ಕೋಲಾರ

ಶಾಖೋತ್ಪನ್ನ ತಂತ್ರಜ್ಞಾನ ಹೊಸ ಹೊಸ ಅವಿಷ್ಕಾರ

Published On :

ಚಿಕ್ಕಬಳ್ಳಾಪುರ: ನಗರದ ಹೊರ ವಲಯದಲ್ಲಿರುವ ನಾಗಾರ್ಜುನ ಎಂಜಿನಿಯರಿಂಗ್ ಕಾಲೇಜಿನ ಸಭಾಂಗಣದಲ್ಲಿ ನಡೆದ 'ಮೆಕಾನಿಕಲ್ ಎಂಜಿನಿಯರಿಂಗ್‌ನಲ್ಲಿ ಹೊಸ ಅಲೆ ಮತ್ತು ಅವಿಷ್ಕಾರ' ಕುರಿತ ಒಂದು ದಿನದ ಅಂತಾರಾಷ್ಟ್ರೀಯ ಸಮ್ಮೇಳನವನ್ನು ಕ್ಲೈಮ್ ವೆನೆಟ್ ಕ್ಲೈಮ್ ಟೆಕ್ನಾಲಜಿ ಕಂಪನಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಅನಿಲ್ ದೇವ್  ಉದ್ಘಾಟಿಸಿದರು.
ಅಮೆರಿಕನ್ ಸೊಸೈಟಿ ಆಫ್ ಹೀಟಿಂಗ್, ರೆಫ್ರಿಜರೇಟಿಂಗ್ ಆ್ಯಂಡ್ ಏರ್ ಕಂಡೀಷನಿಂಗ್ ಎಂಜನಿಯಿರ್ಸ್, ಇಂಡಿಯನ್ ಸೊಸೈಟಿ ಆಫ್ ಹೀಟಿಂಗ್, ರೆಫ್ರಿಜರೇಟಿಂಗ್ ಆ್ಯಂಡ್ ಏರ್ ಕಂಡೀಷನಿಂಗ್ ಎಂಜನಿಯಿರ್ಸ್, ಇಂಡಿಯನ್ ಇನ್ಸಿಟಿಟ್ಯೂಟ್ ಆಫ್ ಮೆಟಲ್ಸ್ ಸಂಸ್ಥೆಯು ಹಸಿರು ತಂತ್ರಜ್ಞಾನ ಮತ್ತು ಸಂರಕ್ಷಣೆ ವಿಷಯಾಧಾರಿತ ಮೇಲೆ ಸಮ್ಮೇಳನವನ್ನು ಹಮ್ಮಿಕೊಂಡಿತ್ತು.
ಸಮ್ಮೇಳನಕ್ಕೆ ಚಾಲನೆ ನೀಡಿ ಮಾತನಾಡಿದ ಸಿಇಒ ಅನಿಲ್ ದೇವ್ , ಶಾಖೋತ್ಪನ್ನ ತಂತ್ರಜ್ಞಾನದಲ್ಲಿ ಹೊಸ ಹೊಸ ಅವಿಷ್ಕಾರಗಳು ನಡೆಯುತ್ತಿವೆ. ಆಧುನಿಕತೆಯ ಜೊತೆಗೆ ಬದಲಾವಣೆಗಳನ್ನು ಕಾಣಲಾಗುತ್ತಿದೆ. ಇವುಗಳ ಬಗ್ಗೆ ತಿಳಿದುಕೊಂಡು ತಮ್ಮದೇ ಅವಿಷ್ಕಾರದಲ್ಲಿ ಹೊಸತನವನ್ನು ಕಂಡು ಹಿಡಿಯಬೇಕು. ಹವಾ ನಿಯಂತ್ರಣ ಮತ್ತು ಶೈತೀಕರಣ ವ್ಯವಸ್ಥೆ, ಹೊಸ ಘಟಕಗಳನ್ನು ತಯಾರಿಸಲು ಅವಶ್ಯಕವಿರುವ ಹೊಸ ಹೊಸ ಸಂಶೋಧನೆಗಳಲ್ಲಿ ಪ್ರಮುಖ ಪಾತ್ರವನ್ನು ವಹಿಸಬೇಕೆಂದರು.
ಎಡಿಎ ಯೋಜನಾ ನಿರ್ದೇಶಕ ಡಾ. ಬಿ.ಅಶೋಕ್ ಮಾತನಾಡಿದರು. ಸಮ್ಮೇಳನದಲ್ಲಿ 103 ತಾಂತ್ರಿಕ ತಜ್ಞರು ತಮ್ಮ ಪ್ರಬಂಧದ ಮೂಲಕ ವಿಷಯವನ್ನು ಮಂಡಿಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಗೋಪಾಲಕೃಷ್ಣ, ಎಇಎಸ್ ನಿರ್ದೇಶಕ ಕೆ.ಎಸ್. ದೇಶಿಕಾಚಾರ್, ಸಂಚಾಲಕ ಎನ್ .ಕಪಿಲನ್ ಮುಂತಾದವರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.