ಕೋಳಿ ಜೂಜಾಟ; 6 ಮಂದಿ ಬಂಧನ
ಚಿಂತಾಮಣಿ: ದಿಗವಕೋಟೆ ಗ್ರಾಮದಲ್ಲಿ ಕೋಳಿ ಜೂಜಾಟದಲ್ಲಿ ತೊಡಗಿದ್ದ ಗುಂಪಿನ ಮೇಲೆ ಪೊಲೀಸರು ದಾಳಿ ನಡೆಸಿ 4 ಕೋಳಿ ಹುಂಜಗಳನ್ನು ಹಾಗೂ ಸಾವಿರಾರು ರುಪಾಯಿ ನಗದು ವಶಪಡಿಸಿಕೊಂಡಿರುವ ಘಟನೆ ಶನಿವಾರ ಸಂಜೆ ನಡೆದಿದೆ. ತಾಲೂಕಿನ ಬಟ್ಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ದಿಗವಕೋಟೆ ಗ್ರಾಮದ ಕೆರ ಅಂಗಳದಲ್ಲಿ ಕೋಳಿ ಜೂಜಾಟದಲ್ಲಿ ತೊಡಗಿದ್ದ ಗುಂಪಿನ ಮೇಲೆ ಖಚಿತ ಮಾಹಿತಿ ಮೇಲೆ ಸಬ್ಇನ್ಸ್ಪೆಕ್ಟರ್ ಪ್ರವೀಣ್ಕುಮಾರ್ ಹಾಗೂ ಸಿಬ್ಬಂದಿ ಏಕಾಏಕಿ ದಾಳಿ ನಡೆಸಿದ ಪರಿಣಾಮ 4 ಕೋಳಿ ಹುಂಜಗಳನ್ನು ಮತ್ತು ಸಾವಿರಾರು ರುಪಾಯಿ ನಗದು ಹಣವನ್ನು ವಶಪಡಿಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು 6 ಮಂದಿ ಆರೋಪಿಗಳಾದ ವೆಂಕಟರಾಯಪ್ಪ, ಜಗನ್ನಾಥ್, ಸದಾಶಿವ, ವೆಂಕಟರಾಯಪ್ಪ, ನರಸಿಂಹಪ್ಪ, ಪ್ರಸಾದ್ರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಅಂಬೇಡ್ಕರ್ ಎಲ್ಲ ವರ್ಗಗಳ ನಾಯಕ
ಕೋಲಾರ: ಡಾ.ಬಿ.ಆರ್. ಅಂಬೇಡ್ಕರ್ ಅವರು ದಲಿತರಿಗೆ ಮಾತ್ರವಲ್ಲದೆ ಎಲ್ಲಾ ಸಮುದಾಯಗಳ, ವರ್ಗಗಳ ಹೀರೋ ಎಂದು ಅಹಿಂದ ರಾಜ್ಯಾಧ್ಯಕ್ಷ ಎಂ. ಮುಕುಡಪ್ಪ ಬಣ್ಣಿಸಿದರು. ನಗರದ ಟಿ. ಚನ್ನಯ್ಯ ರಂಗಮಂದಿರದಲ್ಲಿ ಜಿಲ್ಲಾ ಅಸ್ಪೃಶ್ಯರ ಹೋರಾಟ ಸಮಿತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಅಸ್ಪೃಶ್ಯರ ಜಾಗೃತಿ ಸಮಾವೇಶ ಉದ್ಘಾಟಿಸಿ ಮಾತನಾಡಿ, ಡಾ.ಬಿ.ಆರ್. ಅಂಬೇಡ್ಕರ್ ದಲಿತರ ಪಾಲಿಗೆ ಮಾತ್ರವಲ್ಲದೆ ಶೋಷಿತ ವರ್ಗಗಳ ದೇವರು ಎಂದರು. ಡಾ.ಅಂಬೇಡ್ಕರ್ ಅವರು ಕೇವಲ ದಲಿತ ಶೋಷಣೆಯ ವಿರುದ್ಧವಷ್ಟೇ ಹೋರಾಟ ನಡೆಸಿಲ್ಲ. ಒಕ್ಕಲಿಗರು, ಕುರುಬರು, ಉಪ್ಪಾರ, ತಿಗಳ, ಬಲಿಜಿಗ ಹೀಗೆ ನೂರೆಂಟು ಜಾತಿಗಳಿಗೆ ಸಾಮಾಜಿಕ ನ್ಯಾಯ ಸಿಗಬೇಕೆಂದು ಹೋರಾಡಿದ ಪುಣ್ಯಾತ್ಮರಾಗಿದ್ದು, ಇಂದು ಈ ಎಲ್ಲಾ ವರ್ಗದ ಜನರು ಒಗ್ಗೂಡಿ ಸಾಮಾಜಿಕ ಪರಿವರ್ತನೆಗಾಗಿ ಶ್ರಮಿಸಬೇಕಾಗಿದೆ ಎಂದು ತಿಳಿಸಿದರು. ಯಲುವಗುಳಿ ಆರ್. ರಾಜಣ್ಣ, ಮಾಜಿ ಶಾಸಕ ಎ. ನಾಗರಾಜ್, ವೆಂಕಟಪತಪ್ಪ, ಎಸ್. ಪ್ರಭಾವತಿ, ಮುನಿಬೈರಪ್ಪ, ಕೆ.ಟಿ. ನಾಗರಾಜ್, ಬೆಳಗಾನಹಳ್ಳಿ ಮುನಿವೆಂಕಟಪ್ಪ, ಆರ್. ಅಶ್ವತ್ಥನಾರಾಯಣ್, ಮುನಿವೆಂಕಟಪ್ಪ, ಡಿ.ನಾರಾಯಣಸ್ವಾಮಿ ಇದ್ದರು.
ಕೇಂದ್ರ ಸಚಿವರಿಗೆ ಅಭಿನಂದನೆ
ಟೇಕಲ್: ಕೇಂದ್ರ ಸಚಿವ ಕೆ.ಎಚ್. ಮುನಿಯಪ್ಪನವರು ಜಿಲ್ಲೆಗೆ ರೈಲ್ವೆ ಕೋಚ್ ಫ್ಯಾಕ್ಟರಿ ಹಾಗೂ ವೆಮಗಲ್ ನರಸಾಪುರದ ಬಳಿ ಹೊಂಡಾ ಪ್ಯಾಕ್ಟರಿ ಕೊಟ್ಟಿದ್ದು ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಸಹಕಾರಿಯಾಗಿದೆ ಎಂದು ಕೋಲಾರ ಜಿಲ್ಲಾ ಕಾಂಗ್ರೆಸ್ ಸಮಿತಿ ಹಿಂದುಳಿದ ವರ್ಗದ ವಿಭಾಗಗಳ ಅಧ್ಯಕ್ಷ ಟಿ.ಎಸ್. ಅಶೋಕ್ ಕುಮಾರ್ ಅಭಿನಂದಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

