ಪತಿ ಮನೆಯವರ ಕಿರುಕುಳ; ಗೃಹಿಣಿ ಆತ್ಮಹತ್ಯೆ
ಕೆಜಿಎಫ್: ಪತಿ ಹಾಗೂ ಆತನ ಕುಟುಂಬದವರು ನೀಡುತ್ತಿದ್ದ ಕಿರುಕುಳ ತಾಳಲಾರದೆ ಗೃಹಣಿಯೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಾಂಪಿಯನ್‌ರೀಫ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಸಕ್ಕನಹಳ್ಳಿ ಗ್ರಾಮದ ರತ್ನಮ್ಮ ಎಂಬುವರ ಮಗಳಾದ ಕಳಾವತಿ(32)ರನ್ನು ಉತ್ತರಹಳ್ಳಿ ಗ್ರಾಮದ ರಾಮಕೃಷ್ಣ ಎಂಬುವರೊಂದಿಗೆ 10 ವರ್ಷಗಳ ಹಿಂದೆ ಮದುವೆ ಮಾಡಿಕೊಡಲಾಗಿತ್ತು. ಇತ್ತೀಚಿನ ದಿನಗಳಲ್ಲಿ ಪತಿ ರಾಮಕೃಷ್ಣ, ಅತ್ತೆ ಲಕ್ಷ್ಮಮ್ಮ, ಮಾವ ವೆಂಕಟೇಶಪ್ಪ ಕಳಾವತಿಗೆ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡುತ್ತಿದ್ದು ತಮ್ಮ ತವರು ಮನೆಗೆ ಹೊರಟು ಹೋಗು ಎಂದು ಪೀಡಿಸುತ್ತಿದ್ದರು ಎಂದು ತಿಳಿಸಲಾಗಿದೆ. ಈ ಬಗ್ಗೆ ಕಳಾವತಿ ಪೋಷಕರಿಗೆ ತಿಳಿಸಿದ್ದು ಅವರು ಆಗಾಗ ಬಂದು ಪಂಚಾಯಿತಿ ನಡೆಸಿ ಇಬ್ಬರಿಗೂ ಸಮಾಧಾನ ಪಡಿಸಿ ಹೋಗುತ್ತಿದ್ದರು. ಮಾ.11 ರಂದು ಗಂಡ ಹೆಂಡತಿಗೆ ಜಗಳವಾಗಿದ್ದು ಕಳಾವತಿ ಮನೆಯಿಂದ ನಾಪತ್ತೆಯಾಗಿದ್ದರು. ಈ ಬಗ್ಗೆ ಎಲ್ಲಾ ಕಡೆ ಹುಡಿಕಿದರು ಪತ್ತೆಯಾಗದ ಕಾರಣ ಬೆಮೆಲ್‌ನಗರ ಠಾಣೆಯಲ್ಲಿ ದೂರು ನೀಡಲಾಗಿತ್ತು. ಚಾಂಪಿಯನ್‌ರೀಫ್ ವ್ಯಾಪ್ತಿಯ ವಲಗಮಾದಿ ದೊಡ್ಡ ಬೆಟ್ಟದ ಮೇಲೆ ಕಳಾವತಿ ಮರದ ಕೊಂಬೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಮೃತ ಕಳಾಲತಿ ತಾಯಿ ರತ್ನಮ್ಮ ಅವರು ನೀಡಿರುವ ದೂರಿನ ಮೇರೆಗೆ ಗಂಡ ರಾಮಕೃಷ್ಣ, ಅತ್ತೆ ಲಕ್ಷ್ಮಮ್ಮ ಮಾವ ವೆಂಕಟೇಶಪ್ಪ ವಿರುದ್ಧ ಪ್ರಕರಣ ದಾಖಲಿಸಿಕೊಂಡ ಚಾಂಪಿಯನ್‌ರೀಫ್ ಠಾಣಾ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಮನೆ ಬೀಗ ಮುರಿದು ಕಳವು
ಕೆಜಿಎಫ್: ಮನೆಯ ಬೀಗ ಮುರಿದು ಒಳ ಪ್ರವೇಶಿಸಿದ ಕಳ್ಳರು ಬೀರುವಿನಲ್ಲಿಟ್ಟಿದ್ದ ನಗದು ಮತ್ತು ಚಿನ್ನದ ಒಡವೆಗಳನ್ನು ಕಳವು ಮಾಡಿ ಪರಾರಿಯಾಗಿರುವ ಘಟನೆ ರಾಬರ್ಟ್‌ಸನ್‌ಪೇಟೆ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಗಾಂಧಿನಗರದ ರಮಣಿ ಎಂಬವರ ಮನೆಯ ಬೀಗ ಮುರಿದು ಒಳ ಪ್ರವೇಶಿಸಿದ ಕಳ್ಳರು ಬೀರುವಿನಲ್ಲಿಟ್ಟಿದ್ದ ನಗದು ಹಾಗೂ ಚಿನ್ನದ ಒಡವೆಗಳು ಸೇರಿದಂತೆ ಸುಮಾರು 23 ಸಾವಿರ ಬೆಲೆ ಬಾಳುವುದನ್ನು ಕಳವು ಮಾಡಿದ್ದಾರೆ ಎಂದು ರಮಣಿ ರಾಬರ್ಟ್‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

