ಕೋಲಾರ

ಹೊಸಗನ್ನಡ ಸಾಹಿತ್ಯಕ್ಕೆ ಮಾಸ್ತಿ ಬುನಾದಿ

Published On :

ಟೇಕಲ್: ನವೋದಯದ ಹಿರಿಯ ಸಾಹಿತಿ ಡಾ.ಮಾಸ್ತಿ ಅವರು ಹೊಸಗನ್ನಡ ಸಾಹಿತ್ಯಕ್ಕೆ ಗಟ್ಟಿ ಬುನಾದಿ ಹಾಕಿದ್ದಾರೆ ಎಂದು ಖ್ಯಾತ ಸಾಹಿತಿ, ಕಥೆಗಾರ ಡಾ. ಕೆ.ಸತ್ಯನಾರಾಯಣ ತಿಳಿಸಿದರು.
ಮಾಸ್ತಿ ಗ್ರಾಮದಲ್ಲಿರುವ ಮಾಸ್ತಿ ಪೆರಿಯತ್ ಗ್ರಂಥಾಲಯದಲ್ಲಿ ವೆಂಕಟೇಶ್ ಅಯ್ಯಂಗಾರ್ ಟ್ರಸ್ಟ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಶುಕ್ರವಾರ ಆಯೋಜಿಸಲಾಗಿದ್ದ ಡಾ. ಮಾಸ್ತಿ ಅವರ 123ನೇ ಜನ್ಮ ದಿನಾಚರಣೆಯಲ್ಲಿ ಉಪನ್ಯಾಸ ನೀಡಿದರು.
ಮಾಸ್ತಿ ಅವರು ಸಣ್ಣಕಥೆಗಳ ಜನಕರು. ಅವರ ಜೀವನ ಪತ್ರಿಕೆ ಅಂದಿನ ಸಾಹಿತಿಗಳಿಗೆ ಬರಹದ ವೇದಿಕೆಯಾಗಿತ್ತು. ಡಾ.ವೆಂಕಟೇಶ್ ಅಯ್ಯಂಗಾರ್ ಅವರು ಸಾಹಿತ್ಯದ ಬಹುತೇಕ ಎಲ್ಲಾ ಪ್ರಮುಖ ಪ್ರಕಾರಗಳಲ್ಲಿ ತಮ್ಮ ಕೊಡುಗೆ ನೀಡಿದ್ದಾರೆ. ಹಾಗಾಗಿಯೇ ಅವರು 'ಕನ್ನಡದ ಆಸ್ತಿ' ಎನಿಸಿಕೊಂಡಿದ್ದಾರೆ. ನೂರಾರು ಕಥೆಗಳನ್ನು ಬರೆದು ಕನ್ನಡಕ್ಕೆ 4ನೇ ಜ್ಞಾನಪೀಠ ತಂದುಕೊಟ್ಟ ಮಾಸ್ತಿ ಅವರು, ಮೊಟ್ಟ ಮೊದಲ ಬಾರಿಗೆ ದೆಹಲಿಗೆ ಸೀಮಿತವಾಗಿದ್ದ ಅಕಾಡೆಮಿಯನ್ನು ಬೆಂಗಳೂರಿಗೆ ಬರುವಂತೆ ಮಾಡಿದವರಲ್ಲಿ ಮೊದಲಿಗರು. ಮಾಸ್ತಿಯವರಂತ ಸೌಜನ್ಯ, ಹೃದಯವಂತರನ್ನು ಇಂದಿನ ದಿನಗಳಲ್ಲಿ ಕಾಣಲು ಅಸಾಧ್ಯ ಎಂದು ಹೇಳಿದರು. ಮಾಸ್ತಿ ಟ್ರಸ್ಟ್  ಅಧ್ಯಕ್ಷ ಮಾವಿನಕೆರೆ ರಂಗನಾಥನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಎಸ್ಸೆಸ್ಸೆಲ್ಸಿ ಮತ್ತು ಪಿಯೂ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಪಡೆದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಸಾಹಿತಿ ಲಕ್ಷ್ಮೀಪತಿ ಕೋಲಾರ ಅವರ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆಯಿತು. ತಹಸೀಲ್ದಾರ್ ಶಿವಕುಮಾರ್, ವೆಂಕಟಾಚಲಪತಿ, ನಾರಾಯಣಸ್ವಾಮಿ, ಯಶೋಧಮ್ಮ, ಸಿ.ಎಂ. ನಾಗರಾಜ್, ಜೆ.ಜಿ.ನಾಗರಾಜ್, ಎ.ಅಶ್ವತ್ಥರೆಡ್ಡಿ, ತಎಂ.ಜಿ.ಮಧುಸೂದನ್, ಡಿ.ಎಂ. ವಿಜಯಕುಮಾರ್, ಚಂದ್ರಪ್ಪ, ಎಚ್.ವಿ. ಸುಬ್ರಮಣ್ಯಂ, ಕೆಸರಗೆರೆ ಬೀರಪ್ಪ, ರಾಮಕೃಷ್ಣಪ್ಪ, ರಾಮಕೃಷ್ಣಪ್ಪ, ಎಸ್.ಎಂ.ರಾಜು, ಲತಾಬಾಯಿ ಸೇರಿ ಅನೇಕರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.