ಪ್ರತಿ ತಿಂಗಳ 7ರಂದು ಆಹಾರ ಅದಾಲತ್
ಕ.ಪ್ರ. ವಾರ್ತೆ,ಕೋಲಾರ,ಜೂ.18
ಪಡಿತರ ವ್ಯವಸ್ಥೆಯ ಸುಧಾರಣೆ ಹಾಗೂ ಗ್ರಾಹಕರ ದೂರುಗಳ ಇತ್ಯರ್ಥಕ್ಕಾಗಿ ಪ್ರತಿ ತಿಂಗಳು 7ನೇ ತಾರೀಖು ಆಹಾರ ಅದಾಲತ್ ನೆಡೆಸಲಾಗುವುದು ಎಂದು ಆಹಾರ ಇಲಾಖೆಯ ಆಯುಕ್ತ ಹರ್ಷ ಗುಪ್ತ ತಿಳಿಸಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಬುಧವಾರ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಆಹಾರ ಅದಾಲತ್ ಅನ್ನು ನ್ಯಾಯಬೆಲೆ ಅಂಗಡಿಗಳಲ್ಲೇ ನಡೆಸಲಾಗುತ್ತದೆ. ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಅಂಗಡಿಗಳ ಆಯ್ಕೆ ಮಾಡುತ್ತಾರೆ. ಇಲಾಖೆಯ ಅಧಿಕಾರಿಗಳು ಅದಾಲತ್ನಲ್ಲಿ ಭಾಗವಹಿಸಿ ಪಡಿತರ ಚೀಟಿದಾರರು, ಸಾರ್ವಜನಿಕರಿಂದ ಅರ್ಜಿಗಳನ್ನು ಸ್ವೀಕರಿಸಿ ಸ್ಥಳದಲ್ಲೇ ಸಮಸ್ಯೆಗಳಿಗೆ ಪರಿಹಾರ ಒದಗಿಸಲಿದ್ದಾರೆಂದು ಹೇಳಿದರು.
ಜಾಗೃತ ಸಮಿತಿ: ಎಲ್ಲಾ ನ್ಯಾಯಬೆಲೆ ಅಂಗಡಿಗಳಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲೇ ಆಹಾರ ಅದಾಲತ್ ನೆಡೆಸುವುದು ಕಷ್ಟವಾಗುತ್ತದೆ. ಆದ್ದರಿಂದ ಜಾಗೃತ ಸಮಿತಿಯನ್ನು ರಚಿಸಲು ಸರ್ಕಾರ ನಿರ್ಧರಿಸಿದೆ. ಆಯಾ ಜಿಲ್ಲೆಗಳ ಉಸ್ತುವಾರಿ ಸಚಿವರು ಜಾಗೃತ ಸಮಿತಿಗಳನ್ನು ರಚನೆ ಮಾಡಲಿದ್ದಾರೆ, ಈಗಾಗಲೇ ಕೆಲವು ಜಿಲ್ಲೆಗಳಲ್ಲಿ ಮಾತ್ರವಾಗಿದೆ, ಕೋಲಾರ ಸೇರಿದಂತೆ ಅನೇಕ ಕಡೆ ಸಮಿತಿಗಳ ರಚನೆಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ಈ ಜಾಗೃತ ಸಮಿತಿಯಲ್ಲಿ ಒಟ್ಟು ಐದು ಮಂದಿ ಸದಸ್ಯರು ಇರುತ್ತಾರೆ, ಪರಿಶಿಷ್ಟ ಜಾತಿ ಮತ್ತು ಪ.ಪಂಗಡಕ್ಕೆ ಸೇರಿದ ತಲಾ ಒಬ್ಬರು, ಮಹಿಳೆ ಹಾಗೂ ಸಮಾಜ ಸೇವಕ ಸೇರಿದಂತೆ ಐದು ಮಂದಿಯ ತಂಡ ರಚಸಿ ಈ ಮೂಲಕ ನ್ಯಾಯಬೆಲೆ ಅಂಗಡಿಗಳಲ್ಲಿ ಪ್ರತಿ ತಿಂಗಳು 7ನೇ ತಾರೀಖು ಆಹಾರ ಅದಾಲತ್ ನೆಡೆಸಲಾಗುತ್ತದೆ ಎಂದು ವಿವರಿಸಿದರು.
ಸೀಮೆ ಎಣ್ಣೆ ಖಾತ್ರಿ: ಪ್ರತಿ ತಿಂಗಳು 1 ರಿಂದ 30ರವರೆಗೆ ಎಲ್ಲಾ ನ್ಯಾಯಬೆಲೆ ಅಂಗಡಿಗಳನ್ನು ತೆರೆದಿರಬೇಕು, 1ರಿಂದ 30ರವರೆಗೆ ಪಡಿತರ ವಿತರಣೆ ಮಾಡಬೇಕು. ಸೀಮೆ ಎಣ್ಣೆಯನ್ನು ಮಾತ್ರ ಪ್ರತಿ ತಿಂಗಳು 15 ರಿಂದ 30ರವರೆಗೆ ವಿತರಣೆ ಮಾಡಲು ಸೂಚಿಸಲಾಗಿದೆ. ಪಡಿತರ ವ್ಯವಸ್ಥೆಯ ಬಗ್ಗೆ ದೂರುಗಳು ಇದ್ದರೆ ಸಹಾಯವಾಣಿ-1967ಕ್ಕೆ ಮಾಹಿತಿ ನೀಡಿ ಪರಿಹಾರ ಕಂಡುಕೊಳ್ಳಬಹುದು ಎಂದರು. ಆಹಾರ ಭದ್ರತಾ ಕಾಯಿದೆ ಜಾರಿಗೆ ಬಂದ ಮೇಲೆ ಪಡಿತರರು ಫಲಾನುಭವಿಗಳಾಗಿ ಉಳಿದಿಲ್ಲ, ಹಕ್ಕುದಾರರಾಗಿದ್ದಾರೆ, ಏನೇ ವಂಚನೆ, ಅನ್ಯಾಯ ಕಂಡು ಬಂದಲ್ಲಿ ದೂರು ನೀಡಿ ಪರಿಹಾರ ಪಡೆಯಲು ಕಾನೂನಿನಲ್ಲಿ ಅವಕಾಶ ಮಾಡಿಕೊಡಲಾಗಿದೆ ಎಂದು ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

