ಸಿಬ್ಬಂದಿ ಕೊರತೆ ಇಲ್ಲ, ಕಸ ಸಮಸ್ಯೆ ನೀಗಿಲ್ಲ
ಚಿಕ್ಕಬಳ್ಳಾಪುರ: ಕಸ ವಿಲೇವಾರಿಗೆ ಸಿಬ್ಬಂದಿಯ ಕೊರತೆ ಇಲ್ಲ. ಆದರೂ ಸಹ ಎಲ್ಲೆಂದರಲ್ಲಿ ಕಸ ರಾಶಿ ರಾಶಿಯಾಗಿ ಕಾಣಿಸಿಕೊಳ್ಳುವುದು ಗೌರಿಬಿದನೂರು ಪಟ್ಟಣದಲ್ಲಿ ಸಾಮಾನ್ಯ.
ಪಟ್ಟಣದಲ್ಲಿ ಮನೆ ಮನೆಗಳಿಗೂ ತೆರಳಿ ಕಸ ಸಂಗ್ರಹಿಸುವುದರ ಮಧ್ಯೆ ಬಸ್ ನಿಲ್ದಾಣ, ಸ್ಲಮ್ ಏರಿಯಾಗಳು, ಸಂತೆ ಮಾರ್ಕೆಟ್, ಸಣ್ಣ ಸಣ್ಣ ಗಲ್ಲಿಗಳಲ್ಲಿನ ಕಸದ ಸಮಸ್ಯೆ ಇದೆ. ಕಸ ವಿಲೇವಾರಿಗೆ ದೂರುಗಳು ಕೇಳಿ ಬರಬೇಕು. ಇಲ್ಲದಿದ್ದಲ್ಲಿ ಕಸಕ್ಕೂ ನಮಗೂ ಸಂಬಂಧವಿಲ್ಲ ಎನ್ನುವಂತೆ ಅಧಿಕಾರಿಗಳು ವರ್ತಿಸಿತ್ತಿದ್ದಾರೆ.
ಕಸಾಯಿಖಾನೆಗಳು, ಹೊಟೇಲ್, ರೆಸ್ಟೋರೆಂಟ್ಗಳಿಗೆ ಕಸ ವಿಲೇವಾರಿ ಬಗ್ಗೆ ಯಾವುದೇ ರೀತಿಯಲ್ಲಿ ಎಚ್ಚರಿಕೆ ನೀಡಿದಂತಿಲ್ಲ. ಕೋಳಿ ಮಾಂಸ ಮಾರಾಟಗಾರರು ಮೂಟೆಗಟ್ಟಲೇ ಕೋಳಿ ರೆಕ್ಕೆ ಪುಕ್ಕಗಳನ್ನು ತಂದು ಪಿನಾಕಿನಿಗೆ ಹೊಂದಿಕೊಂಡಂತೆ ಪಟ್ಟಣದಲ್ಲಿರುವ ಸೇತುವೆ ಬಳಿ ಬಿಸಾಡುತ್ತಿದ್ದಾರೆ. ಇದು ನದಿ ನೀರಿನಲ್ಲಿ ಸೇರಿಕೊಂಡು ಗಬ್ಬು ವಾಸನೆ ಹರಡಿ, ಆ ಪ್ರದೇಶವನ್ನು ಹಾಳು ಮಾಡುತ್ತಿದೆ. ಹೀಗೆ ಪಟ್ಟಣದ ಸುತ್ತಮುತ್ತಲಿನ ಬಯಲು ಪ್ರದೇಶಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಹರಡಿರುವ ಬಿಳಿ ತ್ಯಾಜ್ಯ(ಕೋಳಿ ರೆಕ್ಕೆ ಪುಕ್ಕ), ಕಸಕಡ್ಡಿ, ಪ್ಲಾಸ್ಟಿಕ್ ಸೇರಿದಂತೆ ತ್ಯಾಜ್ಯವು ಬೇರೆ ಕಡೆಯಿಂದ ಪಟ್ಟಣಕ್ಕೆ ಆಗಮಿಸುವವರನ್ನು ಸ್ವಾಗತಿಸುವಂತಿರುತ್ತದೆ.
ತ್ಯಾಜ್ಯ ವಿಲೇವಾರಿಗೆ ಒಟ್ಟು 70 ಜನ ಇದ್ದು, ಕಾಯಂ ಮತ್ತು ಗುತ್ತಿಗೆಯಾಧಾರದ ಮೇಲೆ ತಲಾ 35 ಮಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಪ್ರತಿನಿತ್ಯ 18 ಟನ್ ಉತ್ಪತ್ತಿಯಾಗಿ 16 ಟನ್ ವಿಲೇವಾರಿಯಾಗುತ್ತಿದೆ. ಇತ್ತೀಚೆಗೆ ಪುರಸಭೆಯಲ್ಲಿ ನಡೆದ ಸದಸ್ಯರ ಸಭೆಯಲ್ಲಿ ತ್ಯಾಜ್ಯ ವಿಲೇವಾರಿಯಲ್ಲಿನ ದೋಷಗಳ ಬಗ್ಗೆ ಅಪಸ್ವರ ಎದ್ದಿತ್ತು. ಈ ಹಿನ್ನೆಲೆಯಲ್ಲಿ ಕಳೆದ 15 ದಿನಗಳಿಂದಲೂ ಪಟ್ಟಣದಾದ್ಯಂತ ಪೌರ ಕಾರ್ಮಿಕರು ಎಚ್ಚರಿಕೆಯಿಂದಿದ್ದಾರೆ.
ಈ ಹಿಂದೆ ದೂರುಗಳು ಹೆಚ್ಚಿಗೆ ಕೇಳಿ ಬರುತ್ತಿತ್ತು. ಈಗ ಕಡಿಮೆಯಾಗಿದೆ. ದೂರುಗಳು ಬಂದ ತಕ್ಷಣ ಸ್ಪಂದಿಸುವುದು ಇಲ್ಲವೇ ಸ್ವಯಂ ಪ್ರತಿನಿತ್ಯ ಬೆಳಿಗ್ಗೆ ಮತ್ತು ಮಧ್ಯಾಹ್ನ ತ್ಯಾಜ್ಯವನ್ನು ಖಾಲಿ ಮಾಡಿಸಲಾಗುತ್ತಿದೆ.
ಟಿ ತಿಮ್ಮರಾಜು
ಪರಿಸರ ಅಭಿಯಂತರರು, ಗೌರಿಬಿದನೂರು ಪುರಸಭೆ
ಎನ್.ವೆಂಕಟೇಶ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

