'ವಾಲ್ಮೀಕಿ ಸಮುದಾಯ ಸಂಘಟಿತವಾಗಲಿ'
ಮಾಲೂರು: ಅತಿ ಹಿಂದುಳಿದಿರುವ ವಾಲ್ಮೀಕಿ ಸಮುದಾಯವು ಸಮಾಜದ ಮುಖ್ಯವಾಹಿನಿಗೆ ಬರಬೇಕಾದರೆ ಜನಾಂಗದವರು ಸಂಘಟಿತರಾಗುವ ಮನೋಭಾವ ಪ್ರದರ್ಶಿಸಬೇಕು ಎಂದು ಕರ್ನಾಟಕ ಮದಕರಿ ನಾಯಕ ಸೇನೆ ತಾಲೂಕು ಅಧ್ಯಕ್ಷ ವಾಟರ್ ನಾರಾಯಣಸ್ವಾಮಿ ಹೇಳಿದರು.
ತಾಲೂಕಿನ ಕಣ್ಣೀವೇನಹಳ್ಳಿ ಗ್ರಾಮದಲ್ಲಿ ಪ್ರಾರಂಭಿಸಿರುವ ನೂತನ ಘಟಕದ ಪದಾಧಿಕಾರಿಗಳ ಆಯ್ಕೆ ಮಾಡಿದ ನಂತರ ಮಾತನಾಡಿ, ಹೆಚ್ಚಿನ ರೀತಿಯಲ್ಲಿ ಬಡತನದಲ್ಲಿರುವ ವಾಲ್ಮೀಕಿ ಸಮುದಾಯದವರು ಸಮುದಾಯದ ಸಂಘಟನೆಗಳಲ್ಲಿ ತಪ್ಪದೇ ಭಾಗವಹಿಸಿಕೊಂಡು ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಅಭಿವೃದ್ಧಿಯಾಗಬೇಕು.
ಸರ್ಕಾರದ ಸವಲತ್ತುಗಳನ್ನು ಪಡೆಯಬೇಕಾದರೆ ಸಂಘಟನೆ ಶಕ್ತಿಯುಕ್ತವಾಗಿ ಬೆಳೆಯಬೇಕಾಗಿದೆ ಎಂದರು.
ಇದೇ ವೇಳೆ ಕಣ್ಣೀವೇನಹಳ್ಳಿ ಗ್ರಾಮದ ಘಟಕದ ಅಧ್ಯಕ್ಷರಾಗಿ ಲಕ್ಷ್ಣಣ್ ನಾಯಕ್, ಗೌರವಾಧ್ಯಕ್ಷ ಕೆ.ಟಿ.ಚಂದ್ರಶೇಖರ್, ಉಪಾಧ್ಯಕ್ಷ ಶ್ರೀನಿವಾಸ್ ಬಡಗಿ,ಖಜಾಂಚಿ ಮುನಿರಾಜು,ಪ್ರಧಾನ ಕಾರ್ಯದರ್ಶಿ ಟೈಲರ್ ಶ್ರೀನಿವಾಸ್, ಸಹ ಕಾರ್ಯದರ್ಶಿ ತಿಮ್ಮರಾಯನಾಯಕ,ಸ ಂಚಾಲಕ ಕೆ.ರಾಜು, ಸಹ ಸಂಚಾಲಕ ಕೆ.ವಿ.ರಾಜ ತಾಳುಕುಂಟೆ ಟಿ.ವಿ.ಮುನಿಯಪ್ಪ ಇದ್ದರು.
ಶರೀಫರ ಆದರ್ಶ ಸಮಾಜಕ್ಕೆ ಪ್ರಸ್ತುತ: ನರಸಿಂಹಮೂರ್ತಿ
ತಿಪಟೂರು: ತಾಲೂಕು ನಿವೃತ್ತ ನೌಕರರ ಸಂಘದ ಮಾಸಿಕ ಸಭೆಯನ್ನು ಸಂಘದ ಅಧ್ಯಕ್ಷರಾದ ಜಿ.ಟಿ. ಶಂಕರೇಗೌಡರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು. ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಶಿಶುನಾಳ ಶರೀಫರ ತತ್ವಪ್ರಚಾರಕರು ಹಾಗೂ ಕಾರ್ಖಾನೆಗಳ ನಿರ್ದೇಶಕರ ಕಚೇರಿ ವ್ಯವಸ್ಥಾಪಕರಾದ ಎಂ.ಸಿ. ನರಸಿಂಹಮೂರ್ತಿಯವರು ಶರೀಫರ ತತ್ವಗಳು ಪ್ರಸ್ತುತ. ಪ್ರತಿಯೊಬ್ಬರು ಅವರ ತತ್ವಾದರ್ಶಗಳನ್ನು ಅಳವಡಿಸಿಕೊಳ್ಳಬೇಕೆಂದರು. ಅವರು ನಿವೃತ್ತ ನೌಕರರ ಸಾಧನೆ ಕುರಿತು ಪದಗಳನ್ನು ಹಾಡಿದರು. ಸಂಘದ ಸದಸ್ಯ ಚಂದ್ರಶೇಖರ ಚಿ. ತೋಟದ ತತ್ವ ಪ್ರಚಾರಕರಾದ ಎಂ.ಸಿ.ನರಸಿಂಹಮೂರ್ತಿ ಕಿರುಪರಿಚಯ ಮಾಡಿಕೊಟ್ಟರು. ಸುಮಾರು 3ಸಾವಿರಕ್ಕೂ ಹೆಚ್ಚು ಪ್ರವಚನಗಳನ್ನು ಅವರು ನೀಡಿದ್ದಾರೆಂದು ತಿಳಿಸಿದರು. ಸಂಘದ ವತಿಯಿಂದ ಎಂ.ಸಿ. ನರಸಿಂಹಮೂರ್ತಿಯವರನ್ನು ಸನ್ಮಾನಿಸಲಾಯಿತು. ಸಂಘದ ಪದಾಧಿಕಾರಿ ವೆಂಕಟರಾಮಯ್ಯ ಸ್ವಾಗತಿಸಿ, ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

