ಕೋಲಾರ

ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ ಶಾಸಕ ಮಂಜು

Published On :

ಮಾಲೂರು: ಈ ಹಿಂದೆ ನಿವೇಶನ ನೀಡುವುದಾಗಿ ಬಡವರಿಂದ ಹಣ ಪಡೆದು ಇದುವರೆಗೂ ನಿವೇಶನ ನೀಡದೆ ವಿಳಂಬ ನೀತಿ ಅನುಸರಿಸುತ್ತಿರುವ ಇಲ್ಲಿನ ಪುರಸಭೆ ಮುಖ್ಯಾಧಿಕಾರಿಗಳನ್ನು ಹಾಗೂ ಪುರಸಭೆ ಸದಸ್ಯರುಗಳನ್ನು ಶಾಸಕರು ತೀವ್ರವಾಗಿ ತರಾಟೆ ತೆಗೆದುಕೊಂಡ ಘಟನೆ ಭಾನುವಾರ ಇಲ್ಲಿನ ಮಿನಿ ವಿಧಾನಸೌಧದಲ್ಲಿ ನಡೆದಿದೆ.
ಸ್ಥಳೀಯ ಕರವೇ ಸಂಘಟನೆ ಬಡವರಿಗೆ ನಿವೇಶನಕ್ಕಾಗಿ ಒತ್ತಾಯಿಸಿ ಸೋಮವಾರ ಪ್ರತಿಭಟನೆ ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ ಕಾರ್ಯನಿಮಿತ್ತ ಪಟ್ಟಣದ ಮಿನಿವಿಧಾನ ಸೌಧಕ್ಕೆ ಆಗಮಿಸಿದ ಶಾಸಕ ಮಂಜುನಾಥ್ ಗೌಡ ಭೇಟಿ ಮಾಡಿ ವಿಷಯ ಚರ್ಚಿಸಿಲು ಬಂದ ಪುರಸಭೆ ಮುಖ್ಯಾಧಿಕಾರಿ, ಅಧ್ಯಕ್ಷ ಹಾಗೂ ಸದಸ್ಯರನ್ನು ತೀವ್ರವಾಗಿ ತರಾಟೆ ತೆಗೆದುಕೊಂಡರು. ಬಡವರಿಂದ ಹಣ ಪಡೆದು ಹತ್ತು ವರ್ಷವಾದರೂ ಇದುವರೆಗೂ ನಿವೇಶನ ನೀಡಿರುವುದು ಸರಿಯಲ್ಲ. ಈ ಹಿಂದೆ ಶಾಸಕನಾಗುವ ಮುನ್ನ ಜೆಡಿಎಸ್ ವತಿಯಿಂದ ಹೋರಾಟ ಮಾಡಿ ನಿವೇಶನ ನೀಡುವಂತೆ ಪುರಸಭೆಗೆ ಒತ್ತಾಯಿಸಿದೆ. ಮತ್ತೇ ಹಣ ಕಟ್ಟದಂತೆ ಆಗಲೇ ಹಣ ಕಟ್ಟಿದವರಿಗೂ ತಿಳಿಸಿದೆ. ಆದರೆ ನಿವೇಶನದ ಆಸೆಗೆ ಬಡವರು ಮತ್ತೇ ಹಣ ಕಟ್ಟಿದರು. ನೀವು ಮಾತ್ರ ನಿವೇಶನ ನೀಡಿಲ್ಲ. ಹಾಲಿ ಪುರಸಭೆಯ ಹಿಡಿತದಲ್ಲಿರುವ 620 ನಿವೇಶನಗಳನ್ನು ಮೊದಲ ಹಂತವಾಗಿ ಮೊದಲು ಅರ್ಜಿ ಸಲ್ಲಿಸಿದ ಅರ್ಹ ಫಲಾನುಭವಿಗಳಿಗೆ ನೀಡಿ ಉಳಿದ 600 ನಿವೇಶನಕ್ಕಾಗಿ ಹೊಸೂರು ರಸ್ತೆಯ ಸೀತಾನಾಯಕಹಳ್ಳಿ ಬಳಿ ಗುರುತಿಸಲಾಗಿರುವ ಜಮೀನನ್ನು ಖರೀದಿಸಿ ನೀಡಿ ಎಂದರು.
ಯೋಜನೆ ವಿರುದ್ಧ ಖಾಸಗಿ ವ್ಯಕ್ತಿ ಕೆ.ಎಲ್.ನಾಗರಾಜ್ ಎಂಬವರು ಕೋರ್ಟ್ ಮೆಟ್ಟಿಲು ಹತ್ತಿರುವ ಕಾರಣ ನಿವೇಶನ ಹಂಚಲು ಸಾಧ್ಯವಾಗಿಲ್ಲ ಎಂದ ಪುರಸಭೆ ಮುಖ್ಯಾಧಿಕಾರಿ ರೇಣುಕಾ ಅವರಿಗೆ ಉತ್ತರಿಸಿದ ಶಾಸಕರು, ನಾಗರಾಜ್ ಅವರನ್ನು ಕರೆಸಿ ಮಾತನಾಡಿ ಮೊಕದ್ದಮೆ ಹಿಂದಕ್ಕೆ ಪಡೆಯುವಂತೆ ಮನವೊಲಿಸುವುದಾಗಿ ತಿಳಿಸಿದರು. ಪುರಸಭೆ ಅಧ್ಯಕ್ಷೆ ಭಾರತಮ್ಮ ನಂಜುಂಡಪ್ಪ, ಸದಸ್ಯ ಜಾಕೀರ್ ಖಾನ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.