ಕೋಲಾರ

ಮೋದಿ ಹವಾ ಇರುವಾಗ ಸ್ಪರ್ಧೆಗೆ ಪೈಪೋಟಿ ಸಾಮಾನ್ಯ

Published On :

ಮಾಲೂರು: ನಮ್ಮ ಪಕ್ಷದಲ್ಲಿ ಟ್ರಬಲ್ ಶೂಟರ್‌ಗಳಿದ್ದು, ಅಭ್ಯರ್ಥಿಗಳ ಬಂಡಾಯ, ಗೊಂದಲಗಳನ್ನು ಪಕ್ಷದ ಹಿರಿಯರು ನಿಮಿಷದೊಳಗೆ ಬಗೆಹರಿಸಬಲ್ಲರು ಎಂದು ಕೋಲಾರ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಂ.ನಾರಾಯಣಸ್ವಾಮಿ ಹೇಳಿದರು.
ಅವರು ಬಿಜೆಪಿ ಅಭ್ಯರ್ಥಿಯಾಗಿ ಆಯ್ಕೆಯಾದ ನಂತರ ದೆಹಲಿಯಿಂದ ನೇರವಾಗಿ ಶುಕ್ರವಾರ ಸಂಜೆ ಮಾಲೂರು ಪಟ್ಟಣಕ್ಕೆ ಭೇಟಿ ನೀಡಿ ಇಲ್ಲಿನ ಗ್ರಾಮ ದೇವತೆ ಮಾರಿಕಾಂಬ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ನಂತರ ತಮ್ಮನ್ನು ಅಭ್ಯರ್ಥಿಯಾಗಿ ಆಯ್ಕೆ ಮಾಡಿದ ನಂತರ ಪಕ್ಷದಲ್ಲಿ ಎದ್ದಿರುವ ಅಸಮಾಧಾನ ಹಾಗೂ ಬಂಡಾಯ ಬಗ್ಗೆ  ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿ ಮಾತನಾಡುತ್ತ ರಾಷ್ಟ್ರೀಯ ಪಕ್ಷಗಳಲ್ಲಿ ಅಭ್ಯರ್ಥಿಗಳು ಆಯ್ಕೆಯಾಗುವಾಗ ಅದರಲ್ಲೂ ಮೋದಿ ಹವಾ ದೇಶದಾದ್ಯಂತ ಬೀಸುತ್ತಿರುವಾಗ ಈ ರೀತಿಯ ಅಸಮಾಧಾನ, ಬಂಡಾಯ ಸಾಮಾನ್ಯ. ಇಂತಹ ಕಗ್ಗಂಟುಗಳನ್ನು ಬಿಡಿಸುವಲ್ಲಿ ನಮ್ಮ ಪಕ್ಷದಲ್ಲಿ ಟ್ರಬಲ್ ಶೂಟರ್‌ಗಳಿದ್ದಾರೆ. ಅವರ ಅನುಭವಗಳ ಮುಂದೆ ಈಗಿನ ಸಮಸ್ಯೆಗಳು ಸಮಸ್ಯೆಗಳೇ ಅಲ್ಲ ಎಂದರು.
ಜಿಲ್ಲೆಯ ಕಾರ್ಯಕರ್ತರ ಅಭಿಲಾಷೆಯಂತೆ ನನ್ನ ಆಯ್ಕೆ ನಡೆದಿದ್ದು, ನನ್ನ ಮೇಲೆ ನಂಬಿಕೆ ಇಟ್ಟು ಅಭ್ಯರ್ಥಿಯಾಗಿ ಆಯ್ಕೆ ಮಾಡಿದ ಜಿಲ್ಲೆಯ, ರಾಜ್ಯದ ಹಾಗೂ ಕೇಂದ್ರದ ಮುಖಂಡರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.ನರೇಂದ್ರ ಮೋದಿ ಪ್ರಧಾನಿಯಾದರೆ ವಾಜಪೇಯಿ ಕನಸಾಗಿದ್ದ ನದಿ ಜೋಡಣೆ ನನಸಾಗಲಿದೆ ಎಂದ ನಾರಾಯಣಸ್ವಾಮಿ ಜಿಲ್ಲೆಯಲ್ಲಿ ಶಾಶ್ವತ ನೀರಾವರಿ ಯೋಜನೆ ಅನುಷ್ಠಾನಗೊಳಿಸುವುದೇ ನನ್ನ ಮೊದಲ ಆದ್ಯತೆಯಾಗಲಿದೆ ಎಂದರು.
ಜಿಲ್ಲಾಧ್ಯಕ್ಷ ಕೃಷ್ಣಾರೆಡ್ಡಿ ಮಾತನಾಡಿದರು. ತಾಲೂಕು ಅಧ್ಯಕ್ಷ ಸೂ. ವೆಂಕಟೇಶ್, ಪುರಸಭೆ ಅಧ್ಯಕ್ಷ ಭಾರತಮ್ಮ, ಉಪಾಧ್ಯಕ್ಷೆ ಶ್ರೀ ವಲ್ಲಿ ರಮೇಶ್, ಸದಸ್ಯರಾದ ಸಿ.ಪಿ. ನಾಗರಾಜ್, ಎಂ.ಪಿ. ವಿಜಯ ಕುಮಾರ್, ವೇಮನ, ದೇವರಾಜ್ ರೆಡ್ಡಿ, ತಬಲನಾರಾಯಮಸ್ವಾಮಿ, ನಂಜುಂಡಪ್ಪ, ಕುಟ್ಟಿ, ಅಪ್ಪಿ, ಮುನಿರಾಜು, ಆಂಜಿನಪ್ಪ, ರಾಜಪ್ಪ, ಆಂಜಿ, ವೆಂಕಟೇಶ್ ಸೇರಿದಂತೆ ನೂರಾರು ಬಿಜೆಪಿ ಕಾರ್ಯಕರ್ತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.