ಪದವೀಧರ ಕ್ಷೇತ್ರಕ್ಕೆಇಂದು ಚುನಾವಣೆ
ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆ ಶುಕ್ರವಾರ ಬೆಳಗ್ಗೆ 8ರಿಂದ ಸಂಜೆ 4ರವರೆಗೆ ನಡೆಯಲಿದ್ದು, ಮತದಾನ ಪ್ರಕ್ರಿಯೆಯನ್ನು ಸುಗಮವಾಗಿ ಕೈಗೊಳ್ಳಲು ಸಕಲ ಸಿದ್ಧತೆ ಕೈಗೊಳ್ಳಲಾಗಿದೆ.
ಜಿಲ್ಲೆಯ 10,598 ಮತದಾರರಿಗೆ 13 ಮತಗಟ್ಟೆ ಸ್ಥಾಪಿಸಲಾಗಿದೆ. ತರಬೇತಿ ಪಡೆದ ಚುನಾವಣೆ ಸಿಬ್ಬಂದಿ ಮತ್ತು ಭದ್ರತಾ ಸಿಬ್ಬಂದಿ ನಿಯೋಜನೆ ವ್ಯವಸ್ಥೆ ಕೈಗೊಳ್ಳಲಾಗಿದೆ. ಚಿಕ್ಕಬಳ್ಳಾಪುರ, ತುಮಕೂರು, ದಾವಣಗೆರೆ (ಚನ್ನಗಿರಿ, ಹೊನ್ನಾಳಿ ಮತ್ತು ಹರಪನಹಳ್ಳಿ ತಾಲೂಕು ಹೊರತುಪಡಿಸಿ), ಚಿತ್ರದುರ್ಗ, ಕೋಲಾರ ಜಿಲ್ಲೆಯಲ್ಲಿ ಪದವೀಧರ ಮತದಾರರು ಮತ ಚಲಾಯಿಸಲಿದ್ದಾರೆ.
ಅಭ್ಯರ್ಥಿಗಳು: ಆರ್. ಚೌಡರೆಡ್ಡಿ ತೂಪಲ್ಲಿ (ಜೆಡಿಎಸ್), ಫಯಾಜ್ ಉಲ್ಲಾ (ಸಿಪಿಐಎಂ), ಸಿ.ಎಚ್. ಮುರಿಗೇಂದ್ರಪ್ಪ (ಕಾಂಗ್ರೆಸ್ ), ಡಾ.ಎ.ಎಚ್. ಶಿವಯೋಗಿ ಸ್ವಾಮಿ (ಬಿಜೆಪಿ), ಎಚ್.ಎಂ. ನಾಗಪ್ಪ (ಲೋಕ್ಸತ್ತಾ ಪಾರ್ಟಿ), ಬಿ.ವೆಂಕಟೇಶ್ (ಕರುನಾಡ ಪಾರ್ಟಿ) ಮತ್ತು ಪಕ್ಷೇತರ ಅಭ್ಯರ್ಥಿಗಳಾಗಿ ಎಚ್.ಎಸ್. ಇಸ್ಮತುಲ್ಲಾ ಖಾನ್, ಕರಬಸಪ್ಪ ಎಂ.ಪಿ, ಡಿ.ಕೆ. ತುಳಸಪ್ಪ, ಡಾ.ನಾಗರಾಜ್, ಆರ್. ನಾರಾಯಣಸ್ವಾಮಿ, ವೆಂಕಟಶಿವಾರೆಡ್ಡಿ ಕಣದಲ್ಲಿದ್ದಾರೆ ಎಂದು ಆಗ್ನೇಯ ಪದವೀಧರರ ಕ್ಷೇತ್ರದ ಚುನಾವಣಾಧಿಕಾರಿ ತಿಳಿಸಿದ್ದಾರೆ.
ಮತಗಟ್ಟೆಗಳು: ಬಾಗೇಪಲ್ಲಿ ಟೌನ್ 1- ತಾಲೂಕು ಕಚೇರಿ, ಬಾಗೇಪಲ್ಲಿ ಟೌನ್ 2- ತಹಸೀಲ್ದಾರ್ ದರ್ಜೆ 2 ಕೊಠಡಿ (ಬಾಗೇಪಲ್ಲಿ), ಗುಡಿಬಂಡೆ ಟೌನ್- ತಾಲ್ಲೂಕು ಕಚೇರಿ (ಗುಡಿಬಂಡೆ), ಗೌರಿಬಿದನೂರು ಟೌನ್ 1 ಮತ್ತು 2- ತಾಲೂಕು ಕಚೇರಿ (ಗೌರಿಬಿದನೂರು), ಚಿಕ್ಕಬಳ್ಳಾಪುರ ನಗರ 1 ಮತ್ತು 2- ತಾಲೂಕು ಕಚೇರಿ (ಚಿಕ್ಕಬಳ್ಳಾಪುರ), ಚಿಂತಾಮಣಿ ನಗರ 1, 2, 3 ಮತ್ತು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ (ಚಿಂತಾಮಣಿ) ಕೊಠಡಿ ಸಂಖ್ಯೆ 1, 2, 3ರಲ್ಲಿ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜ್ ಟಿ.ಸಿ. ಬ್ಲಾಕ್ನ ಕೊಠಡಿ ಸಂಖ್ಯೆ 1ರಲ್ಲಿ ಚಿಂತಾಮಣಿ ನಗರ 4 ಮತ್ತು ಕೊಠಡಿ ಸಂಖ್ಯೆ 2ರಲ್ಲಿ ಚಿಂತಾಮಣಿ ನಗರ 5, ಶಿಡ್ಲಘಟ್ಟ ತಾಲೂಕಿಗೆ ಸಂಬಂಧಿಸಿದಂತೆ (ಶಿಡ್ಲಘಟ್ಟ) ತಾಲೂಕು ಕಚೇರಿಯಲ್ಲಿ ಮತಗಟ್ಟೆ ಸ್ಥಾಪಿಸಲಾಗಿದೆ. ಇದೇ ಮೊದಲ ಬಾರಿಗೆ ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ನೋಟಾ ಆಯ್ಕೆಗೆ ಅವಕಾಶವಿದೆ.
ವಿಶೇಷ ರಜೆ: ಚುನಾವಣೆ ಹಿನ್ನೆಲೆಯಲ್ಲಿ ಮತ ಕ್ಷೇತ್ರಗಳಲ್ಲಿನ ಸರ್ಕಾರಿ, ಖಾಸಗಿ ಶಾಲೆ ಕಾಲೇಜುಗಳು, ರಾಜ್ಯ ಮತ್ತು ಕೇಂದ್ರ ಸರ್ಕಾರದ ಕಚೇರಿಗಳು, ಬ್ಯಾಂಕ್, ರಾಜ್ಯ, ಕೇಂದ್ರ ಸರ್ಕಾರದ ಕಾರ್ಖಾನೆಗಳು, ಕೈಗಾರಿಕೆ ಸಂಸ್ಥೆಗಳು ಹಾಗೂ ಸಹಕಾರಿ ರಂಗದ ಸಂಘ ಸಂಸ್ಥೆಗಳಲ್ಲಿ ಕೆಲಸ ಮಾಡುವ ಪದವೀಧರರು ಹಾಗೂ ಎಲ್ಲ ವ್ಯಾವಹಾರಿಕ, ಔದ್ಯಮಿಕ ಸಂಸ್ಥೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಮತದಾರರಿಗೆ ಜೂ.20ರಂದು ಮತದಾನ ಮಾಡಲು ವಿಶೇಷ ಸಾಂದರ್ಭಿಕ ರಜೆ ಘೋಷಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

