ಪರಮಶಿವಯ್ಯ ವರದಿ ಜಾರಿಗೆ ಒತ್ತಾಯ
ಚಿಂತಾಮಣಿ: ಬಯಲುಸೀಮೆಯ 72 ತಾಲೂಕುಗಳ ಜನತೆಗೆ ಶಾಶ್ವತ ನೀರಾವರಿ ಸೌಲಭ್ಯ ಒದಗಿಸಲು ಡಾ.ಪರಮಶಿವಯ್ಯ ವರದಿಯನ್ನು ನೀಡಿರುವ ಪರಮಶಿವಯ್ಯನವರ ಕೊಡುಗೆ ಈ ಭಾಗದ ಜನತೆಗೆ ಅಪಾರವಾಗಿದೆಯೆಂದು ರಾಯಲ್ ರಾಮಕೃಷ್ಣಾ ತಿಳಿಸಿದ್ದಾರೆ. ಪಟ್ಟಣದ ರಾಯಲ್ ಶಾಲೆಯ ಆಡಿಟೋರಿಯಂನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಪರಮಶಿವಯ್ಯನವರ ಅಗಲಿಕೆಯಿಂದ ಬಯಲುಸೀಮೆಯ ಜನತೆಗೆ ತುಂಬಲಾರದ ನಷ್ಟ ಉಂಟಾಗಿದ್ದು ಹಾಗೂ ಶಾಶ್ವತ ನೀರಾವರಿ ಹೋರಾಟಕ್ಕೆ ಹಗಲಿರುಳು ದುಡಿದಿರುವ ಇಂತಹವರ ಕನಸನ್ನು ಸರ್ಕಾರಗಳು ಇನ್ನಾದರೂ ನನಸು ಮಾಡಿ, ಡಾ.ಪರಮಶಿವಯ್ಯ ವರದಿಯಂತೆ ಶಾಶ್ವತ ನೀರಾವರಿ ಯೋಜನೆಯನ್ನು ಜಾರಿಗೆ ತರಬೇಕೆಂದು ಆಗ್ರಹಿಸಿದರು.
ಪಶ್ಚಿಮ ಘಟ್ಟಗಳಿಂದ ವ್ಯರ್ಥವಾಗಿ ಹರಿದು ಸಮುದ್ರ ಪಾಲಾಗುವ ನೀರನ್ನು ಪರಮಶಿವಯ್ಯ ವರದಿಯಾಧಾರಿತ ಬಯಲುಸೀಮೆಯ ಜನತೆಗೆ ನೀಡಲು ಕಳೆದ ಮೂರು ದಶಕಗಳಿಂದ ವರದಿ ತಯಾರಿಸಿ ಈ ಭಾಗದ ಜನತೆಗೆ ಲೋಕಾರ್ಪಣೆ ಮಾಡಿದ್ದು, ಅಂತಹ ಮಹನೀಯರ ಕೊಡುಗೆ ಅಪಾರವಾಗಿದೆ. ಅವರ ಕನಸು ಸಾಕಾರಗೊಳ್ಳುವುದಾದರೆ 72 ತಾಲೂಕುಗಳಲ್ಲಿನ ನಿರುದ್ಯೋಗಗಳಿಗೆ ದೊರೆಯಲಿವೆ ಎಂದರು.
ಶಾರ್ಟ್ ಸರ್ಕೀಟ್ನಿಂದ ಬೆಂಕಿ: ಲಕ್ಷಾಂತರ ರು. ನಷ್ಟ
ಚಿಂತಾಮಣಿ: ವಿದ್ಯುತ್ ಶಾರ್ಟ್ ಸರ್ಕಿಟ್ನಿಂದ ಬೆಂಕಿ ಹತ್ತಿಕೊಂಡ ಪರಿಣಾಮ ಲಕ್ಷಾಂತರ ರು. ಮೌಲ್ಯದ ಗೃಹೋಪಯೋಗಿ ವಸ್ತುಗಳು ಸುಟ್ಟಿರುವ ಘಟನೆ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಚೊಕ್ಕರೆಡ್ಡಿಹಳ್ಳಿ ಗ್ರಾಮದಲ್ಲಿ ಸೋಮವಾರ ನಡೆದಿದೆ.
ಗ್ರಾಮದ ಶ್ರೀನಿವಾಸರೆಡ್ಡಿ ಎಂಬವರಿಗೆ ಸೇರಿದ ವಸ್ತುಗಳೇ ನಾಶವಾಗಿವೆ. ಗ್ರಾಮದಲ್ಲಿ ಕಳೆದ 2 ದಿನಗಳಿಂದ ವಿದ್ಯುತ್ ಏರುಪೇರು ಆಗುತ್ತಿರುವ ಬಗ್ಗೆ ಬೆಸ್ಕಾಂ ಅಧಿಕಾರಿಗಳು ಯಾವುದೇ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಈ ಅನಾಹುತ ಸಂಭವಿಸಿದೆ. ಗೃಹೋಪಯೋಗಿ ವಸ್ತುಗಳಾದ ಟಿ.ವಿ, ಮಿಕ್ಸಿ, ಪ್ರಿಡ್ಜ್ ಹಾಗೂ ಬಿರುವಿನಲ್ಲಿದ್ದ ಭೂದಾಖಲೆಗಳು, ನಗದು ಹಣ, ಬಟ್ಟೆಗಳು, ಚಿನ್ನದ ಆಭರಣಗಳು ಸೇರಿದಂತೆ ಸುಮಾರು 20 ಲಕ್ಷದಷ್ಟು ನಷ್ಟ ಉಂಟಾಗಿದೆಯೆಂದು ಮನೆಯ ಮಾಲೀಕರು ದೂರಿನಲ್ಲಿ ತಿಳಿಸಿದ್ದಾರೆ. ತಕ್ಷಣ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ. ಗ್ರಾಮದ ನಾಗರಾಜ್, ಮಂಜುನಾಥ್, ನಾರಾಯಣಸ್ವಾಮಿ, ಮಲ್ಲಿಕಾರ್ಜುನ, ರಾಘವ ಸೇರಿದಂತೆ 10 ಮನೆಗಳಿಗೂ ಹೆಚ್ಚು ಶಾರ್ಟ್ ಸರ್ಕಿಟ್ ಉಂಟಾಗಿದ್ದು, ಇದಕ್ಕೆ ಬೆಸ್ಕಾಂ ಹೊಣೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

