ಕೋಲಾರ

ಅಥ್ಲೆಟಿಕ್ ತರಬೇತುದಾರ ವರ್ಗಾವಣೆ ತಡೆಗೆ ಒತ್ತಾಯ

Published On :

ಕೋಲಾರ: ಜಿಲ್ಲಾ ಅಥ್ಲೆಟಿಕ್ ತರಬೇತುದಾರ ಪಿ.ಎಲ್. ಶಂಕರಪ್ಪನವರನ್ನು ವರ್ಗಾವಣೆ ಮಾಡಿರುವ ಸರ್ಕಾರ ಕೂಡಲೇ ಇವರ ಜಾಗಕ್ಕೆ ಬೇರೊಬ್ಬ ಸಮರ್ಥ ತರಬೇತುದಾರರನ್ನು ನಿಯೋಜಿಸಬೇಕು, ಇಲ್ಲವೇ ಶಂಕರಪ್ಪನವರ ವರ್ಗಾವಣೆಯನ್ನು ರದ್ದುಪಡಿಸಬೇಕೆಂದು ಜಿಲ್ಲೆಯ ಕ್ರೀಡಾಪಟುಗಳು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಶಂಕರಪ್ಪನವರ ಜಾಗಕ್ಕೆ ಪರ್ಯಾಯ ವ್ಯವಸ್ಥೆ ಇಲ್ಲದೆ ವರ್ಗಾವಣೆ ಮಾಡಿರುವುದರಿಂದ ಕ್ರೀಡಾ ಪಟುಗಳಿಗೆ ತೊಂದರೆ ಆಗುತ್ತಿದೆ.ಕ್ರೀಡಾ ಇಲಾಖೆಯ ಅಧಿಕಾರಿಗಳು ಕ್ರೀಡಾ ವಸತಿ ಶಾಲೆಯಲ್ಲಿನ ವಿದ್ಯಾರ್ಥಿಗಳ ಭವಿಷ್ಯ ಹಾಗೂ ಕ್ರೀಡಾಪಟುಗಳಿಗೆ ಉತ್ತಮ ತರಬೇತಿ ಅವಶ್ಯಕತೆ ಅರಿತು ಸೂಕ್ತ ಕ್ರಮ ಕೈಗೊಳ್ಳುವಂತೆ ಕ್ರೀಡಾಪಟುಗಳಾದ ಶ್ರೀಧರ್, ಯಶವಂತ್, ಪ್ರಸನ್ನ ಇನ್ನಿತರರು ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಶಂಕರಪ್ಪನವರ ಜಾಗಕ್ಕೆ ಬೇರೊಬ್ಬರನ್ನು ನಿಯೋಜಿಸದೆ ವರ್ಗಾವಣೆ ಮಾಡಿರುವುದರಿಂದ ಕ್ರೀಡಾ ಪಟುಗಳಿಗೆ ತೊಂದರೆ ಆಗುತ್ತದೆ, ಇವರ ವರ್ಗಾವಣೆ ಅನಿವಾರ್ಯವಾದಲ್ಲಿ ಇವರ ಜಾಗಕ್ಕೆ ಕೂಡಲೆ ಬದಲಿ ಅಥ್ಲೆಟಿಕ್ ತರಬೇತುದಾರರನ್ನು ನಿಯೋಜಿಸಿ ಇಲ್ಲವೇ ಶಂಕರಪ್ಪನವರನ್ನೇ ಮುಂದುವರೆಸಿ ಎಂದು ಕೋರಿದ್ದಾರೆ.


ಅಕ್ರಮ ಸಂಬಂಧ: ಬುದ್ಧಿ ಹೇಳಿದ್ದಕ್ಕೆ ಹಲ್ಲೆ


ಶಿಡ್ಲಘಟ್ಟ: ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಬುದ್ಧಿವಾದ ಹೇಳಿದ ಕಾರಣಕ್ಕೆ ಮಹಿಳೆಯೊಬ್ಬರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ ಘಟನೆ ನಡೆದಿದೆ. ತಾಲೂಕಿನ ಬಸವಾಪಟ್ಟಣ ಗ್ರಾಮದ ನಿವಾಸಿ ಗಂಗಮ್ಮ ಹಲ್ಲೆಗೆ ಒಳಗಾದ ಮಹಿಳೆ. ಗಂಗಮ್ಮಳ ಸೊಸೆಯೊಂದಿಗೆ ಇದೇ ಗ್ರಾಮದ ಮಹೇಶ್ ಎಂಬುವವನು ಅಕ್ರಮ ಸಂಬಂಧ ಹೊಂದಿದ್ದಾಳೆನ್ನಲಾಗಿದ್ದು, ಅನೇಕ ಬಾರಿ ಗಂಗಮ್ಮ ಮಹೇಶನಿಗೆ ಬುದ್ಧಿವಾದ ಹೇಳಿದ್ದರು. ನಾಲ್ಕು ತಿಂಗಳ ಹಿಂದೆ ಸೊಸೆ ತನ್ನ ತವರು ಮನೆಗೆ ಹೋಗಿದ್ದಳು. ಇದರಿಂದ ಕುಪಿತಗೊಂಡಿದ್ದ ಗಂಗಮ್ಮ ಪ್ರತಿದಿನ ಮನೆಯ ಮುಂದೆ ಕುಳಿತು ಬೈದುಕೊಳ್ಳುತ್ತಿದ್ದಳು. ಇದರಿಂದ ಅಸಮಾಧಾನಗೊಂಡ ಮಹೇಶ ತನ್ನ ಸಹಚರರಾದ ರವಿ, ಮುನಿರಾಜು ಜೊತೆ ಸೇರಿ ಏಕಾಏಕಿ ಮನೆಗೆ ನುಗ್ಗಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದಾನೆ. ಕೂಡಲೇ ಗಂಗಮ್ಮಳನ್ನು ಪಟ್ಟಣದ ಆಸ್ಪತ್ರೆಗೆ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.