ಕೋಲಾರ

ವರ್ತೂರ್ ಬಣದ ವಶಕ್ಕೆ ದೊಡ್ಡ ಹಸಾಳ ಗ್ರಾಪಂ

Published On :

ಕೋಲಾರ: ತಾಲೂಕಿನ ದೊಡ್ಡಹಸಾಳ ಗ್ರಾಪಂ ನೂತನ ಅಧ್ಯಕ್ಷರಾಗಿ ಶಾಸಕ ವರ್ತೂರು ಪ್ರಕಾಶ್ ಬಣದ ವೆಂಕಟಲಕ್ಷ್ಮಮ್ಮ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಕಳೆದ ಫೆ .14 ರಂದು ಹಿಂದಿನ ಅಧ್ಯಕ್ಷೆ ಜೆಡಿಎಸ್ ಪಕ್ಷದ ಸದಸ್ಯೆ ಮಂಜುಳ ವಿರುದ್ಧ ಗ್ರಾಪಂ ಸದಸ್ಯರು ಅವಿಶ್ವಾಸ ಮಂಡಿಸಿದ್ದು, ಈ ಹಿನ್ನಲೆಯಲ್ಲಿ ಗುರುವಾರ ನಡೆದ ಚುನಾವಣೆಯಲ್ಲಿ ಮಂಜುಳರನ್ನು ಪದಚ್ಯುತಗೊಳಿಸಿ ವೆಂಕಟಲಕ್ಷ್ಮಮ್ಮ ಅವರನ್ನು ಸರ್ವಾನುಮತದಿಂದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು.
ಚುನಾವಣಾಧಿಕಾರಿಯಾಗಿ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕಿ ಗಾಯತ್ರಿ ಕಾರ್ಯನಿರ್ವಹಿಸಿದರು. ನಂತರ ಶಾಸಕರ ನಿವಾಸಕ್ಕೆ ಭೇಟಿಯಿತ್ತ ನೂತನ ಅಧ್ಯಕ್ಷೆ ಮತ್ತು ಸದಸ್ಯರ ದಂಡು ಶಾಸಕ ವರ್ತೂರು ಪ್ರಕಾಶ್ ಅವರಿಗೆ ಕೃತಜ್ಞತೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು, ಹಿಂದಿನ ಅಧ್ಯಕ್ಷರಿಗಿಂತ ನಮ್ಮ ಬಣದ ಅಧ್ಯಕ್ಷರು ಉತ್ತಮ ಕೆಲಸ ಮಾಡುವ ಮೂಲಕ ಗ್ರಾಪಂ ಹಾಗೂ ಗ್ರಾಪಂ ವ್ಯಾಪ್ತಿಯ ಗ್ರಾಮಸ್ಥರಿಗೆ ಉತ್ತಮ ಹೆಸರು ತಂದುಕೊಡಲಿ ಎಂದು ಆಶಿಸಿದರು. ವರ್ತೂರ್ ಬಣದ ಮುಖಂಡರಾದ ಬೆಗ್ಲಿ ಪ್ರಕಾಶ್, ಛತ್ರಕೋಡಿಹಳ್ಳಿ ರಾಜಗೋಪಾಲ್, ಆಟೋ ನಾರಾಯಣಸ್ವಾಮಿ, ಸೋಮಣ್ಣ, ಗ್ರಾಪಂ ಉಪಾಧ್ಯಕ್ಷ ರಘುಕುಮಾರ್, ಸದಸ್ಯರಾದ ಗೋವಿಂದಪ್ಪ, ಆನಂದ್, ಜಗನ್ನಾಥ್, ಎನ್. ಸುಗುಣ ಶ್ರೀನಿವಾಸಗೌಡ, ಅಕ್ಕಯ್ಯಮ್ಮ, ಸರಸ್ವತಿ ವೆಂಕಟೇಶ್ ಗೌಡ, ನಾರಾಯಣಸ್ವಾಮಿ, ಮುನಿಯಪ್ಪ, ಜಾನಕಿಬಾಯಿ,ಮಂಜುನಾಥ್, ವಿಜಯಮ್ಮ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.