'ಬಲಗೈ ಸಮುದಾಯಕ್ಕೆ ಬಿಜೆಪಿಯಿಂದ ಅನ್ಯಾಯವಾಗಿಲ್ಲ'
ಕೋಲಾರ: ಇತ್ತೀಚೆಗೆ ಕೆಲ ವ್ಯಕ್ತಿಗಳು ಬಿಜೆಪಿ ಮುಖಂಡರು ಬಲಗೈ ಸಮುದಾಯಕ್ಕೆ ಅನ್ಯಾಯ ಮಾಡುತ್ತಿದ್ದಾರೆಂದು ಆರೋಪಿಸಿರುವುದರಲ್ಲಿ ಸತ್ಯಾಂಶವಿಲ್ಲವೆಂದು ಎಸ್.ಸಿ. ಮೋರ್ಚಾ ಜಿಲ್ಲಾಧ್ಯಕ್ಷ ರಾಮಸಂದ್ರ ನಾಗರಾಜ್ ಸ್ಪಷ್ಟಪಡಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಜಿಲ್ಲೆಯ ಬಲಗೈ ಜನಾಂಗಕ್ಕೆ ಅತಿ ಹೆಚ್ಚಿನ ಸ್ಥಾನ ಮಾನಗಳನ್ನು ನೀಡಿ ಬಲಗೈ ಜನಾಂಗದ ಪರವಾಗಿ ಬಿಜೆಪಿ ನಿಂತಿದೆ. ಡಿ.ಎಸ್. ವೀರಯ್ಯನವರಿಗೆ ಎರಡು ಬಾರಿ ಲೋಕಸಭೆಗೆ ಸ್ಪರ್ಧಿಸಲು ಅವಕಾಶ ನೀಡಲಾಗಿದೆ, ಎರಡು ಬಾರಿ ವಿಧಾನಪರಿಷತ್ತಿಗೆ ಸದಸ್ಯರನ್ನಾಗಿ ಮಾಡಿರುವುದಲ್ಲದೆ ಅಂಬೇಡ್ಕರ್ ಅಭಿವೃದ್ಧಿ ನಿಗಮದ ರಾಜ್ಯಾಧ್ಯಕ್ಷರಾಗಲು ಬಿಜೆಪಿಯೇ ಕಾರಣವೆಂದು ತಿಳಿಸಿದ್ದಾರೆ.
ಬಂಗಾರಪೇಟೆ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಬಿ.ಪಿ. ವೆಂಕಟಮುನಿಯಪ್ಪ,ಮಾಜಿ ಶಾಸಕ ವೈ. ಸಂಪಂಗಿ, ವೈ. ರಾಮಕ್ಕ, ಜಿಪಂ ಸದಸ್ಯರಾದ ಮುತ್ಯಾಲಮ್ಮ, ಯಲ್ಲಮ್ಮ, ಎಸ್.ಸಿ. ಮೋರ್ಚಾ ಜಿಲ್ಲಾಧ್ಯಕ್ಷರಾಗಿದ್ದ ಸಿ. ವೆಂಕಟೇಶ್ ಹಾಗೂ ಹಾಲಿ ಎಸ್.ಸಿ. ಮೋರ್ಚಾ ಜಿಲ್ಲಾಧ್ಯಕ್ಷರಾಗಿರುವ ತಾವು ಇದೇ ಸಮುದಾಯಕ್ಕೆ ಸೇರಿದ್ದು ಇಷ್ಟೊಂದು ಅವಕಾಶ ಬೇಕೆ ಯಾವುದೇ ಪಕ್ಷದವರು ನೀಡಿಲ್ಲವೆಂಬುದನ್ನು ಅರ್ಥ ಮಾಡಿಕೊಳ್ಳುವಂತೆ ವೀರಯ್ಯ ಪರವಾಗಿ ಹೇಳಿಕೆ ನೀಡಿರುವವರಿಗೆ ತಿರುಗೇಟು ನೀಡಿದ್ದಾರೆ. ಮಾಜಿ ಶಾಸಕ ಎಂ. ನಾರಾಯಣಸ್ವಾಮಿ ಅವರು ವಲಸಿಗರಲ್ಲ, ಬಿಜೆಪಿ ಸರ್ಕಾರ ಉಳಿಸಿಕೊಳ್ಳಲು ಪಕ್ಷದ ನಾಯಕರೇ ಅವರನ್ನು ಕರೆ ತಂದು ಉಪಚುನಾವಣೆಯಲ್ಲಿ ಗೆಲ್ಲಿಸಿದ್ದಾರೆಂದು ಹೇಳಿರುವ ರಾಮಸಂದ್ರ ನಾಗರಾಜ್, ಸೂಕ್ತವಾದ ಮಾಹಿತಿ ಇಲ್ಲದೆ ಅನಗತ್ಯವಾಗಿ ಆರೋಪಗಳು ಮಾಡುತ್ತಿರುವುದರಿಂದ ಪಕ್ಷಕ್ಕೆ ಹಾನಿ ಆಗುವುದರಿಂದ ಇನ್ನು ಮುಂದೆ ಈ ರೀತಿಯ ಹೇಳಿಕೆಗಳನ್ನು ನೀಡದಂತೆ ತಿಳಿಸಿದ್ದಾರೆ.
ತಾಲೂಕು ಎಸ್.ಸಿ. ಮೋರ್ಚಾ ಅಧ್ಯಕ್ಷ ಸಂಗೊಂಡಹಳ್ಳಿ ವೈ. ಚಂದ್ರಶೇಖರ್, ಶ್ರೀನಿವಾಸಪುರದ ಶ್ರೀನಾಥ್ ಬಾಬು, ಮುತ್ತು ಜಿಲ್ಲಾ ಕಾರ್ಯದರ್ಶಿ ಮುದುವಾಡಿ ಶ್ರೀನಿವಾಸ್, ಜಿಲ್ಲಾ ಕಾರ್ಯದರ್ಶಿ ಅಂಬರೀಶ್, ಜಿಲ್ಲಾ ಸ್ಲಂ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಗಾಂಧಿನಗರ ರವಿ, ಮಾಲೂರು ಅಧ್ಯಕ್ಷ ಬಿ. ವೆಂಕಟೇಶ್, ಜಿಲ್ಲಾ ಕೋಶಾಧ್ಯಕ್ಷ ವೆಂಕಟರಾಯಪ್ಪ ಹಾಗೂ ಮತ್ತಿತರರು ಸಹ ಬಿಜೆಪಿ ಬಲಗೈ ವಿರೋಧಿಯಲ್ಲವೆಂದು ಸ್ಪಷ್ಟಪಡಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

