ಮದ್ವೆಗೆ ಬಂದವರು ಗಿಡ ತಗೊಂಡು ಹೋದ್ರು!
ಬಂಗಾರಪೇಟೆ: ಇಲ್ಲೊಬ್ಬರು ಮದುವೆ ಮಂಟಪದಲ್ಲಿ ವಿವಾಹಕ್ಕೆ ವಧುವರರನ್ನು ಹಾರೈಸಲು ಬರುವ ಬಂಧು ಮಿತ್ರರಿಗೆ ತಾಂಬೂಲ ಬದಲು ಗಿಡಗಳನ್ನು ನೀಡುವ ಮೂಲಕ ತಮಗಿರುವ ಪರಿಸರ ಕಾಳಜಿ ತೋರಿದ್ದಾರೆ.
ಪಟ್ಟಣದ ವೇಣುಕುಮಾರ್ ಅವರಿಗೆ ಮೊದಲಿನಿಂದಲೂ ಪರಿಸರ ಕಾಳಜಿ. ಇವರ ಸಂಘಟನೆ ಕಟ್ಟಿಕೊಂಡು ಪರಿಸರ ರಕ್ಷಣೆಯಲ್ಲಿ ತೊಡಿಗಿದ್ದಾರೆ. ಬುಧವಾರ ಪಟ್ಟಣದ ಸಂಗಮ ಸಮುದಾಯ ಭವನದಲ್ಲಿ ತಮ್ಮ ಸಹೋದರ ಪ್ರತಾಪ್ ಮತ್ತು ಪ್ರೀತಿ ಆರತಕ್ಷತೆ ಆಯೋಜಿಸಿದ್ದರು. ಅಲ್ಲಿಗೆ ಬಂದ ಅತಿಥಿಗಳಿಗೆ ವಧು ವರರಿಂದ ಗಿಡಗಳನ್ನು ವಿತರಿಸುವ ಮೂಲಕ ಪರಿಸರ ಪ್ರೀತಿ ತೋರಿಸಿದರು ವೇಣುಕುಮಾರ್.
ಕಲ್ಯಾಣ ಮಂಟಪದಿಂದ ಹೋಗುವಾಗ ಕೈಯಲ್ಲಿ ಗಿಡಮೊಂದನ್ನು ಹಿಡಿದುಕೊಂಡು ತಮ್ಮ ಮನೆಗಳಿಗೆ ತೆರಳುತ್ತಿದ್ದದ್ದು ನೋಡುಗರನ್ನು ಸೆಳೆಯಿತು. ಒಂದು ಸಾವಿರ ವಿವಿಧ ಗಿಡಗಳನ್ನು ವಿತರಿಸಲಾಯಿತು. ಪುರಸಭೆ ಸದಸ್ಯ ಬಿ.ಸಿ.ಮೂರ್ತಿ ಮಾತನಾಡಿ, ಪರಿಸರವನ್ನು ಕಡೆಗಣಿಸುವ ಜನರಿಗೆ ಈ ಮದುವೆ ಒಂದು ಅರಿವು ಮೂಡಿಸುವ ವೇದಿಕೆಯಾಗಿಯೂ ನಿರ್ಮಾಣವಾಗಿದ್ದು ಇತರರಿಗೆ ಮಾರ್ಗದರ್ಶನವಾಗಲಿ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

