ಕೋಲಾರ

ಕೃಷಿ ಇಲಾಖೆಯಿಂದಲೇ ಕಳಪೆ ಬಿತ್ತನೆ ಬೀಜ ವಿತರಣೆ!

Published On :

ವಿ.ಡಿ. ಗಣೇಶ್
ಗೌರಿಬಿದನೂರು: ಕಸಬಾ ರೈತ ಸಂಪರ್ಕ ಕೇಂದ್ರದಿಂದ ರೈತರಿಗೆ ವಿತರಿಸುತ್ತಿರುವ ಗಂಗಾಕಾವೇರಿ ಕಂಪನಿಯ ಮೆಕ್ಕೆಜೋಳ ಬಿತ್ತನೆ ಜೋಳ ಕಳಪೆಯಿಂದ ಕೂಡಿದ್ದು, ನಾಟಿ ಮಾಡಿದರೂ ಮೊಳಕೆಯೊಡೆದಿಲ್ಲ ಎಂದು ರೈತರು ಕೃಷಿ ಅಧಿಕಾರಿಯನ್ನು ಆಗ್ರಹಿಸಿದ್ದಾರೆ.
ಹಿರೇಬಿದನೂರು ರೈತ ನಾಗರಾಜಪ್ಪ ಕಸಬಾ ರೈತಸಂಪರ್ಕ ಕೇಂದ್ರದಲ್ಲಿ ಖರೀದಿಸಿದ್ದ ಗಂಗಾಕಾವೇರಿ ತಳಿಯ ಬಿತ್ತನೆ ಜೋಳದ ಪಾಕೆಟ್ಟುಗಳನ್ನು ಸಹಾಯಕ ಕೃಷಿ ನಿರ್ದೇಶಕ ವೆಂಕಟರಮಣಪ್ಪ  ಸಮ್ಮುಖದಲ್ಲಿ ವಾಪಸ್ ನೀಡಿದ್ದು, ಈ ಸ್ಯಾಂಪಲ್ಲನ್ನು ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳಿಸುವುದಾಗಿ ಅಧಿಕಾರಿ ತಿಳಿಸಿದ್ದರೂ ರೈತರಲ್ಲಿ ಆತಂಕ ಕಡಿಮೆಯಾಗಿಲ್ಲ.
ತೀವಿರ ಬರ ಎದುರಿಸುತ್ತಿರುವ ತಾಲೂಕಿನಲ್ಲಿ ಮಳೆಯನ್ನೇ ನಂಬಿ ಬಿತ್ತನೆ ಮಾಡುವ ರೈತರಿಗೆ ಸರ್ಕಾರದ ಕೃಷಿ ಇಲಾಖೆಯಿಂದ ವಿತರಿಸುತ್ತಿರುವ ಬಿತ್ತನೆ ಬೀಜ ಕಳಪೆಯಾದರೆ ರೈತನ ಪಾಡೇನು ಎಂದು ಪ್ರಶ್ನಿಸಿದ ರೈತ ನಾಗರಾಜಪ್ಪ ಸಂಬಂಧಪಟ್ಟವರು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಸ್ಪಷ್ಟೀಕರಣ: ಈ ಬಗ್ಗೆ ಸ್ಪಷ್ಟೀಕರಣ ನೀಡಿದ ಸಹಾಯಕ ಕೃಷಿ ನಿರ್ದೇಶಕ ವೆಂಕಟರಮಣಪ್ಪ, ರೈತ ಸಂಪರ್ಕ ಕೇಂದ್ರ ಸರ್ಕಾರದ ನಿಯಮಾನುಸಾರ ಅಧಿಕೃತವಾಗಿ ಆಯ್ಕೆ ಮಾಡಿದ ಕಂಪನಿಗಳ ಬಿತ್ತನೆ ಬೀಜಗಳನ್ನೇ ಮಾರಾಟ ಮಾಡಲಾಗುತ್ತಿದೆ. ಪ್ರತಿ ಕಂಪನಿಯವರೂ ಪ್ರಯೋಗಾಲಯದಲ್ಲಿ ಪರೀಕ್ಷಿಸಿ ಬಿತ್ತನೆ ಬೀಜ ನೀಡುತ್ತಾರೆ ಆದರೂ ಈ ರೀತಿಯ ದೂರುಗಳು ಬಂದಲ್ಲಿ ರೈತರು ತಕ್ಷಣ ವಾಪಸ್ ನೀಡಿದರೆ ಅಂತಹ ಬಿತ್ತನೆ ಬೀಜ ಬೆಂಗಳೂರಿನ ಪ್ರಯೋಗಾಲಯಕ್ಕೆ ಮಾದರಿ ಪರೀಕ್ಷೆಗೆ ಕಳುಹಿಸುತ್ತೇವೆ. ಪರಿಕ್ಷೆಯಲ್ಲಿ ಕಳಪೆ ಎಂದು ಕಂಡುಬಂದಲ್ಲಿ ನಿರ್ಧಾಕ್ಷಿಣ್ಯವಾಗಿ ಕ್ರಮಕೈಗೊಳ್ಳಲಾವುಗುವುದು ಎಂದರು.
ಸುಮಾರು 36 ಕಂಪನಿಗಳ ಬಿತ್ತನೆ ಬೀಜದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ಪ್ರಯೋಗಾಲಯದಲ್ಲಿ ಉತ್ತಮ ಫಲಿತಾಂಶ ಬಂದಲ್ಲಿ ಮಾತ್ರ ಮಾರಾಟ ಮಾಡುತ್ತೇವೆ. ಸುಮಾರು 8 ತಳಿಗಳ ಫಲಿತಾಂಶ ಬಂದಿದ್ದು, ಉಳಿದ 28 ಬಿತ್ತನೆ ಬೀಜದ ಬರಬೇಕಿದೆ ಎಂದರು.
ಕಸಬಾ ರೈತ ಸಂಪರ್ಕ ಕೇಂದ್ರಕ್ಕೆ ಕಳಪೆಬಿತ್ತನೆ ಬೀಜ ವಾಪಸ್ ನೀಡಿರುವ ಹಿನ್ನೆಲೆಯಲ್ಲಿ ತಾಲೂಕಿನಲ್ಲಿರುವ 6 ರೈತ ಸಂಪರ್ಕ ಕೇಂದ್ರಗಳಲ್ಲಿ ಮಾರಾಟ ಮಾಡುತ್ತಿರುವ ಬಿತ್ತನೆ ತಳಿಗಳ ಮಾದರಿಯನ್ನು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ವರದಿ ಬಂದ ನಂತರ ಕ್ರಮ ಕೈಗೊಳ್ಳಲಾಗುವುದು.
- ವೆಂಕಟರಮಣಪ್ಪ,
ಸಹಾಯಕ ಕೃಷಿ ನಿರ್ದೇಶಕ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.