ಕೆರೆ ಒತ್ತುವರಿ ಜಾಗ ತೆರವಿಗೆ ಆಗ್ರಹ
ಬಂಗಾರಪೇಟೆ: 8ವರ್ಷಗಳಿಂದ ತಾಲೂಕಿನಲ್ಲಿ ಮಳೆರಾಯ ಕೈ ಕೊಟ್ಟಿರುವುದನ್ನೇ ಭಂಡವಾಳ ಮಾಡಿಕೊಂಡಿರುವ ಕೆಲವು ಒತ್ತುವರಿದಾರರು ಕೆರೆ ಅಂಗಳವನ್ನೇ ಆಕ್ರಮಿಸಿಕೊಂಡು ನೀಲಗಿರಿ ಬೆಳೆಸಿ ಅದರ ಫಲವನ್ನು ಅನುಭವಿಸುತ್ತಿರುವ ಪ್ರಕರಣ ತಾಲೂಕಿನ ಮರಗಲ್ನಲ್ಲಿ ಬೆಳಕಿಗೆ ಬಂದಿದೆ.
ಮರಗಲ್ನ ಗೌಡನ ಕೆರೆಯಲ್ಲಿ ಗ್ರಾಮದ ವ್ಯಕ್ತಿ ಹಲವು ದಶಕಗಳಿಂದ ಸುಮಾರು 8 ಎಕರೆ ಒತ್ತುವರಿ ಮಾಡಿಕೊಂಡು ನೀಲಗಿರಿ ಮರಗಳನ್ನು ಬೆಳೆಸುತ್ತಾ, ಈಗಾಗಲೇ ಕಟಾವು ಮಾಡಿ ಹಣ ಪಡೆದಿದ್ದಾನೆ. ಮೊದಲೇ ಬರದಿಂದ ತತ್ತರಿಸಿರುವ ರೈತರು ಹನಿ ನೀರಿಲ್ಲದೆ ಕೃಷಿ ಚಟುವಟಿಕೆಗಳಿಲ್ಲದೆ ಪರ್ಯಾಯ ಮಾರ್ಗ ನೋಡುತ್ತಿವಾಗ, ಈತ ಯಾವುದೇ ಭಯವಿಲ್ಲದೆ ನೀಲಗಿರಿ ಮರಗಳನ್ನು ಬೆಳೆಸುತ್ತಿದ್ದರೂ ಪಂಚಾಯ್ತಿಯವರು ಇದರ ಬಗ್ಗೆ ಚಕಾರ ಎತ್ತದೆ ಇರುವುದು ಅನುಮಾನಕ್ಕೆ ಆಸ್ಪದ ನೀಡಿದೆ. ತಾಲೂಕಿನಲ್ಲಿರುವ ಇತರೆ ಕೆರೆಗಳನ್ನು ಪ್ರಭಾವಿ ವ್ಯಕ್ತಿಗಳು ಒತ್ತುವರಿ ಮಾಡಿಕೊಂಡಿರುವಂತೆ ಮರಗಲ್ನಲ್ಲೂ ಗೌಡನ ಕೆರೆ ಒತ್ತುವರಿಕೆ ಸಿಲುಕಿ ದಿನೇ ದಿನೆ ತನ್ನ ವಿಸ್ತೀರ್ಣವನ್ನು ಕಳೆದುಕೊಳ್ಳುತ್ತಿದೆ. ಆದರೆ ಪಂಚಾಯ್ತಿ ಅಧಿಕಾರಿಗಳಾಗಲಿ ಅಥವಾ ಸದಸ್ಯರಾಗಲಿ ಪ್ರಶ್ನಿಸುವ ಗೋಜಿಗೆ ಹೋಗಿಲ್ಲ. ಇದನ್ನು ನೋಡಿದರೆ ಇವರಿಗೆ ಸಾರ್ವಜನಿಕ ಆಸ್ತಿಗಳ ಮೇಲೆ ಎಷ್ಟು ಕಾಳಜಿ ಇದೆ ಎಂಬುದು ಅರಿವಾಗುತ್ತದೆ.
2005ರಲ್ಲಿ ಗೌಡನ ಕೆರೆ ತುಂಬಿತ್ತು ನಂತರ ಮಳೆ ಕೊರತೆಯಿಂದಾಗಿ ಕೆರೆ ಒಣಗಿದ್ದರಿಂದ ಪ್ರಭಾವಿ ವ್ಯಕ್ತಿಗಳು ಒತ್ತುವರಿ ಮಾಡಿಕೊಂಡು ಕೆರೆಯಲ್ಲೇ ವಾಣಿಜ್ಯ ಬೆಳೆಗಳನ್ನು ಮಾಡುತ್ತಿದ್ದಾರೆ. ಇತ್ತೀಚಿಗೆ ಸುರಿದ ಮಳೆಗೆ ಕೆರೆಗೆ ಸ್ವಲ್ಪ ನೀರು ಸಂಗ್ರಹವಾಗಿದ್ದು, ಒತ್ತುವರಿದಾರರು ಕೆರೆಯನ್ನು ಒಣಗಿಸುವ ಕೆಲಸ ಸಹ ಸದ್ದಿಲ್ಲದೆ ನಡೆಸಿದ್ದಾರೆ.
ಸಂಬಂಧಪಟ್ಟ ಅಧಿಕಾರಿಗಳು ಮೊದಲು ಒತ್ತುವರಿದಾರರನ್ನು ತೆರವುಗೊಳಿಸಿ ಕೆರೆಯಲ್ಲಿ ತುಂಬಿರುವ ಹೂಳನ್ನು ಎತ್ತಿ ನೀರು ಸಂಗ್ರಹವಾಗಲು ಕ್ರಮ ಕೈಗೊಳ್ಳಬೇಕೆಂದು ಗ್ರಾಸಸ್ಥರು ಒತ್ತಾಯಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

