ಕೋಲಾರ

ದೇಶದ ಮುಸ್ಲಿಮರು ಮೂಲತಃ ಹಿಂದುಗಳು

Published On :

ಕೋಲಾರ: ಭಾರತದಲ್ಲಿರುವ ಎಲ್ಲಾ ಮುಸ್ಲಿಂರು ಹೊರದೇಶದಿಂದ ಬಂದವರಲ್ಲ ಅವರು ಮೂಲತಃ ಹಿಂದೂಗಳೇ ಆಗಿದ್ದು, ಹಿಂದುತ್ವದ ಶ್ರೇಣಿಕೃತ ಜಾತಿವ್ಯವಸ್ಥೆಯಿಂದ ಬೇಸತ್ತು ಬಿಡುಗಡೆಗಾಗಿ ಇಸ್ಲಾಂಗೆ ಮತಾಂತರಗೊಂಡವರಾಗಿದ್ದಾರೆ, ಅವರು ಈ ನೆಲದವರೇ ಆಗಿರುವುದರಿಂದ ಹಿಂದೂಗಳ ವೈರಿಗಳಲ್ಲ ಎಂದು ಆರ್‌ಪಿಐ ರಾಷ್ಟ್ರಧ್ಯಕ್ಷ, ರಾಜ್ಯಸಭಾ ಸದಸ್ಯ ರಾಂದಾಸ್ ಅಠವಳೆ ವ್ಯಾಖ್ಯಾನ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ದಲಿತ ಮತ್ತು ಮುಸ್ಲಿಂ ಸಮುದಾಯಗಳ ವಿರೋಧಿಯಲ್ಲ. ಆದರೆ ಹಿಂದುತ್ವದ ಹಿನ್ನೆಲೆಯಲ್ಲಿ ರಾಜಕೀಯ ಪ್ರವೇಶಿಸಿದ ಬಿಜೆಪಿಯಲ್ಲಿ ಈಗ ಬಹಳ ಬದಲಾವಣೆಗಳು ಕಂಡುಬರುತ್ತಿದೆ, ಕೋಮುವಾದಿ ಹಿನ್ನೆಲೆಯಿಂದ ದೂರವಾಗಿ ಜನಪರ ಧೋರಣೆಯೊಂದಿಗೆ 2014ರ ಲೋಕಸಭಾ ಮಹಾಸಮರಕ್ಕೆ ಸಜ್ಜಾಗಿರುವುದು ಕಂಡುಬಂದಿರುವುದರಿಂದ ರಾಷ್ಟ್ರೀಯ ದಲಿತ ಮೈತ್ರಿಕೂಟ (ನ್ಯಾಷನಲ್ ದಲಿತ್ ಅಲೆಯನ್ಸ್) ಅಧ್ಯಕ್ಷ ರಾಮ್ ವಿಲಾಸ್ ಪಾಸ್ವಾನ್, ತಮ್ಮ ನೇತೃತ್ವದ ಆರ್‌ಪಿಐ ಹಾಗೂ ಉತ್ತರ ಪ್ರದೇಶದ ಉದಿತ್ ರಾಜ್ ನೇತೃತ್ವದಲ್ಲಿ ಎನ್‌ಡಿಎ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದು ಇದು ಕೇವಲ ರಾಜಕೀಯಕ್ಕಾಗಿಯೇ ಹೊರತು ಸೈದ್ಧಾಂತಿಕ ಮೈತ್ರಿ ಅಲ್ಲವೆಂದು ತಿಳಿಸಿದರು.
ರಾಷ್ಟ್ರದಲ್ಲಿ ಬಹುಸಂಖ್ಯಾತ ಜನರ ಭಾವನೆಗಳು ನರೇಂದ್ರಮೋದಿಯವರನ್ನು ಪ್ರಧಾನ ಮಂತ್ರಿ ಆಯ್ಕೆಗೆ ಪೂರಕವಾಗಿದ್ದು ಕಾಂಗ್ರೆಸ್‌ನ ರಾಹುಲ್ ಗಾಂಧಿ ಅವರಿಗೆ ಹೇಳಿಕೊಳ್ಳುವಂತಹ ಜನ ಬೆಂಬಲವಾಗಲಿ ಅಥವಾ ಕಾಂಗ್ರೆಸ್‌ಗೆ ಮತ ಕೇಳುವ ನೈತಿಕತೆ ಇಲ್ಲದಂತಾಗಿದೆ ಎಂದು ಕಿಡಿಕಾರಿದರು. ಆರ್‌ಪಿಐ ರಾಜ್ಯಾಧ್ಯಕ್ಷ ಎಂ. ವೆಂಕಟಸ್ವಾಮಿ, ಕೆ. ಚಂದ್ರಶೇಖರ್, ಎಚ್.ಕೆ. ದಾಸ್, ಲೋಕಜನಶಕ್ತಿ ರಾಜ್ಯಾಧ್ಯಕ್ಷೆ ಎಂ. ಪ್ರಭಾವತಿ, ಆರ್‌ಪಿಐ ಜಿಲ್ಲಾಧ್ಯಕ್ಷ ಬಿ.ವಿ.ವಿ. ಗಿರಿ, ಆರ್. ಶ್ರೀರಾಮಣ್ಣ, ಮಂಡ್ಯದ ಕೊಮ್ಮೇರಹಳ್ಳಿ ಕೃಷ್ಣಮೂರ್ತಿ, ಬಿಜಾಪುರ ಶರಣಕುಮಾರ ಕಂಬಾಗಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.