ಕೋಲಾರ

18ಕ್ಕೆ ಕೃಷ್ಣಯ್ಯ ಶೆಟ್ಟಿ ಬೆಂಬಲಿಗರ ಸಭೆ

Published On :

ಮಾಲೂರು: ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿ ಬೆಂಬಲಿಗರ ಸಭೆ 18 ರಂದು ಪಟ್ಟಣದಲ್ಲಿ ಕರೆಯಲಾಗಿದೆ ಎಂದು ಜಿಪಂ ಸದಸ್ಯ ಎ. ರಾಮಸ್ವಾಮಿರೆಡ್ಡಿ ಹೇಳಿದ್ದಾರೆ. ಈ ಸಂಬಂಧ ಹೇಳಿಕೆ ನೀಡಿ, ಪಟ್ಟಣದ ರೇಲ್ವೇ ನಿಲ್ದಾಣದ ಮುಂಭಾಗ ಇರುವ ಎಸ್.ಎನ್.ಕೆ.ಬಡಾವಣೆಯಲ್ಲಿ ಬೆಂಬಲಿಗರ ಸಭೆ ಆಯೋಜಿಸಲಾಗಿದ್ದು, ಜಿಲ್ಲಾ, ತಾಲೂಕು, ಗ್ರಾಪಂ ಸದಸ್ಯರು ಹಾಗೂ ಮಾಜಿ ಸಚಿವರ ಬೆಂಬಲಗರು ಭಾಗವಹಿಸಲಿದ್ದಾರೆ. ಸಭೆಯಲ್ಲಿ ಲೋಕಸಭಾ ಚುನಾವಣೆಯಲ್ಲಿ ಯಾವ ಪಕ್ಷದ ಅಭ್ಯರ್ಥಿಯನ್ನು ಬೆಂಬಲಿಸಬೇಕು ಎಂಬುದರ ಬಗ್ಗೆ ಕಾರ್ಯಕರ್ತರ ಸಮ್ಮುಖದಲ್ಲಿ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳಬೇಕಾದ ಕಾರಣ ಸಭೆಗೆ ಎಲ್ಲಾ ಹಂತದ ಬೆಂಬಲಿಗರು ಸೇರಿ ಸಲಹೆ ಹಾಗೂ ಸೂಚನೆಗಳನ್ನು ನೀಡಿ ಒಮ್ಮತದ ನಿರ್ಧಾರ ತೆಗೆದುಕೊಳ್ಳುವುದಕ್ಕೆ ಸಹಕರಿಸಬೇಕೆಂದು ಮನವಿ ಮಾಡಿದ್ದಾರೆ.

ಮರದಿಂದ ಬಿದ್ದು ಯುವಕ ಸಾವು
ಚಿಂತಾಮಣಿ:
ಹುಣಿಸೆ ಮರದಿಂದ ಕಾಲು ಜಾರಿ ಬಿದ್ದು, ಯುವಕನೊಬ್ಬ ಮೃತಪಟ್ಟಿರುವ ಘಟನೆ ಕೆಂಚಾರ್ಲಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ತಾಲೂಕಿನ ಹೊಸಹುಡ್ಯ ಗ್ರಾಮದ ಆನಂದ್ರೆಡ್ಡಿ(25) ಹುಣಿಸೆ ಹಣ್ಣು ಕೀಳಲು ಪ್ರಯತ್ನಿಸಿದಾಗ ಕಾಲುಜಾರಿ ಬಿದ್ದು ಗಾಯಗೊಂಡಿದ್ದು, ಈತನಿಗೆ ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದರೂ ಫಲಕಾರಿಯಾಗದೆ ಮೃತಪಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಕೆಂಚಾರ್ಲಹಳ್ಳಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಬೆಸ್ಕಾಂ ನಿರ್ಲಕ್ಷ್ಯ; ರೈತನ ಸಾವು
ಮುಳಬಾಗಲು:
ಬೆಸ್ಕಾಂ ನಿರ್ಲಕ್ಷ್ಯದ ಕಾರಣ ರೈತರೊಬ್ಬರು ಸಾವಿಗೀಡಾದ ಘಟನೆ ಶನಿವಾರ ವರದಿಯಾಗಿದೆ. ಶುಕ್ರವಾರ ತೋಟದಲ್ಲಿ ವಿದ್ಯುತ್ ಸಂಪರ್ಕದಿಂದ ತೀವ್ರವಾಗಿ ಗಾಯಗೊಂಡಿದ್ದ ತಾಲೂಕಿನ ಮಂಚಿಗಾನಹಳ್ಳಿ ಗ್ರಾಮದ ವಾಸಿ ಶ್ರೀನಿವಾಸ್( 36) ಶನಿವಾರ ಬೆಂಗಳೂರಿನ ವಿಕ್ಟೋರಿಯ ಆಸ್ಪತ್ರೆಯಲ್ಲಿ ಸಾವಿಗೀಡಾದರು. ಪತ್ನಿ ಹಾಗೂ ಇಬ್ಪರು ಮಕ್ಕಳು ಇರುವ ಅವರ ಅಂತ್ಯಕ್ರಿಯೆ ಮಂಚಿಗಾನಹಳ್ಳಿ ಗ್ರಾಮದಲ್ಲಿ ಶನಿವಾರ ಸಂಜೆ ನೆರವೇರಿತು. ಬೆಸ್ಕಾಂ ವತಿಯಿಂದ ಸೂಕ್ತ ಪರಿಹಾರದ ಭರವಸೆ ಮೃತರ ಕುಟುಂಬದವರಿಗೆ ಸಿಕ್ಕಿದೆ ಎಂದು ಬೆಸ್ಕಾಂ ಮೂಲಗಳು ತಿಳಿಸಿದೆ.

ಲಕ್ಷ್ಮೀ ನರಸಿಂಹ ಬ್ರಹ್ಮರಥೋತ್ಸವ
ಮುಳಬಾಗಲು:
ತಾಲೂಕಿನ ಕದರೀಪುರ ಗ್ರಾಮದ ಲಕ್ಷ್ಮೀ ನರಸಿಂಹ ಬ್ರಹ್ಮರಥೋತ್ಸವ ಭಾನುವಾರ ನಡೆಯಲಿದೆ.  ಕಾಮನ ಹುಣ್ಣೆಮೆ ಯಂದು ಮೂಲ ದೇವರಿಗೆ ಪಂಚಾಮೃತಾಭಿಷೇಕ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.