ಕೋಲಾರ

ಶಿವಯೋಗಿ ಸ್ವಾಮಿ ಬೆಂಬಲಿಸಿ: ಕಾಗೇರಿ

Published On :

ಬಾಗೇಪಲ್ಲಿ: ಇದೇ 20 ರಂದು ವಿಧಾನ ಪರಿಷತ್ ಆಗ್ನೇಯ ಪದವೀಧರ ಕ್ಷೇತ್ರಕ್ಕೆ ನಡೆಯಲಿರುವ ಚುನಾವಣೆಯಲ್ಲಿ ಬಿಜೆಪಿ ಪಕ್ಷದಿಂದ ಸ್ಪರ್ಧಿಸಿರುವ ಡಾ. ಶಿವಯೋಗಿ ಸ್ವಾಮಿರವರನ್ನು ಬೆಂಬಲಿಸಬೇಕೆಂದು ಮಾಜಿ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಮನವಿ ಮಾಡಿದರು.
ಪಟ್ಟಣದ ಪತ್ರಿಕಾ ಭವನದಲ್ಲಿ ಏರ್ಪಡಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಜನ ಸಾಮಾನ್ಯರ ಕಷ್ಟಗಳಿಗೆ ಸ್ಪಂದಿಸದೆ ನಿರ್ಲಕ್ಷ್ಯ ಮಾಡಿದ ಪರಿಣಾಮ ದಿನದಿಂದ ದಿನಕ್ಕೆ ಜನರ ವಿಶ್ವಾಸ ಕಳೆದು ಕೊಳ್ಳುತ್ತಿದೆ ಎಂದರು.
ಸಜ್ಜನರನ್ನು ಆಯ್ಕೆ ಮಾಡಿ: ಮುಖ್ಯ ಸಚೇತಕರಾಗಿ ಶಿವಯೋಗಿ ಸ್ವಾಮಿ ಜನಪರ ಕಾರ್ಯಕ್ರಮಗಳನ್ನು ರೂಪಿಸಿ ಜನರ ವಿಶ್ವಾಸವನ್ನು ಬೆಳೆಸಿಕೊಂಡಿದ್ದಾರೆ. ಅದೇ ರೀತಿಯಲ್ಲಿ ಈ ಭಾಗದಲ್ಲಿ ಸಂಘಟನಾ ಶಕ್ತಿ ಚೆನ್ನಾಗಿದೆ. ವಿಧಾನ ಪರಿಷತ್ತಿಗೆ ತನ್ನದೆ ಆದ ಸ್ಥಾನ ಮಾನ ಇರುವುದರಿಂದ ಭ್ರಷ್ಟರನ್ನು ಕಳುಹಿಸುವುದಕಿಂತ ಶಿವಯೋಗಿಸ್ವಾವುಯಂತಹ ಸಜ್ಜನರನ್ನು ಕಳುಹಿಸುವುದೇ ಸೂಕ್ತ ಎಂದರು.
 ಈ ಸಂದರ್ಭದಲ್ಲಿ ರಾಜ್ಯ ಹಿಂದುಳಿದ ವರ್ಗದ ಉಪಾಧ್ಯಕ್ಷ ಡಾ.ಮಂಜುನಾಥ್, ಹಿರಿಯ ಮುಖಂಡ ಅಂಜಿನಪ್ಪ, ತಾಲೂಕು ಅಧ್ಯಕ್ಷ ಗೂಳೂರು ಲಕ್ಷ್ಮಿನಾರಾಯಣ, ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಮುಂತಾದವರು ಇದ್ದರು.

ರು. 2.5 ಕೋಟಿ ನಷ್ಟದಲ್ಲಿ ಪಿಎಲ್‌ಡಿ ಬ್ಯಾಂಕ್
ಮಾಲೂರು: ಕಳೆದ ಹಲವು ದಶಕಗಳಿಂದ ರೈತರ ಪರ ಸೇವೆ ಸಲ್ಲಿಸುತ್ತಿರುವ ಪಿಎಲ್‌ಡಿ ಬ್ಯಾಂಕ್ ಈಗ ರು. 2.5 ಕೋಟಿ ನಷ್ಟದಲ್ಲಿ ನಡೆಯುತ್ತಿದ್ದು, ರೈತರ ಉಳಿವಿಗಾಗಿ ರೈತರು ಸಾಲವನ್ನು ಮರುಪಾವತಿ ಮಾಡಿ ಎಂದು ಬ್ಯಾಂಕ್ ಅಧ್ಯಕ್ಷ ಎಸ್. ಕೃಷ್ಣಾರೆಡ್ಡಿ ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, 8 ಕೋಟಿ ವಾಹಿವಾಟು ನಡೆಸಿದ್ದರೂ ಕೇವಲ ನಾಲ್ಕೈದು ದೊಡ್ಡ ರೈತರ ಸಾಲ ಮರುಪಾವತಿ ವಿಫಲತೆಯಿಂದ ಶೇ.81 ರಷ್ಟು ಸಾಲ ಮರುಪವಾತಿ ಮಾಡಿದ್ದರೂ ಬ್ಯಾಂಕ್ ರು. 2.5 ಕೋಟಿ ನಷ್ಟದಲ್ಲಿದೆ ಎಂದರು.
ಬ್ಯಾಂಕ್ ನಷ್ಟದಲ್ಲಿದ್ದರೂ ಕಳೆದ ಹತ್ತು ವರ್ಷದಿಂದ ಬ್ಯಾಂಕ್‌ನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲಾಗಿದೆ. ಸರ್ಕಾರದಿಂದ ಮಂಜೂರಾಗಿದ್ದ 10 ಗುಂಟೆ ಜಮೀನನಲ್ಲಿ ಸುಸಜ್ಜಿತ ಬ್ಯಾಂಕ್ ಕಟ್ಟಡ ನಿರ್ಮಿಸಲಾಗಿದ್ದು, ಹಾಲಿ 5 ವಾಣಿಜ್ಯ ಮಳಿಗೆ ನಿರ್ಮಿಸಲಾಗಿದೆ. ಈ ಮಳಿಗೆಯನ್ನು ಸೋಮವಾರ ಹರಾಜು ಮಾಡಲಾಗುತ್ತಿದೆ ಎಂದರು. ಬ್ಯಾಂಕ್ ಉಪಾದ್ಯಕ್ಷ ಸತೀಶ್, ಎನ್. ಪ್ರಭು, ಕೆ.ಆರ್.ನಾರಾಯಣಸ್ವಾಮಿ, ವ್ಯವಸ್ಥಾಪಕ ವೆಂಕಟರಮಣಪ್ಪ, ಸೂ. ವೆಂಕಟೇಶ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.