ನೀರಿನ ಕೊರತೆ: ಮೀನು ಮರಿ ಉತ್ಪಾದನೆ ಸ್ಥಗಿತ
ಬಂಗಾರಪೇಟೆ: ತಾಲೂಕಿನ ಬೂದಿಕೋಟೆ ಬಳಿಯಿರುವ ಮಾರ್ಕಾಂಡೇಯ ಮೀನು ಮರಿ ಉತ್ಪಾದನೆ ಕೇಂದ್ರದಲ್ಲಿ ನೀರಿಲ್ಲದೆ ಉತ್ಪಾದನೆ ಸ್ಥಗಿತಗೊಂಡಿದೆ.
ವರ್ಷಕ್ಕೆ ಕನಿಷ್ಠ 40 ಲಕ್ಷ ಮೀನು ಮರಿ ಮಾರಾಟವಾಗುತ್ತಿದ್ದ ಸ್ಥಳ ಈಗ ಬಿಕೋ ಎನ್ನುತ್ತಿದೆ. ಇದೇ ಕಸುಬಿನಲ್ಲಿ ನಿರತರಾಗಿದ್ದ ರೈತರು ಪರ್ಯಾಯ ಕೆಲಸಕ್ಕೆ ತಡಕಾಡುತ್ತಿದ್ದಾರೆ.
ಕೆರೆ ಕುಂಟೆಗಳಲ್ಲಿ ನೀರಿದ್ದ ಸಂದರ್ಭ ರೈತರು ಮೀನು ಮರಿ ಕೃಷಿಯಲ್ಲಿ ತೊಡಗಿದ್ದರು. ಒಂದು ಮೀನು ಮರಿ 25 ಪೈಸೆಗೆ ಖರೀದಿಸಿ ಗುತ್ತಿಗೆಗೆ ಪಡೆದ ಕೆರೆ ಕುಂಟೆಗಳಲ್ಲಿ ಬಿಡುತ್ತಿದ್ದರು. ನಂತರ ಬೆಳೆದ ಮೀನುಗಳನ್ನು ಮಾರಾಟ ಮಾಡುತ್ತಿದ್ದರು.
ತಾಲೂಕಲ್ಲಿ ಬರ: ಕಳೆದ ಒಂಬತ್ತು ವರ್ಷಗಳಿಂದ ತಾಲೂಕಿನಲ್ಲಿ ಬರ ಆವರಿಸಿದೆ. ಮಳೆ ಇಲ್ಲದೆ ಕೆರೆ, ಕುಂಟೆಗಳು ಬತ್ತಿಹೋಗಿವೆ. ಹಾಗಾಗಿ ದಿನಕ್ಕೆ ಸರಾಸರಿ 1.5 ಲಕ್ಷದಷ್ಟು ಮಾರಟ ಆಗುತ್ತಿದ್ದ ಮೀನು ಮರಿ ಉತ್ಪಾದನೆ ಎರಡು ವರ್ಷಗಳಿಂದ ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ.
ಬಿತ್ತನೆ ಮೀನು ಸಕಾಣಿಕೆಗೆ ವಿವಿಧ ವಿಸ್ತೀರ್ಣದ ಸುಮಾರು 51 ಮೀನು ಮರಿ ಸಾಕಾಣಿಕೆ ತೊಟ್ಟಿಗಳಿವೆ. ಜಲಾಶಯದ ನೀರಿನ ಮೂಲ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಎರಡು ಕೊಳವೆ ಬಾವಿಗಳನ್ನು ಕೊರೆಸಲಾಗಿದೆ. ಎರಡರ ಪೈಕಿ ಒಂದು ಕೊಳವೆ ಬಾವಿಯಲ್ಲಿ ಮಾತ್ರ ನೀರು ಬರುತಿದ್ದು, ಮತ್ತೊಂದರಲ್ಲಿ ನೀರಿನ ಹರಿವು ತೀರ ಕಡಿಮೆಯಾಗಿದೆ. ಹಾಗಾಗಿ ಪಸ್ತುತ ಕೇವಲ ಮೂರು ತೊಟ್ಟಿಗಳಲ್ಲಿ ಮಾತ್ರ ಬಿತ್ತನೆ ಮೀನು ಸಕಾಣಿಕೆ ನಡೆದಿದೆ.
ಇಲ್ಲಿ ಸಾಮಾನ್ಯ ಗೆಂಡೆ ಮೀನು ಮಾತ್ರ ಉತ್ಪಾದಿಸಲಾಗಿದ್ದು, ರೈತರ ಬೆಡಿಕೆಯಂತೆ ವಿವಿಧ ತಳಿ ಮೀನುಗಳನ್ನು ಬೇರೆ ಕಡೆಯಿಂದ ತರಸಿ ವಿತರಿಸುವ ವ್ಯವಸ್ಥೆ ಕೂಡ ಇದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

