ದೃಶ್ಯ ಮಾಧ್ಯಮದಿಂದ ಮೌಲ್ಯಗಳ ಕುಸಿತ: ಸಮಾಜ ಸೇವಕ ನಾಗರಾಜ್ ಅಭಿಪ್ರಾಯ
ಮಾಲೂರು: ದೃಶ್ಯ ಮಾಧ್ಯಮಗಳು ನಮ್ಮ ಸಂಸ್ಕೃತಿಯನ್ನು ಹಾಳುಗೆಡುವ ಜತೆಯಲ್ಲಿ ಮಾನವೀಯ ಮೌಲ್ಯಗಳು ಕುಸಿಯಲು ಕಾರಣವಾಗುತ್ತಿದೆ ಎಂದು ದಾನಿ ಹಾಗೂ ಸಮಾಜ ಸೇವಕ ಎಂ.ಪಿ.ನಾಗರಾಜ್ ಹೇಳಿದರು. ಪಟ್ಟಣದ ಕೋಲಾರ ರಸ್ತೆಯಲ್ಲಿರುವ ವಿವೇಕಾನಂದ ಬೆಸ್ಟ್ ಕಾರ್ನೆಂಟ್ ಶಾಲೆ ಸಂಭಾಗಣದಲ್ಲಿ ಸ್ಥಳೀಯ ಶ್ರೀ ಗುರುಕೃಪ ಸಂಗೀಕ ಕಲಾ ವೃಂದವು ತನ್ನ ವಾರ್ಷಿಕೋತ್ಸವದ ಅಂಗವಾಗಿ ಭಾನುವಾರ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಇದೇ ವೇಳೆ ಸನ್ಮಾನ ಸ್ವೀಕರಿಸಿ ಮಾತನಾಡಿದ ಸ್ಥಳೀಯ ಠಾಣೆ ಎಸ್ಐ ದಯಾನಂದ್, ಸಂಗೀತ-ಕಲಾ ಸಂಘಗಳು ನಮ್ಮ ಸಂಸ್ಕೃತಿಯ ಕಲೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಿ ಹೂಸ ಪ್ರತಿಭೆಗಳನ್ನು ಹೂರ ತರುವ ಮೂಲಕ ನಮ್ಮ ಸಂಸ್ಕೃತಿಯನ್ನು ರಕ್ಷಣೆ ಮಾಡಬೇಕು ಎಂದರು. ಪುರಸಭೆ ಸದಸ್ಯ ಸಿ.ಪಿ.ನಾಗರಾಜ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ತಬಲ ನಾರಾಯಣಪ್ಪ ಮಾತನಾಡಿದರು. ಇದೇ ಸಂಧರ್ಭದಲ್ಲಿ ತಮ್ಮ ಕ್ಷೇತ್ರದಲ್ಲಿ ಸಾಧನೆ ಮಾಡಿದ ನಿವೃತ್ತ ಉಪಾನ್ಯಾಸಕ ಡಿ.ಆರ್.ನಾಗರಾಜು, ದಾನಿ ಎಂ.ಪಿ.ನಾಗರಾಜು, ಎಸ್.ಐ. ದಯಾನಂದ್, ಸಂಗೀತ ನಿರ್ದೇಶಕ ಹಂಸಧ್ವನಿ ಶ್ರೀನಿವಾಸ್, ಶ್ರೀ ಮೂರ್ತಿ ಎಜುಕೇಷನಲ್ ಟ್ರಸ್ಟ್ನ ಅಧ್ಯಕ್ಷ ಶೈಲೇಶ್ ಕುಮಾರ್ ರವರನ್ನು ಸನ್ಮಾನಿಸಲಾಯಿತು. ಪುರಸಭೆ ಸದಸ್ಯ ಸೋಮಶೇಖರ್, ನಿವೃತ್ತ ಉಪನ್ಯಾಸಕ ಎಂ.ವಿ. ನಾಗರಾಜಯ್ಯ, ಕನ್ನಡ ಹರೀಶ್, ಭೈರೇಗೌಡ, ಗಾಯಕ ಮಂಜುನಾಥ್, ಬ್ರಹ್ಮಚಾರಿ, ವೆಂಕಟಚಲಪತಿ, ಮಹದೇವ್, ಕೃಷ್ಣೇಗೌಡ, ನಾರಾಯಣಪ್ಪ, ಜಗನ್ನಾಥ್, ಟಿ.ಕೆ.ನಾಗರಾಜ್ ಇದ್ದರು.ಸಂಸ್ಥೆಯ ಅದ್ಯಕ್ಷ ನಟರಾಜ್ ಸ್ವಾಗತಿಸಿದರು. ಶ್ರೀನಿವಾಸ್ ಕಾರ್ಯಕ್ರಮವನ್ನು ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

