ಕೋಲಾರ

ಕೊಳವೆಬಾವಿ ಕೊರೆಸಲು ಕೆಜಿಎಫ್ ಶಾಸಕಿ ಚಾಲನೆ

Published On :

ಕೆಜಿಎಫ್: ಕ್ಷೇತ್ರದಲ್ಲಿ ನೀರಿನ ಸಮಸ್ಯೆ ನಿವಾರಿಸಲು ಕೊಳವೆ ಬಾವಿಗಳನ್ನು ಕೊರೆಸಿ ಓವರ್ಹೆಡ್ ಟ್ಯಾಂಕ್ಗಳನ್ನು ನಿರ್ಮಿಸಲಾಗುವುದು ಎಂದು ಶಾಸಕಿ ವೈ.ರಾಮಕ್ಕ ಹೇಳಿದರು.
ನಗರದ ಕೃಷ್ಣಾವರಂ ಪ್ರದೇಶದಲ್ಲಿ 1.5 ಕೋಟಿ ವೆಚ್ಚದಲ್ಲಿ 10 ಬೋರ್ವೆಲ್ ಕೊರೆಸಲು ಚಾಲನೆ ನೀಡಿ ಮಾತನಾಡುತ್ತಿದ್ದರು.
ಕೃಷ್ಣಾವರಂ ಪ್ರದೇಶದಲ್ಲಿ ನೀರು ಹೆಚ್ಚು ಸಿಗುತ್ತಿರುವುದರಿಂದ ಈ ಭಾಗದಲ್ಲಿ ಕೊಲೆ ಬಾವಿಗಳನ್ನು ಕೊರೆಸಲಾಗುತ್ತಿದೆ. ಇಲ್ಲಿಂದ ಉರಿಗಾಂ ಹಾಗೂ ಇತರೆ ನೀರು ಸರಬರಾಜು ಮಂಡಳಿಗೆ ಪೈಪ್ಗಳ ಮೂಲಕ ನೀರನ್ನು ಪೂರೈಸಿ ನಗರದ ಸುಮಾರು 15 ವಾರ್ಡ್ಗಳಿಗೆ ಕುಡಿಯುವ ನೀರು ಸಮಸ್ಯೆ ಬಗೆಹರಿಸಲಾಗುವುದು ಎಂದು ತಿಳಿಸಿದರು. ಮುಂದಿನ ದಿನಗಳಲ್ಲಿ ಮಾಪಿಕುಪ್ಪಂಯ ನಾಗಾವರಂ ಓಣಿಯಲ್ಲಿ ಕೊಳವೆ ಬಾರಿ ಕೊರೆಸಿ ಚಿನ್ನದ ಗಣಿ ಪ್ರದೇಶಕ್ಕೆ ನೀರು ಪೂರೈಸಲಾಗುವುದು ಎಂದು ತಿಳಿಸಿದರು. ಮಾಜಿ ಶಾಸಕ ವೈ.ಸಂಪಂಗಿ, ಸುರೇಶ್ನಾರಾಯಣ್, ಬಾಟಾ ಗೋಪಾಲ್, ಜಯಕುಮಾರ್, ಯಶ್ವಂತ್ರಾಜ್, ಗಿರಿಜಾಗಾಂಧಿ, ರವಿ, ದೀಪಾರಂಕ, ರಘುನಾಥಯ್ಯಶೆಟ್ಟಿ, ರವೀಂದ್ರ ಸೇರಿ ಅನೇಕರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.