಾಡಿದ್ದಾರೆ.
ಕುದುರೆ ವ್ಯಾಪಾರ ಮೂಲಕ ಕಾಂಗ್ರೆಸ್ ಬೆಂಬಲಿತ ನಿರ್ದೇಶಕರನ್ನು ಹಾಗೂ ಪಕ್ಷೇತರ ನಿರ್ದೇಶಕರೊಬ್ಬರನ್ನು ಬುಟ್ಟಿಗೆ ಹಾಕಿಕೊಂಡು ಅದಿಕಾರ ಹಿಡಿಯಲು ಜೆಡಿಎಸ್ ಸಹ ಪ್ರಯತ್ನಿಸುತ್ತಿದೆ. ಈ ಪಕ್ಷದ ಜಯಸಿಂಹಕೃಷ್ಣಪ್ಪ, ಕೆ.ವಿ. ನಾಗರಾಜ್, ಮಾಲೂರಿನ ನಂಜೇಗೌಡ ಹಾಗೂ ಕೋಲಾರದ ರಾಮಕೃಷ್ಣೇಗೌಡ ಅವರ ನಡುವೆ ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ ಇದ್ದರೂ, ಕಾಂಗ್ರೆಸ್ ಮುಖಂಡರು ಗೌರಿಬಿದನೂರಿನ ಕಾಂತರಾಜ್ ಅಧ್ಯಕ್ಷರಾಗಲು ಒಪ್ಪಿರುವುದರಿಂದ ಇವರ ಆಯ್ಕೆ ಬಹುತೇಕ ಖಚಿತವಾಗಿದೆಯಾದರೂ ಕುದುರೆ ವ್ಯಾಪಾರ ಜೋರಾಗಿದ್ದಲ್ಲಿ ವ್ಯತ್ಯಾಸಗಳಾಗುವ ಸಾಧ್ಯತೆಗಳಿವೆ.


ಕನ್ನಡಪ್ರಭ
ವರದಿ ಪ್ರಸ್ತಾಪ
ಕನ್ನಡಪ್ರಭದ ಶುಕ್ರವಾರ ಸಂಚಿಕೆಯಲ್ಲಿ ಪ್ರಕಟವಾದ ವರದಿ ಕುರಿತು ಪ್ರತಿಕ್ರಿಯಿಸಿದ ಮಾಸ್ತಿ ಗ್ರಾಪಂ ಅಧ್ಯಕ್ಷ ಎಚ್.ವಿ.ಶ್ರೀನಿವಾಸ್, ಮಾಸ್ತಿ ಅವರ ಹೆಸರಿನಲ್ಲಿರುವ ಟ್ರಸ್ಟ್ ಕೇವಲ ಬೆಂಗಳೂರಿಗೆ ಮಾತ್ರ ಸೀಮಿತವಾಗಿದೆ. ಇವರ ಹೆಸರಿನಲ್ಲಿ ನೀಡುವ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಗ್ರಾಮದಲ್ಲೆ ನಡೆಸಬೇಕೆಂದು ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.