ಕೋಲಾರ

ನರ್ಸಿಂಗ್ ವಿದ್ಯಾರ್ಥಿಗಳಿಗೆ ವಂಚನೆ: ಆರೋಪಿ ಬಂಧನ

Published On :

ಕೋಲಾರ: ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳಿಗೆ ವಿದೇಶದಲ್ಲಿ ಕೆಲಸ ಕೊಡಿಸುವುದಾಗಿ ಲಕ್ಷಾಂತರ ರುಪಾಯಿ ವಂಚಿಸಿ ತಲೆ ಮರಿಸಿಕೊಂಡಿದ್ದ ಅಂಡಮಾನ್  ಮೂಲದ ಶಾದಿಪುರದ ನಯಾಗಾವ್ ಡಾಕ್ಟರ್ ಕಾಲೋನಿಯ ನಿವಾಸಿ ವಿ.ಎಸ್.ಕೃಷ್ಣನ್(26) ಎಂಬುವನನ್ನು ಕೋಲಾರ ಪೊಲೀಸರು ಬಂಧಿಸಿದ್ದಾರೆ.
ಕೆಜಿಎಫ್‌ನ ನೂರಿ ನರ್ಸಿಂಗ್ ಕಾಲೇಜು ಸೇರಿದಂತೆ ರಾಜ್ಯದ ವಿವಿಧ ಕಡೆ ಈ ಆಸಾಮಿ ಕೆಲಸ ಕೊಡಿಸುವುದಾಗಿ ವಿದ್ಯಾರ್ಥಿಗಳಿಂದ ತಲಾ ಒಂದು ಲಕ್ಷ ರುಪಾಯಿ ಪಡೆದು ಬಗ್ಗೆ ದೂರುಗಳು ದಾಖಲಾಗಿದ್ದವು. ಜೂ.19ರಂದು ಗುರುವಾರ ಆರೋಪಿ ಕೃಷ್ಣನ್ ಕೋಲಾರದ ಬಸ್ ನಿಲ್ದಾಣದಲ್ಲಿ ಓಡಾಡುತ್ತಿರುವ ಬಗ್ಗೆ ಮಾಹಿತಿ ಪಡೆದ ಕೋಲಾರ ಸಿಪಿಐ ಶಿವಕುಮಾರ್ ಹಾಗೂ ನಗರ ಠಾಣೆಯ ಪೊಲೀಸರು ಕಾರ್ಯಾಚರಣೆ ನಡೆಸಿದಾಗ ಆರೋಪಿ ಸಿಕ್ಕಿಬಿದ್ದಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ. ಆರೋಪಿ ಕೃಷ್ಣನ್ ನರ್ಸಿಗ್ ಓದಿ, ವಿದೇಶಕ್ಕೆ ಹೋಗುವ ಆಸೆ ಇತ್ತು. ಹಾಗಾಗಿ ಕೆಜಿಎಫ್‌ನ ನರ್ಸಿಂಗ್ ಕಾಲೇಜಿಗೆ 2003ರಲ್ಲಿ ದಾಖಲಾಗಿದ್ದ. ಆದರೆ, ಪೂರ್ತಿ ಗೊಳಿಸಿರಲಿಲ್ಲ. ನಂತರ ಅಂಡಮಾನ್‌ಗೆ ವಾಪಸ್ ಹೋಗಿ, 2010ರಲ್ಲಿ ಬೆಂಗಳೂರಿನ ಹೆಬ್ಬಾಳದ ಬಳಿ ಇರುವ ಭುವನ್ ಕಾಲೇಜಿನಲ್ಲಿ ಡಿಎಡ್‌ಗೆ ದಾಖಲಾಗಿದ್ದ. ಅಲ್ಲಿನ ಪಾಲಿಟೆಕ್ನಿಕ್‌ನಲ್ಲಿ ಲೆಕ್ಚರ್ ಆಗಿದ್ದ ಗೋವಿಂದ ಅಂಡಮಾನ್‌ನಲ್ಲಿ ನರ್ಸಿಂಗ್ ಕೋರ್ಸ್‌ಗೆ ದಾಖಲಾಗುವ ಅಭ್ಯರ್ಥಿಗಳನ್ನು ಗುರುತಿಸಿ, ಅವರಿಂದ ಲಕ್ಷಾಂತರ ರುಪಾಯಿ ವಸೂಲಿ ಮಾಡಿದ್ದ. ಇದೇ ರೀತಿ ರಾಜ್ಯದಲ್ಲೂ ವಂಚನೆ ಎಸಗಿದ್ದ. ಹಾಗಾಗಿ ಈತನನ್ನು ಹಿಡಿಯಲು ಪೊಲೀಸರು ಬಲೆ ಬೀಸಿದ್ದರು. ಕೋಲಾರ ಬಸ್ ನಿಲ್ದಾಣದಲ್ಲಿ ಸಿಕ್ಕಿಬಿದ್ದಿದ್ದಾನೆ.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.