ಸಮಾಜ ಪರಿವರ್ತನೆ ಡಿ.ವಿ. ಗುಂಡಪ್ಪ ಕನಸು
ಕೋಲಾರ: ಡಿ.ವಿ.ಗುಂಡಪ್ಪ ಅವರು ಪತ್ರಿಕೋದ್ಯಮದಲ್ಲಿ ವಿಶೇಷವಾದ ಛಾಪು ಹೊಂದಿದ್ದ ಅತ್ಯುತ್ತಮ ಪತ್ರಕರ್ತರಾಗಿದ್ದರು, ಸಮಾಜವನ್ನು ತಿದ್ದುವುದು ಡಿವಿಜಿಯ ಮುಖ್ಯ ಉದ್ದೇಶವಾಗಿತ್ತು ಎಂದು ಬೆಂಗಳೂರಿನ ವಿಜಯ ಕಾಲೇಜು ಕನ್ನಡ ವಿಭಾಗ ಮುಖ್ಯಸ್ಥ ಡಾ.ಎಸ್.ಎಲ್.ಶ್ರೀನಿವಾಸಮೂರ್ತಿ ಅಭಿಪ್ರಾಯಪಟ್ಟರು.
ಡಿವಿಜಿ ಜಯಂತಿ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು, ಡಿವಿಜಿ ಪತ್ರಕರ್ತರಾಗಿದ್ದು ಹವ್ಯಾಸಕ್ಕಾಗಿ ಮಾತ್ರವಲ್ಲದೆ ಹೊಟ್ಟೆ ಪಾಡಿಗಾಗಿ. ಆದರೆ, ತಮ್ಮ ವೃತ್ತಿ ಜೀವನದಲ್ಲಿ ಯಾವುದೇ ಕಳಂಕಕ್ಕೆ ಅವಕಾಶ ನೀಡದೆ ಸಾರ್ಥಕತೆ ಕಂಡುಕೊಂಡ ಧೀಮಂತ ವ್ಯಕ್ತಿ ಎಂದು ಬಣ್ಣಿಸಿದರು.
ಡಿವಿಜಿ ಹಳೆಯ ಮತ್ತು ಹೊಸ ತಲೆಮಾರಿನ ಕೊಂಡಿ ಎಂದು ಅಭಿಪ್ರಾಯಿಸಿದ ಅವರು, ರಾಜಪ್ರಭುತ್ವದ ಕಾಲದಲ್ಲೇ ಪತ್ರಕರ್ತರಾಗಿದ್ದ ಡಿವಿಜಿ ಹೊಂಗೆ ಎಣ್ಣೆಯ ದೀಪದಂತೆ ಕೆಲಸ ನಿರ್ವಹಿಸಿದರೆ, ಮತ್ತೊಬ್ಬ ಹಿರಿಯ ಪತ್ರಕರ್ತ ತೀ.ತಾ.ಶರ್ಮ ಉರಿಯುವ ಬೆಂಕಿಯ ಗೋಳವಾಗಿದ್ದರು. ನೇರ, ನಿಷ್ಠೂರ, ಪ್ರಾಮಾಣಿಕ ಪತ್ರಕರ್ತರಾಗಿದ್ದ ಡಿ.ವಿ.ಗುಂಡಪ್ಪ ಅವರ ರೀತಿಯಲ್ಲೇ ಯುವ ಪತ್ರಕರ್ತರು ಸಾಧನೆ ಮಾಡಬೇಕು ಎಂದು ಕಿವಿಮಾತು ಹೇಳಿದರು.
ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ.ಗೋಪಿನಾಥ್ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಸಮಿತಿ ಸದಸ್ಯ ವಾಸುದೇವಹೊಳ್ಳ, ರಾಷ್ಟ್ರೀಯ ಸಮಿತಿ ಸದಸ್ಯ ವಿಶ್ವಕುಂದಾಪುರ, ಜಿಲ್ಲಾ ಸಮಿತಿ ಕಾರ್ಯದರ್ಶಿ ಸುರೇಶ್ಕಪಮಾರ್ ಮತ್ತಿತರರು ಉಸಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಕೆ.ಎಸ್.ಗಣೇಶ್ ರೂಪಿಸಿದರು. ಪಾ.ಶ್ರೀ. ಅನಂತರಾಮ್ ಸ್ವಾಗತಿಸಿದರು. ಅಬ್ಬಣಿ ಶಂಕರ್ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

