ಮೊದ್ಲು ರಾಜಕೀಯ ಬಿಡಿ, ಅಭಿವೃದ್ಧಿಗೆ ಮನ ಮಾಡಿ..
ಕೋಲಾರ: ಜನರು ನಗರಸಭೆ ಮೇಲೆ ಜನತೆ ಅಪಾರವಾದ ನಂಬಿಕೆ, ವಿಶ್ವಾಸ ಹೊಂದಿದ್ದಾರೆ. ಸದಸ್ಯರು ಅಭಿವೃದ್ಧಿ ಪರವಾದ ರಾಜಕಾರಣ ಮಾಡದೆ ಮುನ್ಸಿಪಾಲಿಟಿ ರಾಜಕೀಯ ಮಾಡಿದರೆ ತಕ್ಕ ಪಾಠ ಕಲಿಸುತ್ತಾರೆ ಎಂದು ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಬಿ.ವಿ.ಗೋಪಿನಾಥ್ ಮಾರ್ಮಿಕವಾಗಿ ನುಡಿದರು.
ನಗರದ ಪತ್ರಕರ್ತರ ಭವನದಲ್ಲಿ ಶನಿವಾರ ಭಾರತ ಸೇವಾ ದಳದಿಂದ ಹಮ್ಮಿಕೊಂಡಿದ್ದ ನಗರಸಭಾ ಸದಸ್ಯರ ಅಭಿನಂದನಾ ಸಮಾರಂಭ ಹಾಗೂ ಚಿಂತನ-ಮಂಥನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಹಿರಿಯರಾದ ಸಾ.ಮ.ರಂಗಪ್ಪ, ಜಿ.ರಾಮರಾಜು, ಅತ್ತಾವುಲ್ಲಾ, ಚಂದ್ರಣ್ಣ, ಸೂರಿ ಇನ್ನಿತರ ಹಿರಿಯ ಕಾಲದಲ್ಲಿ ನಗರಸಭೆಯ ಆಡಳಿತ ಜನಪರವಾಗಿತ್ತು. ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದರು. ಇವರ ಕಾರ್ಯಕ್ರಮಗಳಿಂದಾಗಿ ನಗರದರಲ್ಲಿ ಕೆಲವು ವಾಣಿಜ್ಯ ಸಂಕೀರ್ಣಗಳು,ಗಾಂಧಿವನ, ಜೋಡಿ ರಸ್ತೆಗಳು ಸಾಕ್ಷಿಯಾಗಿ ನಿಂತಿವೆ ಎಂದರು.
ವಿಷನ್-2025ಕ್ಕೆ ಸಲಹೆ: ಮುಂದಿನ 25 ವರ್ಷಗಳ ದೂರದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ನಗರದ ಅಭಿವೃದ್ಧಿಗೆ ಪೂರಕವಾದ ಕಾರ್ಯ ಯೋಜನೆಯನ್ನು ಸಿದ್ಧಪಡಿಸಬೇಕು, ಅಂತಹ ದಿಟ್ಟ ತನದ ಎದೆಗಾರಿಕೆ ಹಾಗೂ ಚಿಂತನಶೀಲತೆ ಪ್ರೇರಣೆಯಾಗುವಂತಾಗಲಿ, ನಗರಸಭೆಯಲ್ಲಿ ನಡೆಯುವ ಸಭೆಗಳಲ್ಲಿ ವಿಷಯಾಧಾರಿತ ಅಜೆಂಡಗಳು ಇರಬೇಕು, ಆರೋಗ್ಯಕರ ಚರ್ಚೆಗಳ ಮೂಲಕ ನಗರದ ಅಭಿವೃದ್ಧಿ ಹೆಚ್ಚಿಸಲು ಶ್ರಮಿಸಬೇಕೆಂದು ಕಿವಿಮಾತು ಹೇಳಿದರು.
ಭಾರತ ಸೇವಾದಳದ ಕಾರ್ಯಾಧ್ಯಕ್ಷ ಕೆ.ಎಸ್.ಗಣೇಶ್ ಮಾತನಾಡಿ, ಸೇವೆಗಾಗಿ ಬಾಳು ಎಂಬ ಭಾರತ ಸೇವಾದಳದ ಧ್ಯೇಯದಂತೆ, ಚುನಾಯಿತ ಜನಪ್ರತಿನಿಧಿಗಳು ಜನರ ಸೇವೆಯಲ್ಲಿ ತೊಡಗಿಸಿಕೊಂಡಾಗ ಜನಮೆಚ್ಚಿದ ವ್ಯಕ್ತಿಯಾಗುತ್ತಾರೆ ಈ ಮೂಲಕ ಉತ್ತಮ ನಾಯಕತ್ವ ರೂಪಿಸಿಕೊಳ್ಳಬಹುದು ಎಂದರು.
ಸೇವಾದಳದ ಕೇಂದ್ರ ಸಮಿತಿ ಸದಸ್ಯ ಬಿ.ವಿ.ವೆಂಕಟನಾರಾಯಣ, ನಗರಸಭಾ ಸದಸ್ಯರಾದ ಸಲ್ಲಾವುದ್ದಿನ್ಬಾಬು, ಗಾಂಧಿನಗರ ನಾರಾಯಣಸ್ವಾಮಿ, ನಾರಾಯಣಮ್ಮ, ಸೋಮಶೇಖರ್, ಸೇವಾದಳದ ಸದಸ್ಯ ಪಲ್ಲವಿಮಣಿ, ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಜಿ.ಶ್ರೀನಿವಾಸ್ ಮಾತನಾಡಿದರು. ಕೆಯುಡಿಎ ಆಯುಕ್ತ ಕೆ.ಎಸ್.ನಾಗರಾಜಗೌಡ, ಸೇವಾದಳದ ಪ್ರತಿನಿಧಿಗಳಾದ ವಿ.ವೆಂಕಟೇಶ್, ವಿ.ಪಿ.ಸೋಮಶೇಖರ್, ರವಿಕುಮಾರ್, ವೈ.ಶಿವಕುಮಾರ್, ವೆಂಕಟನರಸಪ್ಪ, ಎಂ.ಶ್ರೀನಿವಾಸ್, ಚಾಮುಂಡೇಶ್ವರಿ ಮತ್ತಿತರರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

